Asianet Suvarna News Asianet Suvarna News

ಬೆಳಗಾವಿ: ಮನೆ ನೋಡಲು ಮರಳಿದ್ದ ರೈತ ಕೃಷ್ಣೆಯ ಪಾಲು..!

ರೈತ ಮನೆಯಲ್ಲಿದ್ದ ಸಾಮಾನು ನೋಡಿಕೊಂಡು ಹೋಗಲು ಬಂದಾಗ ಕೃಷ್ಣಾ ನದಿ ಪ್ರವಾಹಕ್ಕೆ ಸಿಲುಕಿ ನೀರುಪಾಲಾದ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಹುಲಗಬಾಳಿ ಗ್ರಾಮದಲ್ಲಿ ಬುಧವಾರ ನಡೆದಿದೆ.
 

Farmer dies due to Krishna river flood at kagwad in belagavi grg
Author
First Published Aug 8, 2024, 5:00 AM IST | Last Updated Aug 8, 2024, 10:13 AM IST

ಕಾಗವಾಡ(ಆ.08): ಕೃಷ್ಣಾ ಪ್ರವಾಹದಿಂದ ಮನೆ ತೊರೆದು ಮಹಾರಾಷ್ಟ್ರದ ಸಂಬಂಧಿಕರ ಮನೆಯಲ್ಲಿ ಕುಟುಂಬ ಸಮೇತ ಆಶ್ರಯ ಪಡೆದಿದ್ದ ರೈತನೋರ್ವನು ಮನೆಯಲ್ಲಿದ್ದ ಸಾಮಾನು ನೋಡಿಕೊಂಡು ಹೋಗಲು ಬಂದಾಗ ಕೃಷ್ಣಾ ನದಿ ಪ್ರವಾಹಕ್ಕೆ ಸಿಲುಕಿ ನೀರುಪಾಲಾದ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಹುಲಗಬಾಳಿ ಗ್ರಾಮದಲ್ಲಿ ಬುಧವಾರ ನಡೆದಿದೆ.

ಬಾಳು ಚವ್ಹಾಣ್‌ (61) ನೀರುಪಾಲಾದ ರೈತ. ಕೃಷ್ಣಾ ನದಿ ನೀರು ಮನೆಯತ್ತ ನುಗ್ಗಿದ್ದರಿಂದ ಮನೆಯಲ್ಲಿದ್ದ ಸಾಮಾನುಗಳನ್ನು ಅಟ್ಟದ ಮೇಲಿಟ್ಟು12 ದಿನಗಳ ಹಿಂದೆ ಕುಟುಂಬ ಸಮೇತ ಮಹಾರಾಷ್ಟ್ರದ ಕವಟೇಮಾಹಾಕಾಳದ ಸಂಬಂಧಿಕರ ಮನೆಯಲ್ಲಿ ವಾಸವಾಗಿದ್ದ. ಬುಧವಾರ ಮನೆಯಲ್ಲಿದ್ದ ಜೋಳ ಹಾಗೂ ಇತರೆ ಸಾಮಾನು ನೋಡಿಕೊಂಡು ಹೋಗಲು ಗ್ರಾಮಕ್ಕೆ ಮರಳಿದ್ದ. ಈ ವೇಳೆ ಸಹೋದರನ ಮಗನೊಂದಿಗೆ ಕೃಷ್ಣಾ ನದಿಯ ನೀರಿಗೆ ಇಳಿದಿದ್ದು, ಸಹೋದರನ ಮಗ ಮುಂದೆ ಹೋಗಿ ಹಿಂತಿರುಗಿ ನೋಡಿದಾಗ ಚಿಕ್ಕಪ್ಪ ಬಾಳು ಚವ್ಹಾಣ ಕಾಣಿಸಿಲ್ಲ. ಗಾಬರಿಗೊಂಡು ಸ್ಥಳೀಯರ ಸಹಾಯದಿಂದ ಹುಡುಕಾಟ ನಡೆಸಿದರೂ ಪತ್ತೆಯಾಗಿಲ್ಲ. 

ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ: ಸಚಿವ ಸತೀಶ್‌ ಜಾರಕಿಹೊಳಿ

ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಅಥಣಿ ಡಿವೈಎಸ್ಪಿ ಶ್ರೀಪಾದ ಜಲ್ದೆ, ಸಿಪಿಐ ರವೀಂದ್ರ ನಾಯ್ಕೋಡಿ. ಪೊಲೀಸ್ ಶಿಬ್ಬಂದಿ ಹಾಗೂ ಅಗ್ನಿ ಶಾಮಕ ದಳ ಸಿಬ್ಬಂದಿ ಶವ ಪತ್ತೆ ಹಚ್ಚಲು ಕಾರ್ಯಾಚರಣೆ ನಡೆಸಿದರು. ನದಿ ನೀರು ಹರಿವಿನ ಪ್ರಮಾಣ ಜೋರಾಗಿರುವುದರಿಂದ ಬುಧವಾರ ಸಂಜೆಯವರೆಗೆ ರೈತ ಬಾಳು ಪತ್ತೆಯಾಗಿಲ್ಲ. ಗುರುವಾರ ಕಾರ್ಯಾಚರಣೆ ಮುಂದುವರಿಯಲಿದೆ.

Latest Videos
Follow Us:
Download App:
  • android
  • ios