ಪಾಲಿಕೆಗಳಲ್ಲಿ ಪೌರಕಾರ್ಮಿಕರ ಹಾಜರಾತಿಗೆ ಫೇಶಿಯಲ್ ರೆಕಗ್ನೇಷನ್'
- ರಾಜ್ಯದ ಎಲ್ಲಾ ನಗರ ಪಾಲಿಕೆಗಳಲ್ಲಿ ಪೌರಕಾರ್ಮಿಕರ ಹಾಜರಾತಿ ಪಡೆಯಲು ಫೇಶಿಯಲ್ ರೆಕಗ್ನೇಷನ್
- ಫೇಶಿಯಲ್ ರೆಕಗ್ನೇಷನ್ ಬೇಸೆಡ್ ಅಟೆಂಡೆನ್ಸ್ ಸಿಸ್ಟಂಅನ್ನು ಅನುಷ್ಠಾನ
ಮೈಸೂರು (ಅ.07): ರಾಜ್ಯದ ಎಲ್ಲಾ ನಗರ ಪಾಲಿಕೆಗಳಲ್ಲಿ ಪೌರಕಾರ್ಮಿಕರ (municipality workers) ಹಾಜರಾತಿ ಪಡೆಯಲು ಫೇಶಿಯಲ್ ರೆಕಗ್ನೇಷನ್ ಬೇಸೆಡ್ ಅಟೆಂಡೆನ್ಸ್ ಸಿಸ್ಟಂ(facial recognition attendance system) ಅನ್ನು ಅನುಷ್ಠಾನಗೊಳಸಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜು Byrathi basavaraju) ತಿಳಿಸಿದರು.
ಮೈಸೂರಿನಲ್ಲಿ (Mysuru) ಪೌರಕಾರ್ಮಿಕರ ಹಾಜರಾತಿ ಪಡೆಯುವ ಫೇಶಿಯಲ್ ರೆಕಗ್ನೇಷನ್ ಬೇಸಡ್ ಅಂಟೆಡೆನ್ಸ್ ಸಿಸ್ಟಂಗೆ ಅವರು ಚಾಲನೆ ನೀಡಿ ಮಾತನಾಡಿದರು.
ಪಾಲಿಕೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ಪೌರಕಾರ್ಮಿಕರ ಹಾಜರಾತಿ ಪದ್ಧತಿಯನ್ನು ವ್ಯವಸ್ಥಿತವಾಗಿ ನಿರ್ವಹಿಸುವ ಉದ್ದೇಶದಿಂದ ರಾಜ್ಯದಲ್ಲೇ ಪ್ರಥಮ ಬಾರಿಗೆ ಈ ಫೇಶಿಯಲ್ ರೆಕಗ್ನೇಷನ್ ತಂತ್ರಾಂಶ ಅಳವಡಿಸಲಾಗುತ್ತಿದೆ.
ಪೆಟ್ರೋಲ್, ಡೀಸೆಲ್ ಮೇಲಿನ ಸೆಸ್ ಇಳಿಕೆ ಸೂಚನೆ ನೀಡಿದ ಕರ್ನಾಟಕ; ಗರಿಷ್ಠ 3 ರೂ ಕಡಿತ ಸಾಧ್ಯತೆ!
ಈ ಪದ್ಧತಿಯನ್ನು ಎಲ್ಲಾ ನಗರ ಪಾಲಿಕೆಗಳಲ್ಲೂ ಅಳವಡಿಸಲಾಗುವುದು ಎಂದು ಅವರು ಹೇಳಿದರು. ಇಡೀ ನಗರವನ್ನು ಸ್ವಚ್ಛಗೊಳಿಸುವ ಜವಾಬ್ದಾರಿ ಪೌರಕಾರ್ಮಿಕರ ಮೇಲೆ ಇದೆ. ಅವರಿಂದಲ್ಲೇ ಮೈಸೂರು ನಗರ ರಾಷ್ಟ್ರಮಟ್ಟದಲ್ಲಿ ಸ್ವಚ್ಛತಾ ನಗರ ಪ್ರಶಸ್ತಿಗೆ (Celan City) ಭಾಜನವಾಗಿದೆ. ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುವ ಮೂಲಕ ನಗರದ ಸ್ವಚ್ಛತೆಗೆ ಶ್ರಮಿಸಬೇಕು ಎಂದರು.
ಸ್ಮಾರ್ಟ್ ಸಿಟಿಗೆ ಇನ್ನೂ ನಾಲ್ಕು ನಗರ
ಕಲಬುರಗಿ ಸೇರಿದಂತೆ ರಾಜ್ಯದ ನಾಲ್ಕು ಪ್ರಮುಖ ನಗರಗಳನ್ನು ಸ್ಮಾರ್ಟ್‌ಸಿಟಿ ಯೋಜನೆಯಡಿ ಪರಿಗಣಿಸುವಂತೆ ಕೇಂದ್ರಕ್ಕೆ ಕೋರಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಈಗಾಗಲೇ ರಾಜ್ಯದ 7 ನಗರಗಳನ್ನು ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಕೇಂದ್ರ ಪರಿಗಣಿಸಿದೆ. ಇದೀಗ ಮತ್ತೆ ಕಲಬುರಗಿ, ವಿಜಯಪುರ, ಬಳ್ಳಾರಿ ಹಾಗೂ ಮೈಸೂರು ನಗರಗಳನ್ನೂ ಯೋಜನೆಯಲ್ಲಿ ಪರಿಗಣಿಸುವಂತೆ ಕೋರಿದ್ದೇವೆ ಎಂದು ಹೇಳಿದರು. ಇತ್ತೀಚೆಗೆ ಕೇಂದ್ರ ನಗರಾಭಿವೃದ್ಧಿ ಸಚಿವರನ್ನು ತಾವೇ ಭೇಟಿ ಮಾಡಿ ಈ ಪ್ರಸ್ತಾವನೆ ಸಲ್ಲಿಸಿದ್ದಾಗಿ ಹೇಳಿದ ಸಚಿವರು, ಇದನ್ನು ಪರಿಗಣಿಸುವ ಭರವಸೆಯನ್ನು ಕೇಂದ್ರ ನೀಡಿದೆ ಎಂದರು.
ಮೈಸೂರು : ಪಾರಂಪರಿಕ ಶೈಲಿಯಲ್ಲೇ ಹೊಸದಾಗಿ ಈ ಕಟ್ಟಡಗಳ ಪುನರ್ ನಿರ್ಮಾಣ
ಕಲಬುರಗಿಯನ್ನು ಯಾವ ಕಾರಣಕ್ಕೂ ನಿರ್ಲಕ್ಷ್ಯ ಮಾಡುವುದಿಲ್ಲ ಎಂದ ಸಚಿವರು, ಇಷ್ಟುದಿನ ಪಾಲಿಕೆಯಲ್ಲಿ ಕೇವಲ ಕಾಂಗ್ರೆಸ್ಸಿಗೆ ಅಧಿಕಾರ ನೀಡಿರುವ ಕಲಬುರಗಿ ಮಂದಿ ಈ ಬಾರಿ ಬದಲಾವಣೆ ಬಯಸಿ ಬಿಜೆಪಿಗೆ ಮತ ನೀಡಿ ಬಹುಮತದಿಂದ ಆರಿಸಿ ತರಲಿ, ಆಗ ಕಲಬುರಗಿಯ ದಿಕ್ಕು ದೆಸೆಯನ್ನೇ ಬಿಜೆಪಿ ಬದಲಿಸುತ್ತದೆ ಎಂದರು.