Asianet Suvarna News Asianet Suvarna News

ಜೈಲಿಂದ ನಾಗೇಂದ್ರ ರಿಲೀಸ್‌: ಬಳ್ಳಾರಿಯ ಕನಕ ದುರ್ಗಮ್ಮ ದೇವಿಗೆ 101 ತೆಂಗಿನಕಾಯಿ ಒಡೆದು ಅಭಿಮಾನಿಗಳ ಸಂಭ್ರಮ!

ಬಳ್ಳಾರಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ ಅವರು ವಾಲ್ಮೀಕಿ ಪ್ರಕರಣದಲ್ಲಿ ಅವರ ಪಾತ್ರ ಇಲ್ಲದಿದ್ದರೂ ರಾಜಕೀಯ ಷಡ್ಯಂತರದಿಂದ ಅವರನ್ನು ಬಂಧಿಸಲಾಗಿದೆ. ಆದರೆ ಅವರು ಜಾಮೀನಿನ ಮುಖಾಂತರ ಇಂದು ಬಿಡುಗಡೆಯಾಗಿದ್ದು ಬಳ್ಳಾರಿ ಜಿಲ್ಲೆ ಹಾಗೂ ಕರ್ನಾಟಕ ರಾಜ್ಯಾದ್ಯಂತ ಅವರ ಅಪಾರ ಅಭಿಮಾನಿಗಳಿಗೆ ಬಹಳ ಸಂತೋಷವಾಗಿದೆ ಎಂದ ಅಭಿಮಾನಿಗಳು 

Fans Perform Special Pooja to Ballari Kanaka Durgamma Devi for B Nagendra Released From Jail grg
Author
First Published Oct 16, 2024, 4:49 PM IST | Last Updated Oct 16, 2024, 4:49 PM IST

ಬಳ್ಳಾರಿ(ಅ.16):  ವಾಲ್ಮೀಕಿ ನಿಯಮದ ಹಣ ದುರ್ಬಳಕೆ ಮಾಡಿದ ಆರೋಪದ ಹಿನ್ನಲೆಯಲ್ಲಿ ಕಳೆದ ಮೂರು ತಿಂಗಳಿಂದ ಜೈಲಿನಲ್ಲಿದ್ದ ಶಾಸಕ ಬಿ.ನಾಗೇಂದ್ರ ಅವರು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಈ ಹಿನ್ನಲೆಯಲ್ಲಿ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದ್ದು ಬಳ್ಳಾರಿಯ ಕನಕ ದುರ್ಗಮ್ಮ ದೇವಿಗೆ ವಿಶೇಷ ಪೂಜೆ, 101 ತೆಂಗಿನಕಾಯಿ ಒಡೆದು ಸಂಭ್ರಮ ಪಟ್ಟಿದ್ದಾರೆ.  

ಬಿ.ನಾಗೇಂದ್ರ ಅವರ ಅಭಿಮಾನಿಯಾದ ಎಂ.ಜಿ ಕನಕ ಅವರ ನೇತೃತ್ವದಲ್ಲಿ ತೆಂಗಿನಕಾಯಿ ಒಡೆದು ದುರ್ಗಮ್ಮಗೆ ಹರಕೆ ತೀರಿಸಲಾಗಿದೆ.  ಬಳ್ಳಾರಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ ಅವರು ವಾಲ್ಮೀಕಿ ಪ್ರಕರಣದಲ್ಲಿ ಅವರ ಪಾತ್ರ ಇಲ್ಲದಿದ್ದರೂ ರಾಜಕೀಯ ಷಡ್ಯಂತರದಿಂದ ಅವರನ್ನು ಬಂಧಿಸಲಾಗಿದೆ. ಆದರೆ ಅವರು ಜಾಮೀನಿನ ಮುಖಾಂತರ ಇಂದು ಬಿಡುಗಡೆಯಾಗಿದ್ದು ಬಳ್ಳಾರಿ ಜಿಲ್ಲೆ ಹಾಗೂ ಕರ್ನಾಟಕ ರಾಜ್ಯಾದ್ಯಂತ ಅವರ ಅಪಾರ ಅಭಿಮಾನಿಗಳಿಗೆ ಬಹಳ ಸಂತೋಷವಾಗಿದೆ ಎಂದು ಅಭಿಮಾನಿಗಳು ಹೇಳಿದರು.

ಜೈಲಿಂದ ಹೊರಗೆ ಬಂದವರೇ ಸಚಿವ ಜಮೀರ್‌ ಮನೆಗೆ ಹೋಗಿ ತಬ್ಬಿಕೊಂಡ ಮಾಜಿ ಸಚಿವ ನಾಗೇಂದ್ರ!

ಇನ್ನೂ ನಾಗೇಂದ್ರ ಬಿಡುಗಡೆ ಹಿನ್ನೆಲೆಯಲ್ಲಿ ಸಂಡೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಕಾಂಗ್ರೆಸ್ ಗೆಲ್ಲುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

Latest Videos
Follow Us:
Download App:
  • android
  • ios