ಮೈಸೂರು(ಜು.02): ಪ್ರಾಚೀನ ದೇವರ ಮೂರ್ತಿ ವಿಚಾರದಲ್ಲಿ ಗ್ರಾಮಸ್ಥರೊಂದಿಗೆ ಗಲಾಟೆ ನಡೆದು ಪ್ರಖ್ಯಾತ ಮರಳು ಕಲಾಕೃತಿ ಕಲಾವಿದೆ ಗೌರಿ ಅವರನ್ನು ಬಂಧಿಸಲಾಗಿದೆ.

ಗೌರಿ ಪೊಲೀಸರ ಬಂಧನಕ್ಕೊಳಗಾಗಿರೊ ಮರಳು ಕಲಾವಿದೆ. ಗತಕಾಲದ ವಿಷ್ಣು ಮೂರ್ತಿಯನ್ನು ಪ್ರಾಚ್ಯ ವಸ್ತುಸಂಗ್ರಹಾಲಯಕ್ಕೆ ಒಪ್ಪಿಸದ ಆರೋಪದ ಹಿನ್ನೆಲೆಯಲ್ಲಿ ಬಿಳಿಗೆರೆ ಗ್ರಾಮಸ್ಥರು ಮರಳು ಕಲಾವಿದೆ ವಿರುದ್ಧ ದೂರು ನೀಡಿದ್ದರು. ತಿ.ನರಸೀಪುರ ತಾಲೂಕಿನ ಬಿಳಿಗೆರೆ ಗ್ರಾಮದಲ್ಲಿ ರಸ್ತೆ ಬದಿಯಲ್ಲಿ ಬಿದ್ದಿದ್ದ ಗತ ಕಲಾದ ವಿಷ್ಣು ಮೂರ್ತಿ ಪಕ್ಕದಲ್ಲೇ ಜೆಸಿಬಿಯಿಂದ ಕಾಮಗಾರಿ ನಡೆಯುತ್ತಿತ್ತು. ಮೂರ್ತಿಗೆ ಧಕ್ಕೆ ಆಗಬಹುದೆಂದು ಗೌರಿ ಇದನ್ನು ತಮ್ಮ ಬಳಿ‌ ಇರಿಸಿಕೊಂಡಿದ್ದರು.

ರಾಯಚೂರು: ಮನೆಗಳ ಎದರು ಕೊರೋನಾ ಸೋಂಕಿತನ ಅಂತ್ಯಕ್ರಿಯೆ..!

ಪ್ರಾಚ್ಯವಸ್ತು ಇಲಾಖೆ ವಶಕ್ಕೆ ನೀಡುತ್ತೇನೆಂದು ವಿಷ್ಣುಮೂರ್ತಿ ಸಂಗ್ರಹಿಸಿದ್ದ ಗೌರಿ ಗತಕಾಲದ ಮೂರ್ತಿಯನ್ನು ಸಂಬಂಧಿಸಿದ ಇಲಾಖೆಗೆ ಒಪ್ಪಿಸಿಲ್ಲವೆಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಇತ್ತ ಗ್ರಾಮದ ಗುಂಪೊಂದು ಹಣಕ್ಕಾಗಿ ಡಿಮ್ಯಾಂಡ್ ಮಾಡಿತ್ತು ಎನ್ನುತ್ತಿರುವ ಗೌರಿ ಪೋಷಕರು ಹಣ ನೀಡದ್ದಕೆ ನನ್ನ ಮೇಲೆ ದೂರು ದಾಖಲಿಸಲಾಗಿದೆ. ದೂರು ದಾಖಲಿಸಿಕೊಂಡ ಪೊಲೀಸರಿಂದ ವಿಚಾರಣೆ ಮಾಡದೆ ಎಫ್.ಐ.ಆರ್ ದಾಖಲಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಮದುವೆಗೂ ಮುನ್ನ ವರನ ಫೋನ್‌ಗೆ ವಧುವಿನ ನಗ್ನ ವಿಡಿಯೋ, ಬಳಿಕ ನಡೆದದ್ದು ಯಾರೂ ಊಹಿಸಿರಲಿಲ್ಲ!

ಕೆ‌.ಆರ್.ಎಸ್ ರಸ್ತೆಯಲ್ಲಿರೋ ಗೌರಿ ನಿವಾಸ ಜಲಭಾಗ್ ಗೆ ಪೊಲೀಸರು ಭೇಟಿ ಕೊಟ್ಟಿದ್ದು, ವಿಷ್ಣುಮೂರ್ತಿಯನ್ನು ವಶಕ್ಕೆ ಪಡೆದು ಗೌರಿಯನ್ನು ತಿ. ನರಸೀಪುರ ಪೊಲೀಸರು ಬಂಧಿಸಿದ್ದಾರೆ. ವಿಷ್ಣು ಮೂರ್ತಿ ಸಂರಕ್ಷಣೆ ಮಾಡಲು ಯತ್ನಿಸಿದ್ದಕ್ಕೆ ಪೊಲೀಸರು ಕೇಸ್ ದಾಖಲಿಸಿದ್ದಾರೆಂದು ಗೌರಿ ತಾಯಿ ಆರೋಪಿಸಿದ್ದಾರೆ.