Asianet Suvarna News Asianet Suvarna News

Chikkamagaluru: ದಯಾಮರಣ ಕೋರಿ ರಾಷ್ಟ್ರಪತಿಗೆ ರೈತರ ಮನವಿ : ಭೂಮಿ ಕೊಟ್ಟರೂ ಸಿಗದ ಪರಿಹಾರ

ಮಹತ್ವಾಕಾಂಕ್ಷಿ ಮಳಲೂರು ಏತ ನೀರಾವರಿ ಯೋಜನೆಗೆ ಗ್ರಹಣ 
ಭೂಮಿ ಕೊಟ್ಟ ರೈತರಿಗೆ 10 ವಷದಿಂದ ಪರಿಹಾರ-ನೀರು-ಬದಲಿ ಭೂಮಿ ಇಲ್ಲ
ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಬೇಡಿಕೊಂಡರೂ ಪ್ರಯೋಜನವಿಲ್ಲ

Farmers appeal to President for euthanasia Land is given but not received compensation money sat
Author
First Published Jan 9, 2023, 9:27 PM IST

ವರದಿ  : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿಕ್ಕಮಗಳೂರು (ಜ.09):  ಚಿಕ್ಕಮಗಳೂರು ಜಿಲ್ಲೆಯ ಮಹತ್ವಾಕಾಂಕ್ಷೆ ನೀರಾವರಿ ಯೋಜನೆಯೇ ಮಳಲೂರು ಏತ ನೀರಿವಾರಿ ಯೋಜನೆ.  ಈ ಯೋಜನೆಗೆಂದು ಕಾಲುವೆ ತೆಗೆದು ದಶಕವೇ ಕಳೆದಿದೆ. 10 ವಷದಿಂದ ಪರಿಹಾರ- ನೀರು- ಬದಲಿ ಭೂಮಿ ಯಾವುದೂ ಇಲ್ಲ. ಜನಪ್ರತಿನಿಧಿಗಳು-ಅಧಿಕಾರಿಗಳಿಗೆ ಬೇಡಿಕೊಂಡ್ರು ಪ್ರಯೋಜನವಿಲ್ಲ. ನೊಂದ ರೈತರು ರಾಷ್ಟ್ರಪತಿಗೆ ಪತ್ರ ಬರೆದು ದಯಾಮರಣಕ್ಕೆ ಬೇಡಿಕೊಂಡಿದ್ದಾರೆ. 

ರಾಷ್ಟ್ರಪತಿ ಸರ್ಕಾರ-ಜಿಲ್ಲಾಡಳಿತಕ್ಕೆ ಪತ್ರ ಬರೆದ್ರು ಆ ಲೆಟರ್ಗೆ ಬೆಲೆ ಇಲ್ಲ. ರಾಷ್ಟ್ರಪತಿಗೆ ಲೆಟ್ರು ಬರೆದಿದ್ದೀರಾ, ಅವರ ಬಳಿಯೇ ಹೋಗಿ ಅಂತಾರಂತೆ ಅಧಿಕಾರಿಗಳು. ಅದಕ್ಕೆ ಆ ರೈತರು ಮತ್ತೆ ದಯಾಮರಣ ಕೇಳಿ ಪತ್ರ ಬರೆಯಲು ಮುಂದಾಗಿದ್ದಾರೆ. ಚಿಕ್ಕಮಗಳೂರಿನ ಮಳಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಮೀನುಗಳಿಗೆ ನೀರೊದಗಿಸೋ ಮಹತ್ವಾಕಾಂಕ್ಷೆ ಮಳಲೂರು ಏತನೀರಾವರಿ ಯೋಜನೆ ಆಮೆಗತಿಯಲ್ಲಿ ಸಾಗುತ್ತಿದೆ. ಈ ಯೋಜನೆಗೆ 1998ರಲ್ಲೇ ಚಾಲನೆ ನೀಡಲಾಗಿದೆ. ಸುಮಾರು 1,480 ಎಕರೆ ಪ್ರದೇಶಕ್ಕೆ ನೀರೋದಗಿಸೋ ಯೋಜನೆ ಇದಾಗಿದ್ದು, ಈವರೆಗೆ ಭೂಸ್ವಾಧೀನ ಮಾಡಿಕೊಂಡ ರೈತರಿಗೆ ಪರಿಹಾರ ಸಿಕ್ಕಿಲ್ಲ. 

Chikkamagaluru: ಬೆಳಗ್ಗೆ ಹಣ್ಣು ವ್ಯಾಪಾರ, ರಾತ್ರಿ ಮನೆ ದರೋಡೆ: ಖತರ್ನಾಕ್‌ ಕಳ್ಳನ ಬಳಿ ಗನ್‌ ಪತ್ತೆ

ಹಾಳಾಗುತ್ತಿರುವ ಬಿದ್ದಿರುವ ವಸ್ತುಗಳು: 
ಮಳಲೂರು ಏತ ನೀರಿವಾರಿ ಯೋಜನೆಯ ಮೊದಲ ಹಂತದಲ್ಲಿ ಜಾಕ್ವೆಲ್, ಇಂಟೆಕ್ವೆಲ್, ಪೈಪ್‌ಗಳನ್ನು ಅಳವಡಿಸಿದ್ದರು. 2ನೇ ಹಂತದಲ್ಲಿ ಪಂಪ ಅಳವಡಿಕೆ, ವಿದ್ಯುತ್ ಕಾಮಗಾರಿ ಕೂಡ ನಡೆದಿದೆ. ಮೊದಲ ಹಂತ ಮತ್ತು ಎರಡನೇ ಹಂತದಲ್ಲಿ ನಡೆದ ಕಾಮಗಾರಿಗಳು ಇಂದು ಉಪಯೋಗಕ್ಕೆ ಬಾರದ ಸ್ಥಿತಿಗೆ ಬಂದಿವೆ. ಪಂಪ್‌ಹೌಸ್ ಪಾಳು ಬಿದ್ದಿದೆ. ಎಲೆಕ್ಟ್ರಿಕ್ ವಸ್ತುಗಳು ತುಕ್ಕು ಹಿಡಿಯುವ ಹಂತದಲ್ಲಿ ತಲುಪಿವೆ. ಪೈಪ್ ಒಡೆದು ನೀರು ಹೊರ ಹೋಗುತ್ತಿದೆ. 

ರೈತರಿಗೆ ಸಿಗದ ಪರಿಹಾರ:
ಈ ಯೋಜನೆಗಾಗಿ ಇಲ್ಲಿನ ರೈತರು ಕೃಷಿ ಭೂಮಿಯನ್ನೂ ನೀಡಿದ್ದಾರೆ. ಆದರೆ, ಬಹುತೇಕ ರೈತರಿಗೆ ಸರ್ಕಾರದಿಂದ ಪರಿಹಾರ ಬಂದಿಲ್ಲ. ಯೋಜನೆಗಾಗಿ ಮಳಲೂರು, ಕಂಬಿಹಳ್ಳಿ, ತಡರೂರು, ಕದ್ರಿಮಿದ್ರಿ ಗ್ರಾಮದ 19 ಎಕರೆ ಭೂಮಿಯನ್ನ ಜಿಲ್ಲಾಡಳಿತ ಸ್ವಾಧೀನಪಡಿಸಿಕೊಂಡಿದೆ. ಆದರೆ, ಸರ್ಕಾರ ಬಹುತೇಕ ರೈತರಿಗೆ ಭೂಮಿ ನೀಡಿದರೂ ಪರಿಹಾರ ನೀಡಿಲ್ಲ. ಪರಿಹಾರಕ್ಕಾಗಿ ರೈತರು ಕಚೇರಿಗಳಿಗೆ ಅಲೆದು ಚಪ್ಪಲಿ ಸವೆಸಿದರೋ ವಿನಃ ಪರಿಹಾರ ಮಾತ್ರ ಬರಲಿಲ್ಲ ಎಂದು ರೈತ ಸೋಮೇಗೌಡ ಬೇಸರ ವ್ಯಕ್ತಪಡಿಸಿದ್ದಾರೆ. 

Chikkamagaluru: ವಿಕ್ಟೋರಿಯಾ ರಾಣಿ ಕಾಲದ ಟೆಲಿಸ್ಕೋಪ್ ಮಾರಾಟಕ್ಕೆ ಯತ್ನ : ಓರ್ವನ ಬಂಧನ

ದಯಾಮರಣ ಕೋರಿ ರಾಷ್ಟ್ರಪತಿಗೆ ಪತ್ರ 
ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಬೇಜಾವಾಬ್ದಾರಿಗೆ ನೊಂದ ರೈತರು ದಯಾಮರಣ ಕೋರಿ ರಾಷ್ಟ್ರಪತಿಗೂ ಪತ್ರ ಬರೆದಿದ್ದಾರೆ. ರಾಷ್ಟ್ರಪತಿ ಕಚೇರಿಯಿಂದ ಸರ್ಕಾರಕ್ಕೆ ಪತ್ರ ಬಂದಿದೆ. ಸರ್ಕಾರದಿಂದ ಜಿಲ್ಲಾಡಳಿತಕ್ಕೂ ಲೆಟರ್ ಬಂದಿದೆ. ಆದರೆ, ಆ ಲೆಟರ್ಗೆ ಅಧಿಕಾರಿಗಳು ಕವಡೆ ಕಾಸಿನ ಕಿಮ್ಮತ್ತು ಕೊಡಲಿಲ್ಲ ಎಂದು ರೈತರು ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಅಧಿಕಾರಿಗಳಿಗೆ ಹೋಗಿ ಕೇಳಿದ್ರೆ ರಾಷ್ಟ್ರಪತಿಗೆ ಪತ್ರ ಬರೆದಿದ್ದೀರಾ. ಹೋಗಿ ಅಲ್ಲಿಗೆ ಹೋಗಿ, ಅವರ ಬಳಿಯೇ ಕೆಲಸ ಮಾಡಿಸಿಕೊಳ್ಳಿ ಅಂತಾರಂತೆ. ಇದೀಗ ರೈತರು, ಮತ್ತೆ ರಾಷ್ಟ್ರಪತಿಗೆ ಪತ್ರ ಬರೆದು ನ್ಯಾಯ ಕೊಡಿಸಿ ಇಲ್ಲ ದಯಾಮರಣಕ್ಕೆ ಅನುಮತಿ ನೀಡಿ ಎಂದು ಬೇಡಿಕೊಳ್ಳಲು ಮುಂದಾಗಿದ್ದಾರೆ.

ಜಮೀನು ಕಳೆದುಕೊಂಡು ನಿರ್ಗತಿಕರಾದ ರೈತರು:
ಈ ಯೋನೆಯಿಂದ ಜಮೀನು ಕಳೆದುಕೊಂಡ ರೈತರು ಇಂದು ನಿರ್ಗತಿಕರಾಗಿದ್ದಾರೆ. ಮಕ್ಕಳನ್ನ ಓದಿಸೋಕೆ ಆಗದಂತಹ ಸ್ಥಿತಿ ನಿರ್ಮಾಣವಾಗಿದೆ. ನಮ್ಮ ಭೂಮಿಗೆ ನಮಗೆ ಪರಿಹಾರ ಕೊಡಿ, ನಮ್ಮ ಬದುಕು ನಾವು ನೋಡಿಕೊಳ್ಳುತ್ತೇವೆ ಎಂದರೆ ಸರ್ಕಾರ ಪರಿಹಾರ ನೀಡದ ಕಾರಣ ರೈತರು ಮತ್ತೆ ದಯಾಮರಣ ಕೋರಿ ರಾಷ್ಟ್ರಪತಿಗೆ ಪತ್ರ ಬರೆಯಲು ಮುಂದಾಗಿದ್ದಾರೆ. ಒಟ್ಟಾರೆ, ನೀರು ಬರುತ್ತೆ ಅಂತ ಜನ ಜಮೀನು ನೀಡಿದ್ದರು. ದಶಕಗಳೇ ಕಳೆದರೂ ನೀರು ಬರಲಿಲ್ಲ. ಕಾಮಗಾರಿಯೂ ಪೂರ್ಣವಾಗಲಿಲ್ಲ. ಜಮೀನು ಕೊಟ್ಟ ಕೆಲವರಿಗೆ ಪರಿಹಾರವು ಇಲ್ಲ. ಇರೋ ಅಲ್ಪ ಭೂಮಿಯಲ್ಲಿ ಬೆಳೆ ಬೆಳೆಯೋಕು ಸಾಧ್ಯವಾಗ್ತಿಲ್ಲ. ದಶಕಗಳಿಂದ ನೊಂದ ರೈತರು ಸರ್ಕಾರ ಕೂಡಲೇ ಏತ ನೀರಾವರಿ ಯೋಜನೆಯನ್ನ ಪೂರ್ಣಗೊಳಿಸಿ ರೈತರಿಗೆ ಉಳಿದ ಪರಿಹಾರ ನೀಡುವಂತೆ ಧರಣಿ-ಪ್ರತಿಭಟನೆ ಮಾಡುದರೂ ಉಪಯೋಗವಿಲ್ಲ.

Follow Us:
Download App:
  • android
  • ios