ಮಂಡ್ಯ(ಏ.18): ಕೊರೋನಾ ವಿರುದ್ಧ ಹೋರಾಟದ ಫಲವಾಗಿ ಲಾಕ್‌ಡೌನ್‌ ನಡುವೆಯೂ ಮನೆಯಲ್ಲಿರುವ ಸಮಯವನ್ನು ತುಂಬ ವಿಭಿನ್ನವಾಗಿ ಬಳಕೆ ಮಾಡಿಕೊಂಡ ಕುಟುಂಬವೊಂದು ಜಾಲಿಯಾಗಿ ಸಮಯವನ್ನು ಕಳೆಯುತ್ತಿದೆ.

ಮಂಡ್ಯದ ದಿಲೀಪ್‌ ಮತ್ತು ಅವರ ಕುಟುಂಬ ಲಾಕ್‌ಡೌನ್‌ ಸಮಯವನ್ನು ಮನೆಯಲ್ಲಿ ಸಾಮೂಹಿಕ ಡ್ಯಾನ್ಸ್‌ ಮಾಡುವ ಮೂಲಕ ಹಾಗೂ ಟಿಕ್‌ ಟ್ಯಾಕ್‌ ಮಾಡುವ ಮೂಲಕ ಮನರಂಜನೆ ಪಡೆದುಕಂಡು ಕಾಲ ಕಳೆಯುತ್ತಿದ್ದಾರೆ. ಲಾಕ್‌ಡೌನ್‌ ಕಳೆಯೋದು ಹೇಗಪ್ಪ ಎಂಬ ಚಿಂತನೆ ಎಲ್ಲರಲ್ಲೂ ಇದೆ. ಈ ಕುಟುಂಬ ಮಾತ್ರ ನಮಗೆ ಇನ್ನೂ ಸಮಯ ಸಾಲುತ್ತಿಲ್ಲ. ಅನೇಕ ಹಾಡುಗಳಿಗೆ ಡ್ಯಾನ್ಸ್‌ ಮಾಡಬೇಕು. ಮನರಂಜನೆಯಾಗುತ್ತದೆ. ವ್ಯಾಯಾಮವಾಗುತ್ತದೆ. ಆ ಮೂಲಕ ಪ್ರತಿಭೆಯನ್ನು ಹೊರ ತರುವ ಪಯತ್ನ ನಡೆಯುತ್ತಿದೆ ಎಂದು ಮನೆ ಮಾಲೀಕ ದಿಲೀಪ್‌ ಹೇಳುತ್ತಾರೆ.

ಮಾಸ್ಕ್‌ ಬಗ್ಗೆ ಗೇಲಿ ಮಾಡಿದ್ದ ಟಿಕ್‌ಟಾಕ್‌ ಸ್ಟಾರ್‌ಗೆ ಸೋಂಕು!

ದಿಲೀಪ್‌ ಕುಟುಂಬ ರವಿಚಂದ್ರನ್‌ ನಟಿಸಿರುವ ರಣಧೀರ ಸಿನಿಮಾ ಹಾಡು ಸೇರಿದಂತೆ ಹಲವು ಹಾಡುಗಳಿಗೆ ಇಡೀ ಕುಟುಂಬ ಜಾಲಿಯಾಗಿ ಹೆಜ್ಜೆ ಹಾಕಿದೆ. ಮನೆ ಮಂದಿಯಲ್ಲ ವೃತ್ತಿಪರ ಡ್ಯಾನ್ಸರ್‌ ಎಂಬ ರೀತಿಯಲ್ಲಿ ಡ್ಯಾನ್ಸ್‌ ಮಾಡಿದ್ದು ವಿಶೇಷವಾಗಿದೆ. ಈ ಡ್ಯಾನ್ಸ್‌ನ ಎಲ್ಲ ತುಣುಕುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ. ಈ ಕುಟುಂಬದ ಬಗ್ಗೆ ಸಾಕಷ್ಟುಮೆಚ್ಚುಗೆ ಮಾತುಗಳುಗ ಗ್ರೂಪ್‌ ಗಳಲ್ಲಿ ಕೇಳಿ ಬಂದಿದೆ.