* ಪೈಪ್ ಲೈನ್ ಒಳಭಾಗದಲ್ಲಿ ಸಿಲುಕಿದ ರೈತನ ರಕ್ಷಣೆ* ಸುಮಾರು 200 ಅಡಿ ಉದ್ದ ಇರುವ ಪೈಪ್ ಲೈನ್ ನಲ್ಲಿ ಸಿಕ್ಕಿಹಾಕಿಕೊಂಡಿದ್ದರು* ರಾಮನಗರದ ಕೊಂಕಾಣಿದೊಡ್ಡಿ ಗ್ರಾಮದ ಬಳಿಯ ಬೈಪಾಸ್ ರಸ್ತೆಯಲ್ಲಿ ಘಟನೆ * ಸಿಂಗ್ರಿಬೋವಿ ದೊಡ್ಡಿ ಗ್ರಾಮದ ರೈತ ರಾಜಣ್ಣ ಪೈಪ್ ಲೈನ್ ನಲ್ಲಿ ಸಿಲುಕಿದ್ದರು

ರಾಮನಗರ(ಜು. 04) ಪೈಪ್ ಲೈನ್ ಒಳಗೆ ಸಿಕ್ಕಿ ಹಾಕಿಕೊಂಡಿದ್ದ ರೈತನನ್ನು ಅಗ್ನಿಶಾಮಕದಳದ ಸಿಬ್ಬಂದಿ ಸಾಹಸ ಮೆರೆದು ರಕ್ಷಣೆ ಮಾಡಿದ್ದಾರೆ.

"

ರಾಮನಗರ ಬೈಪಾಸ್‌ ರಸ್ತೆ ಸಮೀಪದ ಪೈಪ್‌ನಲ್ಲಿ ಸಿಲುಕಿಕೊಂಡಿದ್ದ ವ್ಯಕ್ತಿಯೊಬ್ಬರನ್ನು ಅತ್ಯಂತ ಎಚ್ಚರಿಕೆಯಿಂದ ರಕ್ಷಣೆ ಮಾಡಿದ ರಾಮನಗರ ಜಿಲ್ಲಾ ಅಗ್ನಿಶಾಮಕ ದಳದ ಸಿಬ್ಬಂದಿಯನ್ನು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಅಭಿನಂದಿಸಿದ್ದಾರೆ. 

ಕೊಳವೆ ಬಾವಿಗೆ ಬಿದ್ದ ಬಾಲಕಿ ಬದುಕಿ ಬಂದಳು

ಈ ಬಗ್ಗೆ ಹೇಳಿಕೆ ನೀಡಿರುವ ಅವರು, ಸದ್ಯದಲ್ಲೇ ನಾನು ಜಿಲ್ಲಾ ಕೇಂದ್ರಕ್ಕೆ ಭೇಟಿ ನೀಡುತ್ತಿದ್ದೇನೆ. ಆ ಸಂದರ್ಭದಲ್ಲಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಎಲ್ಲ ಸಿಬ್ಬಂದಿಯನ್ನೂ ಗೌರವಿಸಲಾಗುವುದು ಹಾಗೂ ಅವರಿಗೆ ಪ್ರಶಂಸನಾ ಪತ್ರ ನೀಡಲಾಗುವುದು ಎಂದು ಹೇಳಿದ್ದಾರೆ. 

ಪೈಪಿನಲ್ಲಿ ಸಿಲುಕಿದ್ದ ವ್ಯಕಿಯನ್ನು ರಕ್ಷಿಸಲು ಅತ್ಯಂತ ನಾಜೂಕು ಮತ್ತು ಎಚ್ಚರಿಕೆಯಿಂದ ಅಗ್ನಿಶಾಮಕ ದಳ ಕಾರ್ಯಾಚರಣೆ ನಡೆಸಿದೆ. ಅತ್ಯಂತ ವೃತ್ತಿಪರವಾಗಿ ಕಾರ್ಯಾಚರಣೆ ಇದು. ಒಂದು ಅಮೂಲ್ಯ ಜೀವ ರಕ್ಷಿಸಿದ ಎಲ್ಲ ಸಿಬ್ಬಂದಿಗೆ ನನ್ನ ಅಭಿನಂದನೆಗಳು ಎಂದು ಡಿಸಿಎಂ ತಿಳಿಸಿದ್ದಾರೆ.

Scroll to load tweet…