Asianet Suvarna News Asianet Suvarna News

ಮದುವೆ ವಿಚಾರ ಇಷ್ಟು ಬೆಳೆಯಿತು : ಸಾವು ಬೇಕೆಂದು ರಾಜ್ಯಪಾಲರಿಗೆ ಮನವಿ ಮಾಡಿತು ಕುಟುಂಬ

ವಿವಾಹ ವಿಚಾರವಾಗಿ ಕುಟುಂಬ ಒಂದು ಇದೀಗ ಸಾವಿಗಾಗಿ ಮನವಿ ಮಾಡಿಕೊಂಡಿದೆ. ಮರಣ ದಯಪಾಲಿಸಿ ಎಂದು ಕೇಳುತ್ತಿದೆ. 

Family Appeal For Mercy Killing in Ramanagara  snr
Author
Bengaluru, First Published Nov 4, 2020, 11:17 AM IST

ರಾಮ​ನ​ಗ​ರ (ನ.04): ಮಗನ ಮದು​ವೆಗೆ ಕರೆ​ಯ​ಲಿಲ್ಲ ಎಂಬ ನೆಪ​ವೊಡ್ಡಿ ಕುಟುಂಬದವ​ರಿಗೆ ಸಮು​ದಾಯ ಬಹಿ​ಷ್ಕಾರ ಹಾಕಿ​ದವರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಿ, ಇಲ್ಲವೆ ದಯಾ ಮರಣ ಹೊಂದಲು ಅನು​ಮತಿ ನೀಡು​ವಂತೆ ಒತ್ತಾ​ಯಿಸಿ ನೊಂದ ಕುಟುಂಬ​ವೊಂದು ಜಿಲ್ಲಾ​ಧಿ​ಕಾ​ರಿ​ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾ​ಧಿ​ಕಾ​ರಿ​ಗ​ಳ ಮೂಲಕ ರಾಜ್ಯ​ಪಾ​ಲ​ರಿಗೆ ಮನವಿ ಸಲ್ಲಿ​ಸಿದೆ.

ಕನ​ಕ​ಪುರ ತಾಲೂಕು ಕೋಡಿ​ಹಳ್ಳಿ ಗ್ರಾಮದ ತಿಗಳ ಸಮು​ದಾ​ಯಕ್ಕೆ ಸೇರಿದ ಕೆಂಚೇ​ಗೌಡ ಕುಟುಂಬ ದಯಾ​ಮ​ರಣಕ್ಕೆ ಅನು​ಮತಿ ನೀಡು​ವಂತೆ ಕೋರಿ​ಕೊಂಡಿ​ದೆ. ಅಲ್ಲದೆ, ಈ ನೊಂದ ಕುಟುಂಬ ಗ್ರಾಮದ ನಂಜೇ​ಗೌಡ, ಕೆ.ರ​ಮೇಶ್‌ , ಮಹ​ದೇ​ವಯ್ಯ, ಮುನಿ​ಗೌಡ, ಲಕ್ಷ್ಮ​ಣ ವಿರುದ್ಧ ಸಮು​ದಾಯದಿಂದ ಬಹಿ​ಷ್ಕಾರ ಹಾಕಿದ ಆರೋಪ ಮಾಡಿದೆ.

‘ನಾವು ಪಾಕಿಸ್ತಾನದವರು’ ಎಂದು ಕೂಗಾಡಿ ವ್ಯಕ್ತಿಯ ಮೇಲೆ ಹಲ್ಲೆ ...

ಏನಿದು ಘಟನೆ?  ತಿಗಳ ಸಮು​ದಾ​ಯಕ್ಕೆ ಸೇರಿದ ಈ ಐದು ಮಂದಿ ಸ್ವಯಂ ಘೋಷಿತ ತಿಗಳ ಸಂಘ​ಟ​ನೆಯ ವಿವಿಧ ಹುದ್ದೆಯ ಹೆಸ​ರಿ​ನಲ್ಲಿ ಅಮಾ​ಯಕ ತಿಗಳ ಸಮು​ದಾ​ಯದ ಹಲ​ವಾರು ಜನ​ರಿಂದ ಕುಟುಂಬ ಬಹಿ​ಷ್ಕಾರ ಎನ್ನುವ ಹೆಸ​ರಿ​ನಲ್ಲಿ ಲಕ್ಷಾಂತರ ರುಪಾಯಿಗಳನ್ನು ದಂಡದ ರೂಪ​ದಲ್ಲಿ ವಸೂಲಿ ಮಾಡು​ತ್ತಿ​ದ್ದರು. ಮೊದ​ಲಿ​ನಿಂದಲೂ ನಾವು ಇವರ ಕಾರ್ಯ​ವೈ​ಖರಿ ವಿರೋ​ಧಿ​ಸುತ್ತಾ ಬಂದಿ​ದ್ದ​ವು. ಈಗ ಐವರು ಗ್ರಾಮ​ದಲ್ಲಿ ನಮ್ಮ ಕುಟುಂಬ​ದೊಂದಿಗೆ ಬೆಂಕಿ, ನೀರು ಸೇರಿ​ದಂತೆ ಯಾವುದೇ ವಸ್ತು ನೀಡ​ಬಾ​ರದು, ಅವ​ರಿಂದ ಪಡೆ​ಯ​ಬಾ​ರದು, ಯಾರು ಅವ​ರೊಂದಿಗೆ ಮಾತ​ನಾ​ಡ​ಬಾ​ರದು. ಯಾವುದೇ ಶುಭ ಅಶುಭ ಕಾರ್ಯ​ಗ​ಳಿಗೆ ಆಹ್ವಾನ ಮಾಡ​ಬಾ​ರ​ದೆಂದು ಪಂಚಾ​ಯಿತಿ ನಿರ್ಣಯ ಮಾಡಿ ಸಮು​ದಾ​ಯ​ದಿಂದ ಬಹಿ​ಷ್ಕಾ​ರದ ಫತ್ವಾ ಹೊರ​ಡಿ​ಸಿ​ದ್ದಾ​ರೆ.

ಚಿಕ್ಕೇ​ನ​ಹಳ್ಳಿಯ ಸಿದ್ದಪ್ಪ ಪುತ್ರಿ ಮಹಾ​ಲಕ್ಷ್ಮೇ ಮತ್ತು ನನ್ನ ಎರ​ಡನೇ ಪುತ್ರ ಕೆ.ದೇ​ವ​ರಾಜು ವಿವಾಹವನ್ನು ಮೇ 31ರಂದು ​ಕೋ​ವಿಡ್‌ ನಿಯ​ಮಾ​ವಳಿ ಅನು​ಸಾರ ನೆರ​ವೇ​ರಿ​ಸ​ಲಾ​ಗಿತ್ತು. ಜೂನ್‌ 8ರಂದು ನನ್ನ ಮಗನ ವಿವಾಹ ಸಂಬಂಧ​ವಾ​ಗಿಯೇ ಐವರು ಪಂಚಾ​​ಯಿತಿ ಇಟ್ಟಿ​ಕೊಂಡಿ​ದ್ದರು. ಆ ದಿನ ಬೀಗರ ಮನೆ​ಯಲ್ಲಿ ಮಗನ ನಿಷೇಕ ಶಾಸ್ತ್ರ ಇದ್ದ ಕಾರಣ ಪಂಚಾ​ಯಿತಿಗೆ ಹಾಜ​ರಾ​ಗಿ​ರ​ಲಿಲ್ಲ. ಮರು ದಿನ ಗ್ರಾಮಕ್ಕೆ ಬರು​ವ​ಷ್ಟ​ರಲ್ಲಿ ಮಗನ ಮದು​ವೆಗೆ ತಿಗಳ ಜನಾಂಗ​ದ​ವ​ರಿಗೆ ವೀಳ್ಯ ನೀಡಿ ಕರೆ​ದಿ​ಲ್ಲ​ವೆಂದು ಪಂಚಾಯಿತಿ ನಿರ್ಣಯ ಮಾಡಿ​ಕೊಂಡು ನಮ್ಮ ಕುಟುಂಬಕ್ಕೆ ಬಹಿ​ಷ್ಕಾರ ಹಾಕಿ​​ದ್ದಾರೆ.

ಗ್ರಾಮ​ದಲ್ಲಿ ನೆಮ್ಮ​ದಿಯ ಜೀವನ ನಡೆ​ಸಲು ಬಿಡದೆ ನೀಡು​ತ್ತಿ​ರುವ ಮಾನ​ಸಿಕ ಹಿಂಸೆ​ಯಿಂದ ಕುಟುಂಬ ಆತ್ಮ​ಹತ್ಯೆ ಮಾಡಿ​ಕೊ​ಳ್ಳುವ ಹಂತಕ್ಕೆ ತಲು​ಪಿದೆ. ಈ ಐವರ ವಿರುದ್ಧ ಕ್ರಿಮಿ​ನಲ್‌ ಮೊಕ​ದ್ದಮೆ ಹೂಡಿ, ಕ್ರಮ ಕೈಗೊ​ಳ್ಳ​ಬೇಕು. ನಮ್ಮ ಕುಟುಂಬ ನೆಮ್ಮ​ದಿ​ಯಿಂದ ಜೀವನ ನಡೆ​ಸಲು ಅವ​ಕಾಶ ಮಾಡಿ​ಕೊ​ಡುವ ಜತೆಗೆ ಸೂಕ್ತ ರಕ್ಷಣೆ ನೀಡ​ಬೇಕು. ಇಲ್ಲ​ದಿ​ದ್ದರೆ ರಾಜ್ಯ​ಪಾ​ಲ​ರಿಂದ ದಯಾ​ಮ​ರಣ ಹೊಂದಲು ಅನು​ಮತಿ ಕೊಡಿ​ಸು​ವಂತೆ ನಂಜೇ​ಗೌಡ ಕುಟುಂಬ ಮನವಿ ಮಾಡಿ​ಕೊಂಡಿದೆ.

Follow Us:
Download App:
  • android
  • ios