ಮೈಸೂರು(ಫೆ.11): ಅಂತಾರಾಷ್ಟ್ರೀಯ ಮಟ್ಟದ ಮಿಸ್ಟರ್‌ ಏಷ್ಯಾ 2020 ಮಾಡೆಲ್‌ಗಳ ಸ್ಪರ್ಧೆಯಲ್ಲಿ ನಂಜನಗೂಡು ತಾಲೂಕಿನ ದೇವನೂರು ಗ್ರಾಮದ ಡಿ.ಸಿ. ನಾಗೇಶ್‌ ಮಿಸ್ಟರ್‌ ಏಷ್ಯಾ ಆಗಿ ಹೊರಹೊಮ್ಮಿದ್ದಾರೆ.

ನೇಪಾಳದ ಕಠ್ಮಂಡುವಿನಲ್ಲಿ ಮಂಜರಿ ನೇಪಾಲ್‌ ಪ್ರೈ. ಲಿಮಿಟೆಡ್‌ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಟ್ಟದ ಮಿಸ್ಟರ್‌ ಏಷ್ಯಾ 2020 ಮಾಡೆಲ್‌ಗಳ ಸ್ಪರ್ಧೆಯಲ್ಲಿ ನಂಜನಗೂಡು ತಾಲೂಕಿನ ದೇವನೂರು ಗ್ರಾಮದ ಡಿ.ಸಿ. ನಾಗೇಶ್‌ ಮಿಸ್ಟರ್‌ ಏಷ್ಯಾ ಅಡ್ವೆಂಚರ್‌, ಏಷ್ಯಾ ಕಲ್ಚರ್‌ ಹಾಗೂ ಏಷ್ಯಾ ಸೌತ್‌ ಇಂಡಿಯಾದಲ್ಲಿ ವಿಜೇತರಾಗಿದ್ದಾರೆ.

ಇವರು ದೇವನೂರು ಗ್ರಾಮದ ರೈತ ಚಿನ್ನಬುದ್ದಿ ಮತ್ತು ರೇಣುಕ ಅವರ ಪುತ್ರ. ನಾಗೇಶ್‌ ಈ ಹಿಂದೆ ರೈತರ ವೇಷಭೂಷಣದಲ್ಲೂ ಗಮನ ಸೆಳೆದಿದ್ದಾರೆ. ರೈತರ ವೇಷಭೂಷಣ ಥೀಮ್‌ ಅನ್ನು ಫ್ಯಾಷನ್‌ ಜಗತ್ತಿಗೆ ತರಲು ಬಯಸುವುದಾಗಿ ನಾಗೇಶ್‌ ತಿಳಿಸಿದ್ದಾರೆ.