Asianet Suvarna News Asianet Suvarna News

ತಂಬಾಕು ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ರೈತ ಮುಖಂಡರ ಆಗ್ರಹ

ಈ ಸಾಲಿನ ತಂಬಾಕು ಹರಾಜು ಮಾರುಕಟ್ಟೆಕಾರ್ಯಾರಂಭಕ್ಕೂ ಮುನ್ನ ರೈತರೊಂದಿಗೆ ಪೂರ್ವಭಾವಿ ಸಭೆ ನಡೆಸಿ ರೈತರ ಸಮಸ್ಯೆಗಳ ಕುರಿತು ಪರಿಹಾರೋಪಾಯ ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ರೈತಸಂಘ ಒತ್ತಾಯಿಸಿದೆ.

Farmer leaders demand for solving the problem of tobacco Farmers snr
Author
First Published Oct 8, 2022, 4:27 AM IST

ಹುಣಸೂರು (a.08): ಈ ಸಾಲಿನ ತಂಬಾಕು ಹರಾಜು ಮಾರುಕಟ್ಟೆಕಾರ್ಯಾರಂಭಕ್ಕೂ ಮುನ್ನ ರೈತರೊಂದಿಗೆ ಪೂರ್ವಭಾವಿ ಸಭೆ ನಡೆಸಿ ರೈತರ ಸಮಸ್ಯೆಗಳ ಕುರಿತು ಪರಿಹಾರೋಪಾಯ ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ರೈತಸಂಘ ಒತ್ತಾಯಿಸಿದೆ.

ಇತ್ತೀಚೆಗೆ ಮೈಸೂರಿನ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ರೈತಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ನೇತೃತ್ವದಲ್ಲಿ ರೈತಮುಖಂಡರ (Farmers Leader)  ನಿಯೋಗ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್‌ ಅವರೊಂದಿಗೆ ಆಯೋಜಿಸಿದ್ದ ಸಭೆಯಲ್ಲಿ ಸಮಸ್ಯೆಗಳ ಕುರಿತು ಮಾಹಿತಿ ನೀಡಲಾಗಿದೆ.

ತಂಬಾಕು ಮಾರುಕಟ್ಟೆ (Market) ಆರಂಭಕ್ಕೂ ಮುನ್ನ ರೈತಮುಖಂಡರೊಂದಿಗೆ ತಂಬಾಕು ಮಂಡಳಿ ರಾಜ್ಯನಿರ್ದೇಶಕರು ಮತ್ತು ಖರೀದಿ ಕಂಪನಿಗಳು ಪೂರ್ವಭಾವಿ ಸಭೆ ನಡೆಸುವುದು ವಾಡಿಕೆ. ಆದರೆ ಈ ಬಾರಿ ಸ್ಥಳೀಯ ಮಟ್ಟದ ಹರಾಜು ಅಧೀಕ್ಷಕರೊಂದಿಗೆ ಸಭೆ ಆಯೋಜಿಸಲಾಗಿತ್ತು. ಹುಣಸೂರು (Hunasuru) ಮತ್ತು ಎಚ್‌.ಡಿ. ಕೋಟೆಯ ಎರಡೂ ಮಾರುPಟ್ಟೆಗಳಲ್ಲಿ ಸಭೆಯನ್ನು ರೈತರು ಬಹಿಷ್ಕರಿಸಿ ಹೊರಬಂದಿದ್ದೇವೆ. ಅತಿವೃಷ್ಟಿಯಿಂದಾಗಿ ಈ ಬಾರಿ ರೈತರು ಪಡಬಾರದ ಪಾಡು ಅನುಭವಿಸಿ ತಂಬಾಕು ಬೆಳೆದಿದ್ದೇವೆ. ಅತಿ ಮಳೆಯಿಂದಾಗಿ 2-3 ಬಾರಿ ಎಸ್‌ಒಪಿ ರಸಗೊಬ್ಬರ ಹಾಕಲಾಗಿದೆ. . 2200 ಗಳಿದ್ದ ಎಸ್‌ಒಪಿ ರಸಗೊಬ್ಬರ ಈ ಬಾರಿ . 5200 ಆಗಿದೆ. ಹದಗೊಳಿಸಲು ಬಳಸುವ ಸೌದೆ ಬೆಲೆಯೂ ಗಗನಕ್ಕೇರಿದೆ. ಇಂತಹ ಸಂದರ್ಭದಲ್ಲಿ ರೈತರೊಂದಿಗೆ ಪೂರ್ವಭಾವಿ ಸಭೆ ನಡೆಸದೆ ಅ. 10ಕ್ಕೆ ಮಾರುಕಟ್ಟೆಆರಂಭಕ್ಕೆ ನಿರ್ಧರಿಸಿರುವುದು ಖಂಡನೀಯ ಎಂದು ಮುಖಂಡರು ಹೇಳಿದರು.

ಗೊಬ್ಬರ ಸಾಲ ಮನ್ನಾ ಮಾಡಿ:

ರಾಜ್ಯಕ್ಕೆ ಈ ಬಾರಿ 99 ಮೆಟ್ರಿಕ್‌ ಟನ್‌ ತಂಬಾಕು ಬೆಳೆಯಲು ನಿಗದಿಪಡಿಸಲಾಗಿದ್ದರೂ, ಹವಾಮಾನ ವೈಪರೀತ್ಯದಿಂದಾಗಿ 50 ರಿಂದ 55 ಮೆಟ್ರಿಕ್‌ ಟನ್‌ ಮಾತ್ರ ತಂಬಾಕು ಬೆಳೆ ನಿರೀಕ್ಷಿಸಲಾಗಿದೆ. ರೈತರು ಪೂರ್ತಿ ನಷ್ಟಹೊಂದಿದ್ದು, ಸರ್ಕಾರ ಈ ಬಾರಿ ಗೊಬ್ಬರ ಸಾಲ ಮತು ಬೆಳೆ ಸಾಲ ಎರಡನ್ನೂ ಮನ್ನಾ ಮಾಡುವ ನಿಟ್ಟಿನಲ್ಲಿ ಕ್ರಮವಹಿಸಬೇಕು. ಅಲ್ಲದೇ ಜಿಲ್ಲಾ ಮಂಡಳಿಯ ರಾಜ್ಯ ನಿರ್ದೇಶಕರು, ಉಸ್ತುವಾರಿ ಸಚಿವರು ಮತ್ತು ಸಂಸದರಾದಿಯಾಗಿ ಎಲ್ಲರೂ ಒಳಗೊಂಡು ಶೀಘ್ರ ಪೂರ್ವಭಾವಿ ಸಭೆ ನಡೆಸಿ ರೈತರ ಸಮಸ್ಯೆ ಆಲಿಸಬೇಕು ಎಂದು ಆಗ್ರಹಿಸಿದ್ದು, ಇದಕ್ಕೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್‌, ತಂಬಾಕು ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮೋದೂರು ಶಿವಣ್ಣ, ಗೌರವಾಧ್ಯಕ್ಷ ಉಂಡುವಾಡಿ ಸಿ.ಚಂದ್ರೇಗೌಡ, ರಾಮೇಗೌಡ, ನಿಲುವಾಗಿಲು ಪ್ರಭಾಕರ್‌, ಧನಂಜಯ್‌ ಮೊದಲಾದವರು ಇದ್ದರು.

ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ನಿಷೇಧ : 

ಸಿಗರೇಟು ಮತ್ತು ಇತರೆ ತಂಬಾಕು ಉತ್ಪನ್ನಗಳ ಕಾಯ್ದೆ-2003(cigarrates And Other Tobacco Products Act-2003 COPTA) ರನ್ವಯ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧೀಸಿದೆ. ತಂಬಾಕು ಉತ್ಪನ್ನಗಳನ್ನು ಮಕ್ಕಳಿಗೆ ಮಾರಾಟ ಮಾಡುವುದು ನಿಷಿದ್ಧವಾಗಿದೆ. ಈ ಕುರಿತು ವ್ಯಾಪಕ ಜನಜಾಗೃತಿ ಮೂಡಿಸಲು ಜಿಲ್ಲೆಯಾದ್ಯಂತ ಆಂದೋಲನ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಹೇಳಿದರು.

World No Tobacco Day: ತಂಬಾಕಿನಿಂದ ಪ್ರತಿ ವರ್ಷ ಸಾಯುತ್ತಿದ್ದಾರೆ 80 ಲಕ್ಷ ಮಂದಿ !

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಂದು ನಡೆದ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಮನ್ವಯ ಸಮಿತಿಯ ತ್ರೈಮಾಸಿಕ ಪ್ರಗತಿ ಪರಿಶಿಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು ತಂಬಾಕು ನಿಯಂತ್ರಣ ಕಾನೂನುಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು ತಂಬಾಕು ಉತ್ಪನ್ನಗಳ ಬಳಕೆಯಿಂದಾಗುವ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಬೇಕು. ಆರೋಗ್ಯ, ಸಾಮಾಜಿಕ, ಸರ್ಕಾರೇತರ ಅಭಿವೃದ್ಧಿ ಸಂಸ್ಥೆಗಳ ಕಾರ್ಯಕರ್ತರು ಶಾಲಾ ಶಿಕ್ಷಕರು ಮತ್ತು ಅನುಷ್ಠಾನ ಅಧಿಕಾರಿಗಳಿಗೆ ನಿರಂತರ ತರಬೇತಿ ನೀಡಬೇಕು. ಶಾಲೆ, ಕಾಲೇಜುಗಳ ವಿದ್ಯಾರ್ಥಿಗಳಿಗೆ ಕೋಟ್ಟಾ-ಕಾಯ್ದೆ ಕುರಿತು ಅರಿವು ಮೂಡಿಸಬೇಕು. ಗ್ರಾಮೀಣ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಸಹಯೋಗದಲ್ಲಿ ಜಿಲ್ಲೆಯಾದ್ಯಂತ ಆಂದೋಲನ ಕೈಗೊಂಡು ವ್ಯಾಪಕ ತಿಳುವಳಿಕೆ ಮೂಡಿಸುವ ಚಟುವಟಿಕೆಗಳನ್ನು ಕೈಗೊಳ್ಳಲಾಗುವುದು ಎಂದರು.

ಕೋಟ್ಟಾ ಕಾಯ್ದೆ-2003 ರ ಸೆಕ್ಷನ್-4ರಡಿ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧಿಸಲಾಗಿದೆ. ಸೆಕ್ಷನ್ 5 ರ ಪ್ರಕಾರ ತಂಬಾಕು ತಂಬಾಕು ಉತ್ಪನ್ನಗಳ ಜಾಹೀರಾತು ನಿರ್ಬಂಧಿಸಲಾಗಿದೆ. ಸೆಕ್ಷನ್6-ಎ ಪ್ರಕಾರ ಅಪ್ರಾಪ್ತರಿಗೆ ತಂಬಾಕು ಉತ್ಪನ್ನಗಳ ಮಾರಾಟ ನಿರ್ಬಂಧವಾಗಿದೆ. ಸೆಕ್ಷನ್6-ಬಿ ಪ್ರಕಾರ ಶಿಕ್ಷಣ ಸಂಸ್ಥೆಗಳ 100 ಯಾರ್ಡ್ ಆವರಣ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನಗಳ ಮಾರಾಟಕ್ಕೆ ಅವಕಾಶವಿಲ್ಲ. ತಂಬಾಕು ಉತ್ಪನ್ನಗಳ ಮೇಲೆ ನಿಗದಿತ ಎಚ್ಚರಿಕೆ ಸೂಚಿಸುವ ಲೇಬರ್‍ಗಳಿರಬೇಕು ಎಂದರು.

ಜಿಲ್ಲಾ ಸಮೀಕ್ಷಣಾಧಿಕಾರಿ ಡಾ.ಸುಜಾತಾ ಹಸವಿಮಠ ಮಾತನಾಡಿ, ಜಿಲ್ಲೆಯಾದ್ಯಂತ ಕಳೆದ ಎಪ್ರೀಲ್‍ನಿಂದ ಆಗಸ್ಟ್ ಅಂತ್ಯದವರೆಗೆ ಆರೋಗ್ಯ ಇಲಾಖೆಯು 519 ಪ್ರಕರಣಗಳನ್ನು ದಾಖಲಿಸಿ, ರೂ.53,940 ದಂಡ ಸಂಗ್ರಹಿಸಲಾಗಿದೆ. ಮಹಾನಗರ ಪೊಲೀಸ್ ಆಯುಕ್ತಾಲಯವು 514 ಪ್ರಕರಣಗಳನ್ನು ದಾಖಲಿಸಿ, ರೂ.90,790 ದಂಡ ಸಂಗ್ರಹಿಸಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ವ್ಯಾಪ್ತಿಯಲ್ಲಿ 833 ಪ್ರಕರಣಗಳನ್ನು ದಾಖಲಿಸಿ, 84,900 ದಂಡ ಆಕರಿಸಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.

 

Follow Us:
Download App:
  • android
  • ios