ವಿಜಯಪುರ(ಜೂ.20): ಸುವರ್ಣ ನ್ಯೂಸ್‌ ಹಾಗೂ ಕನ್ನಡಪ್ರಭ ಆರಂಭಿಸಿದ ಈ ವರ್ಷ ಅರ್ಧ ಫೀ ಅಭಿಯಾನಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದ್ದು, ಜನರು ಸ್ವಯಂ ಪ್ರೇರಣೆಯಿಂದ ಶಾಲಾ ಮಕ್ಕಳಿಗೆ ಹಣಕಾಸಿನ ನೆರವು ನೀಡಲು ಮುಂದೆ ಬರುತ್ತಿದ್ದಾರೆ. 

ಹೀಗಾಗಿ ಶಾಲಾ ಮಕ್ಕಳು ಈ ವರ್ಷ ಅರ್ಧ ಫೀ ಅಭಿಯಾನ ಆರಂಭಿಸಿದ ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್‌ಗೆ ಥ್ಯಾಂಕ್ಸ್‌ ಹೇಳುತ್ತ ಧನ್ಯತೆ ಮೆರೆಯುತ್ತಿದ್ದಾರೆ. ಶಿಕ್ಷಣಕ್ಕಾಗಿ ಕಣ್ಣೀರು ಹಾಕಿದ ಪುಟಾಣಿಗಳಿಗೆ ಅಧಿಕಾರಿಗಳು, ಮುಖಂಡರು, ಸಮಾಜ ಸೇವಕರಿಂದ ನೆಹರು ಹರಿದು ಬರುತ್ತಿದೆ. 

ರಾಜ್ಯದ ಏಕೈಕ ಮಹಿಳಾ ವಿವಿಗೆ ಹೊಸ ಕುಲಪತಿ ನೇಮಕ...!

ವಿಜಯಪುರದ ನಿವೃತ್ತ ಕೃಷಿ ಅಧಿಕಾರಿ ಎಸ್‌.ಎಸ್‌. ಸಜ್ಜನ ಅವರು ವಿದ್ಯಾರ್ಥಿನಿಯರಾದ ಅಮೃತಾ ಗೊಳಸಂಗಿ, ಸಮೃದ್ಧಿ ನೀಲವಾಣಿಗೆ ತಲಾ 5001 ಗಳ ಚೆಕ್‌ ನೀಡಿದ್ದಾರೆ. ನಗರದ ಗೋಳಗುಮ್ಮಟ ರಸ್ತೆಯಲ್ಲಿನ ಬಾಲಕಿಯರ ನಿವಾಸಗಳಿಗೆ ತೆರಳಿ ಚೆಕ್‌ ವಿತರಿಸಿದ್ದಾರೆ. ವಿಜಯಪುರದ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಅವರು ಒಬ್ಬ ಬಡ ಅಟೋ ಚಾಲಕ ಛಾಯಪ್ಪ ಗೊಳಸಂಗಿ ಪುತ್ರಿಯೊಬ್ಬಳ ಒಂದು ವರ್ಷದ ಶಾಲಾ ಫೀ ಕಟ್ಟುವುದಾಗಿ ಭರವಸೆ ನೀಡಿದ್ದಾರೆ.
#NewsIn100Seconds ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್

"