Asianet Suvarna News Asianet Suvarna News

ಮಂಗಳೂರು : ಕುಟುಂಬದ ಸಾಮೂಹಿಕ ಆತ್ಮಹತ್ಯೆ - ಪಾರ್ಥಿವ ಶರೀರಗಳಿಗೆ ಅಗ್ನಿ ಸ್ಪರ್ಶ

ಮಗು ಸಹಿತ ದಂಪತಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ಮೂರೂ ಶವಗಳ ಶವ ಪರೀಕ್ಷೆಯನ್ನು ನಡೆಸಿ ಅಗ್ನಿಸ್ಪರ್ಶ ಮಾಡಲಾಗಿದೆ

Family Mass Suicide in mangaluru Mulki snr
Author
Bengaluru, First Published Dec 16, 2020, 1:44 PM IST

ಮೂಲ್ಕಿ (ಡಿ.16): ಪಡುಪಣಂಬೂರು ಬಳಿಯ ಕಲ್ಲಾಪುವಿನಲ್ಲಿ ಸೋಮವಾರ ಮಗು ಸಹಿತ ದಂಪತಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ಮೂರೂ ಶವಗಳ ಶವ ಪರೀಕ್ಷೆಯನ್ನು ಮಂಗಳೂರಿನ ವೆನ್‌ಲಾಕ್‌ ಆಸ್ಪತ್ರೆಯಲ್ಲಿ ನಡೆಸಿ, ಪಡುಪಣಂಬೂರು ಕಲ್ಲಾಪುವಿನ ಸಾರ್ವಜನಿಕ ರುದ್ರಭೂಮಿಯಲ್ಲಿ ಅಂತಿಮ ಸಂಸ್ಕಾರ ನಡೆಸಲಾಯಿತು.

ಮೃತ ವಿನೋದ್‌ ಸಾಲ್ಯಾನ್‌, ರಚನಾ ದಂಪತಿ ಹಾಗೂ ಅವರ ಪುತ್ರ ಸಾಧ್ಯ ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದು ಎರಡೂ ಮನೆಯವರ ಕುಟುಂಬಿಕರು ಮುಂಬæೖಯಿಂದ ಬೆಳಗ್ಗೆ ಆಗಮಿಸಿ ಅಂತಿಮ ಸಂಸ್ಕಾರದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 

ಪಿಎ​ಸ್‌ಐ ಹೆಸ​ರಿ​ನಲ್ಲಿ ನಕಲಿ ಖಾತೆ ಸೃಷ್ಟಿಸಿ ಹಣಕ್ಕೆ ಬೇಡಿ​ಕೆ

ಒಂದು ಚಿತೆಯಲ್ಲಿ ತಾಯಿ ಮತ್ತು ಮಗನನ್ನು ಒಟ್ಟಿಗಿರಿಸಿ, ಮತ್ತೊಂದರಲ್ಲಿ ವಿನೋದ್‌ ಅವರ ಶವಕ್ಕೆ ಅಗ್ನಿ ಸ್ಪರ್ಶ ನೀಡಲಾಯಿತು. ಸ್ಥಳೀಯರು, ಕುಟುಂಬಿಕರು ನೂರಾರು ಮಂದಿ ಅಂತಿಮ ಯಾತ್ರೆಯಲ್ಲಿ ಭಾಗವಹಿಸಿದ್ದರು. ಪ್ರಕರಣವನ್ನು ದಾಖಲಿಸಿಕೊಂಡಿರುವ ಮೂಲ್ಕಿ ಪೊಲೀಸರು ಘಟನೆ ನಡೆದ ಮನೆಯ ಶೋಧನಾ ಕಾರ್ಯವನ್ನು ನಡೆಸಿದ್ದಾರೆ. ಶವ ಸಂಸ್ಕಾರಕ್ಕೆ ಆಗಮಿಸಿರುವ ಮುಂಬæೖ ಸಂಬಂಧಿಕರ ಹೇಳಿಕೆಯನ್ನು ಪಡೆಯುವ ಸಾಧ್ಯತೆ ಇದ್ದು, ಆತ್ಮಹತ್ಯೆಗೆ ನಿರ್ದಿಷ್ಟಕಾರಣ ಪತ್ತೆ ಹಚ್ಚುವ ಪ್ರಯತ್ನ ವನ್ನು ಪೊಲೀಸರು ನಡೆಸುತ್ತಿದ್ದಾರೆ.

Follow Us:
Download App:
  • android
  • ios