ರೈತರೇ ಎಚ್ಚರ : ಮಾರಾಟವಾಗುತ್ತಿದೆ ನಕಲಿ ಗೊಬ್ಬರ
- ಗೊಬ್ಬರ ಖರೀದಿ ಮಾಡುವ ರೈತರೆ ಎಚ್ಚರ ಎಚ್ಚರ. ಮಾರುಕಟ್ಟೆಯಲ್ಲಿ ನಕಲಿ ಗೊಬ್ಬರ ಮಾರಾಟ
- ನಕಲಿ ಗೊಬ್ಬರದ ವಿಚಾರ ರೈತರೋರ್ವರಿಂದ ಬೆಳಕಿಗೆ
ರಾಯಚೂರು (ಸೆ.09): ಗೊಬ್ಬರ ಖರೀದಿ ಮಾಡುವ ರೈತರೆ ಎಚ್ಚರ ಎಚ್ಚರ. ಮಾರುಕಟ್ಟೆಯಲ್ಲಿ ನಕಲಿ ಗೊಬ್ಬರ ಮಾರಾಟವಾಗುತ್ತಿದೆ. ಈ ನಕಲಿ ಗೊಬ್ಬರದ ವಿಚಾರ ರೈತರೋರ್ವರಿಂದ ಬೆಳಕಿಗೆ ಬಂದಿದೆ. ಖರೀದಿ ಮಾಡುವಾಗ ಗೊಬ್ಬರ ಅಂಗಡಿ ಬಳಿಯೇ ಪರಿಶೀಲನೆ ಮಾಡಿ ಪಡೆಯುವುದು ಒಳಿತು.
ಅಸಲಿ ಗೊಬ್ಬರ ಚೀಲದಲ್ಲಿ ನಕಲಿ ಗೊಬ್ಬರ ಪ್ಯಾಕ್ ಮಾಡಿ ಮಾರಾಟ ಮಾಡಲಾಗುತ್ತಿದೆ. ಲಿಂಗಸೂಗೂರು ತಾ. ಗೋಲವಾಟ್ಲ ಗ್ರಾಮದ ರೈತನಿಗೆ ಈ ರೀತಿಯ ವಂಚನೆಯಾಗಿದೆ.
ಇನ್ಮುಂದೆ ಯೂರಿಯಾ ಗೊಬ್ಬರ ಕೊಳ್ಳಲು ಆಧಾರ್ ಕಾರ್ಡ್, ಪಹಣಿ ಕಡ್ಡಾಯ..!
ಹನುಮಂತ ಎಂಬ ರೈತ ಮೋಸ ಹೋಗಿದ್ದು ಲಿಂಗಸೂಗೂರಿನ ಬಸವಶ್ರೀ ಟ್ರೇಡರ್ಸ್ ನಲ್ಲಿ ಗೊಬ್ಬರ ಖರೀದಿ ಮಾಡಿದ್ದರು. ಗೊಬ್ಬರದ ಚೀಲ ಬಿಚ್ಚಿ ನೋಡಿದಾಗ ಗೊಬ್ಬರವೂ ಸಂಪೂರ್ಣ ಕಪ್ಪು ಬಣ್ಣದಲ್ಲಿದ್ದು, ಈ ವೇಳೆ ಗೊಬ್ಬರದ ಸಮೇತ ಖರೀದಿ ಮಾಡಿದ ಅಂಗಡಿಗೆ ರೈತ ಬಂದಿದ್ದಾರೆ.
ಅಂಗಡಿ ಮುಂದೆ ಗೊಬ್ಬರ ಸುರಿದು ತಮಗಾಗಿರುವ ಅನ್ಯಾಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.