ಬಂಡಾಯ ನೆಲ ನರಗುಂದದಲ್ಲಿ ಇಂದು ರೈತ ಸಮಾವೇಶ

ರೈತ ಸೇನಾ ಕರ್ನಾಟಕ ಹಾಗೂ ಮಹದಾಯಿ ಹೋರಾಟ ಸಮಿತಿ ಆಶ್ರಯದಲ್ಲಿ ಮಾ. 17ರಂದು ಮಧ್ಯಾಹ್ನ 3-30ಕ್ಕೆ ರೈತ ಸಮಾವೇಶ ನಡೆಯಲಿದ್ದು, ಇದಕ್ಕಾಗಿ ತಾಲೂಕು ನ್ಯಾಯಾಲಯದ ಹಿಂದೆ ಇರುವ ನೀರಾವರಿ ಜಾಗೆಯಲ್ಲಿ ಬೃಹತ್‌ ವೇದಿಕೆ ಸಿದ್ಧವಾಗಿದೆ. ತಾಲೂಕು ಸೇರಿ​ದಂತೆ ಸುತ್ತಲಿನ ವಿವಿಧ ತಾಲೂಕಿನಿಂದ ರೈತರು, ರೈತ ಮಹಿಳೆಯರು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ.

Farmers convention  today iat Naragunda gadag rav

ವಿಶೇಷ ವರದಿ

ನರಗುಂದ (ಮಾ.17) : ರೈತ ಸೇನಾ ಕರ್ನಾಟಕ ಹಾಗೂ ಮಹದಾಯಿ ಹೋರಾಟ ಸಮಿತಿ ಆಶ್ರಯದಲ್ಲಿ ಮಾ. 17ರಂದು ಮಧ್ಯಾಹ್ನ 3-30ಕ್ಕೆ ರೈತ ಸಮಾವೇಶ ನಡೆಯಲಿದ್ದು, ಇದಕ್ಕಾಗಿ ತಾಲೂಕು ನ್ಯಾಯಾಲಯದ ಹಿಂದೆ ಇರುವ ನೀರಾವರಿ ಜಾಗೆಯಲ್ಲಿ ಬೃಹತ್‌ ವೇದಿಕೆ ಸಿದ್ಧವಾಗಿದೆ. ತಾಲೂಕು ಸೇರಿ​ದಂತೆ ಸುತ್ತಲಿನ ವಿವಿಧ ತಾಲೂಕಿನಿಂದ ರೈತರು, ರೈತ ಮಹಿಳೆಯರು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ.

ರೈತ ಹೋರಾಟದಲ್ಲಿ ನರಗುಂದ ತನ್ನದೆ ಇತಿಹಾಸ ಹೊಂದಿದೆ. 1857ರಲ್ಲಿ ನರಗುಂದ ನಾಡಿನ ಅರಸ ವೀರ ಬಾಬಾಸಾಹೇಬ ಭಾವೆಯವರು ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿ ಬ್ರಿಟಿಷ್‌ ಅಧಿಕಾರಿ ರುಂಡ ಕಡಿದು ಅಗಸಿ ಬಾಗಿಲಿಗೆ ತೂಗು ಹಾಕಿದರೆ, ಮುಂದೆ ಮಲಪ್ರಭೆ ಜಲಾಶಯದಿಂದ ಪೂರೈಕೆ ಆಗುವ ನೀರಿನ ಕರ ತುಂಬಬೇಕೆಂದು ಸರ್ಕಾರ ಆದೇಶ ಮಾಡಿ ರೈತರ ಮನೆ ಜಪ್ತಿ ಮಾಡಲು ಪ್ರಾರಂಭ ಮಾಡಿದಾಗ ಈ ನಾಡಿನ ರೈತರು ಸರ್ಕಾರದ ವಿರುದ್ಧ ಹೋರಾಟಕ್ಕೆ ಇಳಿದು ಪೊಲೀಸರ ಗುಂಡಿಗೆ ಚಿಕ್ಕನರಗುಂದ ರೈತ ಈರಪ್ಟಕಡ್ಲಕೊಪ್ಪ ಬಲಿಯಾದ ನಂತರ ರೈತರು ಸರ್ಕಾರವನ್ನೆ ಕಿತ್ತು ಹಾಕಿ ರೈತ ಶಕ್ತಿ ಏನು ಎನ್ನುವುದನ್ನು ಈ ದೇಶಕ್ಕೆ ತಿಳಿಸಿ ಕೊಟ್ಟರು.

ಕಾಂಗ್ರೆಸ್ ಕಾರ್ಯಕರ್ತರಿಗೆ ಸ್ವಾಭಿಮಾನ ಇದ್ದರೆ ರಾಹುಲ್ ಗಾಂಧಿಯನ್ನ ವಿರೋಧಿಸಿ: ಕೇಂದ್ರ ಸಚಿವೆ ಸ್ಮೃತಿ ಇರಾನಿ

ನಮ್ಮ ನೆಲದ ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಹಳ್ಳಗಳಲ್ಲಿ ಹರಿಯುವ ನೀರಿನಲ್ಲಿ 14 ಟಿಎಂಸಿ ನೀರು ಮಲಪ್ರಭಾ ಅಚ್ಚುಕಟ್ಟು ಪ್ರದೇಶಕ್ಕೆ ನೀಡಬೇಕೆಂದು 2015ರ ಜೂ. 15ರಂದು ರೈತ ಸೇನಾ ಸಂಘಟನೆಯ ಅಧ್ಯಕ್ಷ ವೀರೇಶ ಸೊಬರದಮಠ ಹೋರಾಟ ಪ್ರಾರಂಭ ಮಾಡಿದ ನಂತರ ನಾಡಿನ ಮಠಾಧೀಶರು, ಚಿತ್ರ ನಟರು, ಸಾಹಿತಿಗಳು, ವಿವಿಧ ಕನ್ನಡಪರ ಸಂಘಟನೆಗಳು ಹೋರಾಟಕ್ಕೆ ಬೆಂಬಲ ನೀಡಿದ್ದರಿಂದ ಇದೊಂದು ರಾಷ್ಟ್ರ ಮಟ್ಟದ ಆಂದೋಲನವಾಗಿ ಮಹದಾಯಿ ವಿವಾದಕ್ಕೆ ನೇಮಕವಾದ ನ್ಯಾಯಧಿಕರಣದ ನ್ಯಾಯಾಧೀಶರು ಕುಡಿಯಲಿಕ್ಕೆ 7.5 ಟಿಎಂಸಿ ನೀರು ನೀಡಬೇಕಾಯಿತು.

ರೈತ ಸಮಾ​ವೇ​ಶ​ದಲ್ಲಿ ನಾಡಿನ ಮಠಾಧೀಶರು, ಚಿತ್ರನಟರು, ವಿವಿಧ ಹೋರಾಟಗಾರರು ಭಾಗವಹಿಸಲಿದ್ದಾರೆ. ಮಹದಾಯಿ ಹೋರಾಟ ಆರಂಭಿಸಿದ ಸರ್ವರಿಗೂ ಆಹ್ವಾನ ನೀಡಲಾಗಿದೆ. ನ್ಯಾಯ ಮಂಡಳಿಯಿಂದ ಹಂಚಿಕೆಯಾದ ನೀರನ್ನು ಒದಗಿಸಲು ಶೀಘ್ರ ಕಾಮಗಾರಿ ಆರಂಭಿಸಲು ಸಮಾವೇಶದಲ್ಲಿ ಹಕ್ಕೊತ್ತಾಯ ಮಂಡಿಸಲಾಗುವುದು ಎಂದು ತಿಳಿದು ಬಂದಿದೆ.

ಸ್ಮೃತಿ ಇರಾನಿ ಅವರ ಮಗಳ ಮದುವೆ ರಿಸೆಪ್ಷನ್‌ನಲ್ಲಿ ಶಾರುಖ್‌ ಖಾನ್‌; ಫೋಟೋ ವೈರಲ್‌

ಆಳುವ ಸರ್ಕಾರಗಳು ರೈತರ ಹೋರಾಟ ಪ್ರಾರಂಭ ಮಾಡಿ ಯೋಜನೆಯನ್ನು ಜಾರಿ ಮಾಡಿಸುವ ಹಂತಕ್ಕೆ ತಂದಿದ್ದಾರೆ, ಆದರೆ ಕೆಲವು ರಾಜಕೀಯ ಪಕ್ಷಗಳು ಈ ಯೋಜನೆ ತಮ್ಮ ಸರ್ಕಾರದಿಂದ ಜಾರಿಯಾಗುತ್ತಿದೆ ಎಂದು ಹೇಳುತ್ತಿರುವುದು ನೋವಿನ ಸಂಗತಿ. ಆದರೆ ಈ ನಾಡಿನ ಪ್ರತಿಯೊಬ್ಬ ವ್ಯಕ್ತಿಗೆ ಈ ಯೋಜನೆಯು ರೈತರು ಹೋರಾಟ ಮಾಡಿದ್ದರಿಂದ ಜಾರಿಯಾಗಿದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ.

ವೀರೇಶ ಸೊಬರದಮಠ, ರೈತ ಸೇನಾ ಸಂಘಟನೆಯ ರಾಜ್ಯ ಅಧ್ಯಕ್ಷ

Latest Videos
Follow Us:
Download App:
  • android
  • ios