ಕನಕಪುರ (ಡಿ.09):  ನಕಲಿ ಮತದಾರರ ಗುರುತಿನ ಚೀಟಿ ತಯಾರಿಸುತ್ತಿದ್ದ ಸೈಬರ್‌ ಸೆಂಟರ್‌ಗಳ ಮೇಲೆ ತಹಸೀಲ್ದಾರ್‌ ದಾಳಿ ನಡೆಸಿ ಕೆಲ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

ಸಾರ್ವಜನಿಕರ ಖಚಿತ ಮಾಹಿತಿ ಮೇರೆಗೆ ನಗರದ ಹಲವು ಸೈಬರ್‌ ಕೇಂದ್ರಗಳ ಮೇಲೆ ಮಂಗಳವಾರ ಸಂಜೆ ದಾಳಿ ನಡೆಸಿದ ತಹಶೀಲ್ದಾರ್‌ ವರ್ಷಾ ಒಡೆಯರ್‌ ಮತ್ತು ತಂಡ ಎಸ್‌ಎಲ್‌ವಿ ಸೈಬರ್‌ ಸೆಂಟರ್‌ ಹಾಗೂ ವೈದ್ಯನಾಥೇಶ್ವರ ಸೈಬರ್‌ ಸೆಂಟರ್‌ಗಳ ಮೇಲೆ ದಾಳಿ ನಡೆಸಿ ನಕಲಿ ಮತದಾರರ ಗುರುತಿನ ಚೀಟಿ ತಯಾರಿಸುತ್ತಿರುವುದನ್ನು ಪತ್ತೆ ಹಚ್ಚಿದರು. 

ಅಧಿಕೃತವಾಗಿ ಬಿಜೆಪಿ ಸೇರ್ಪಡೆ ದಿನಾಂಕ ಘೋಷಿಸಿದ ಮುಖಂಡ ..

ಈ ನಕಲಿ ಗುರುತಿನ ಚೀಟಿಯಲ್ಲಿ ಉಪವಿಭಾಗಾ​ಕಾರಿಗಳ ಸಹಿ ಇಲ್ಲದಿರುವುದು ಕಂಡು ಬಂದಿದ್ದು, ಸೈಬರ್‌ ಕೇಂದ್ರಗಳಲ್ಲಿದ್ದ ದಾಖಲೆಗಳನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆ ನಡೆಸಲು ಆದೇಶಿಸಿವುದಾಗಿ ತಹಸೀಲ್ದಾರ್‌ ತಿಳಿಸಿದ್ದಾರೆ.