ಬೆಳೆ ವಿಮೆ ಅರ್ಜಿ ಸಲ್ಲಿಕೆಗೆ ಗಡುವು ವಿಸ್ತರಿಸಿ
ಸರ್ಕಾರ ಮುಂಗಾರು ಬೆಳೆ ವಿಮೆಗೆ ಅರ್ಜಿ ಸಲ್ಲಿಸಲು ಜೂ.30 ಕೊನೆಯ ದಿನಾಂಕವನ್ನು ನಿಗದಿ ಮಾಡಿದ್ದು ಆದರೆ ಸರ್ವರ್ ಬ್ಯುಸಿ ಸಮಸ್ಯೆಯಿಂದ ಅರ್ಹ ರೈತರು ವಿಮೆ ಅರ್ಜಿ ಸಲ್ಲಿಸಿ ವಿಮಾಕಂತು ಪಾವತಿಸಲು ಸಾಧ್ಯವಾಗದ ಕಾರಣ ವಿಮೆಕಟ್ಟಲು ದಿನಾಂಕವನ್ನು ವಿಸ್ತರಿಸಬೇಕೆಂದು ರೈತರು ಒತ್ತಾಯಿಸಿದ್ದಾರೆ.
ತಿಪಟೂರು: ಸರ್ಕಾರ ಮುಂಗಾರು ಬೆಳೆ ವಿಮೆಗೆ ಅರ್ಜಿ ಸಲ್ಲಿಸಲು ಜೂ.30 ಕೊನೆಯ ದಿನಾಂಕವನ್ನು ನಿಗದಿ ಮಾಡಿದ್ದು ಆದರೆ ಸರ್ವರ್ ಬ್ಯುಸಿ ಸಮಸ್ಯೆಯಿಂದ ಅರ್ಹ ರೈತರು ವಿಮೆ ಅರ್ಜಿ ಸಲ್ಲಿಸಿ ವಿಮಾಕಂತು ಪಾವತಿಸಲು ಸಾಧ್ಯವಾಗದ ಕಾರಣ ವಿಮೆಕಟ್ಟಲು ದಿನಾಂಕವನ್ನು ವಿಸ್ತರಿಸಬೇಕೆಂದು ರೈತರು ಒತ್ತಾಯಿಸಿದ್ದಾರೆ.
ರೈತರು ಬಿತ್ತಿರುವ ಎಳ್ಳು, ಹೆಸರು, ಉದ್ದು ಮತ್ತಿತರೆ ಮುಂಗಾರು ಬೆಳೆಗಳು ಮಳೆ ಕೊರತೆಯ ಕಾರಣ ಒಣಗಿ ನಷ್ಟಕ್ಕೊಳಗಾಗುತ್ತಿವೆ. ಆದರೆ ವಿಮೆ ಕಟ್ಟಲು ಸರ್ಕಾರ ಕಡಿಮೆ ಅವಧಿ ನೀಡಿ ನಿರ್ದೇಶನ ನೀಡಿ ದಿನಾಂಕವನ್ನು ನಿಗದಿಪಡಿಸಿತ್ತು.
ಈ ಹಿನ್ನಲೆಯಲ್ಲಿ ಗ್ರಾಮ ಒನ್, ಸಿಎಸ್‌ಸಿ ಸೆಂಟರ್ ಹಾಗೂ ಬ್ಯಾಂಕುಗಳ ಮುಂದೆ ರೈತರು ಅರ್ಜಿ ದಾಖಲಾತಿಗಳನ್ನು ಹಿಡಿದುಕೊಂಡು ಸರದಿ ಸಾಲಿನಲ್ಲಿ ಬೆಳಗ್ಗೆಯಿಂದ ಸಂಜೆಯವರೆಗೆ ತಮ್ಮೆಲ್ಲ ಕೆಲಸ ಕಾರ್ಯಗಳ ಜೊತೆ ತಿಂಡಿ, ಊಟ ಬಿಟ್ಟು ಕಾಯುತ್ತಿದ್ದರೂ ಸರ್ವರ್ ಮತ್ತಿತರೆ ಸಮಸ್ಯೆಗಳಿಂದ ವಿಮೆ ಕಟ್ಟಲಾಗುತ್ತಿಲ್ಲ. ಪ್ರತಿ ವರ್ಷ ಮುಗಾರು ಬೆಳೆ ವಿಮೆ ಕಟ್ಟಲು ಸರ್ಕಾರ ಒಂದು ತಿಂಗಳು ಸಮಯದ ಅವಕಾಶವನ್ನು ನೀಡುತ್ತಿದ್ದು ಈ ಬಾರಿ ಕೆಲವೇ ದಿನಗಳ ಅವಕಾಶವನ್ನು ಮಾತ್ರ ನೀಡಲಾಗಿರುವುದು ಸರಿಯಲ್ಲ. ರೈತರಿಗೆ ಬೆಳೆ ವಿಮೆ ಅತ್ಯವಶ್ಯವಾಗಿದ್ದು ಕೂಡಲೇ ಸರ್ಕಾರ ಬೆಳೆ ವಿಮೆಯ ದಿನಾಂಕವನ್ನು ಜುಲೈ ತಿಂಗಳ ಅಂತ್ಯದವರೆಗೆ ವಿಸ್ತರಣೆ ಮಾಡಬೇಕೆಂದು ರೈತರು ಒತ್ತಾಯಿಸಿದ್ದಾರೆ.
ಭಾರಿ ಬೆಲೆ ಏರಿಕೆ ಕಂಡಿರುವ ಟೊಮೆಟೋ
ನವದೆಹಲಿ (ಜುಲೈ 1, 2023): ಭಾರಿ ಬೆಲೆ ಏರಿಕೆ ಕಂಡಿರುವ ಟೊಮೆಟೋ ಮತ್ತು ತೊಗರಿ ಬೇಳೆ ಬೆಲೆಯನ್ನು ಇಳಿಕೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ. ಟೊಮೆಟೋ ಉತ್ಪಾದನೆ ಹಾಗೂ ಪೂರೈಕೆ ಹೆಚ್ಚಳಗೊಂಡಿದ್ದು, 15 ದಿನದಲ್ಲಿ ಬೆಲೆ ಇಳಿಕೆ ಆರಂಭವಾಗಲಿದೆ. ಹೆಚ್ಚುವರಿಯಾಗಿ 12 ಲಕ್ಷ ಟನ್ ತೊಗರಿ ಬೇಳೆ ಆಮದು ಮಾಡಿಕೊಳ್ಳಲಾಗುತ್ತಿದೆ ಎಂದು ಗ್ರಾಹಕ ಸಚಿವಾಲಯದ ಕಾರ್ಯದರ್ಶಿ ರೋಹಿತ್ ಕುಮಾರ್ ಹೇಳಿದ್ದಾರೆ.
ಪ್ರತಿ ವರ್ಷವೂ ಈ ಅವಧಿಯಲ್ಲಿ ಟೊಮೆಟೋ ಬೆಲೆ ಏರಿಕೆಯಾಗುತ್ತದೆ. ಕೃಷಿ ಋತುಮಾನವನ್ನು ಅಲವಂಬಿಸಿರುವುದರಿಂದ, ಟೊಮೆಟೋವನ್ನು ಹೆಚ್ಚಿನ ಕಾಲ ಸಂಗ್ರಹಿಸಲು ಸಾಧ್ಯವಿಲ್ಲದ ಕಾರಣ ಈ ಬದಲಾವಣೆ ಅನಿವಾರ್ಯವಾಗಿದೆ. ಇದೀಗ ಟೊಮೆಟೋ ಉತ್ಪಾದನೆ ಹೆಚ್ಚಳಗೊಂಡಿದ್ದು, ಮುಂದಿನ 15 ದಿನಗಳಲ್ಲಿ ಬೆಲೆ ಇಳಿಕೆಯಾಗಲು ಆರಂಭವಾಗುತ್ತದೆ. 1 ತಿಂಗಳಲ್ಲಿ ಬೆಲೆ ಸ್ಥಿಮಿತಕ್ಕೆ ಬರಲಿದೆ ಎಂದು ಅವರು ಹೇಳಿದ್ದಾರೆ.
ಇದನ್ನು ಓದಿ: ದೇಶದ ಬಹುತೇಕ ರಾಜ್ಯಗಳಲ್ಲಿ ಟೊಮೆಟೋ 100 ರೂ.ಗೆ ಜಂಪ್: ಬೆಲೆ ಏರಿಕೆ ತಡೆಯಲು ಸರ್ಕಾರದಿಂದ ‘ಟೊಮೆಟೋ ಗ್ರಾಂಡ್ ಚಾಲೆಂಜ್’
ಅದೇ ರೀತಿ ಕೇಜಿಗೆ 180 ರೂ. ತಲುಪಿರುವ ತೊಗರಿ ಬೇಳೆ ಬೆಲೆಯನ್ನು ಇಳಿಕೆ ಮಾಡಲು ಕಳೆದ ವರ್ಷಕ್ಕಿಂತ ಹೆಚ್ಚುವರಿಯಾಗಿ ಶೇ. 35ರಷ್ಟು ತೊಗರಿ ಬೇಳೆ ಆಮದು ಮಾಡಿಕೊಳ್ಳಲು ಸರ್ಕಾರ ನಿರ್ಧಾರ ಮಾಡಿದೆ. ಪ್ರತಿವರ್ಷ ನಾವು ಸುಮಾರು 45 ಟನ್‌ನಷ್ಟು ತೊಗರಿ ಬೇಳೆಯನ್ನು ಬಳಕೆ ಮಾಡುತ್ತೇವೆ. ಈ ಬಾರಿ ಹೆಚ್ಚುವರಿಯಾಗಿ 12 ಟನ್ ಬೇಳೆಯನ್ನು ಆಮದು ಮಾಡಿಕೊಳ್ಳಲಾಗುತ್ತದೆ. ಪೂರೈಕೆ ಹೆಚ್ಚಳವಾಗುವುದರಿಂದ ಬೆಲೆ ಇಳಿಕೆಯಾಗಲಿದೆ ಎಂದು ಅವರು ಹೇಳಿದ್ದಾರೆ.
ಬೆಲೆ ಏರಿಕೆ ತಡೆಯಲು ಸರ್ಕಾರದಿಂದ ‘ಟೊಮೆಟೋ ಗ್ರಾಂಡ್ ಚಾಲೆಂಜ್’
ಟೊಮೆಟೋ ಬೆಲೆಯಲ್ಲಿ ದಿಢೀರ್ ಏರಿಕೆ ಮತ್ತು ಇಳಿಕೆಯನ್ನು ತಡೆಗಟ್ಟಲು ವಿನೂತನ ಯೋಜನೆಗಳನ್ನು ಪಡೆದುಕೊಳ್ಳುವ ಉದ್ದೇಶದಿಂದ ‘ಟೊಮೆಟೋ ಗ್ರೇಟ್ ಚಾಲೆಂಜ್’ ಅನ್ನು ಸರ್ಕಾರ ಆರಂಭಿಸಲಿದೆ ಎಂದು ಕೇಂದ್ರ ಗ್ರಾಹಕ ಸಚಿವಾಲಯ ಮಂಗಳವಾರ ಹೇಳಿದೆ. ಈ ಯೋಜನೆಯ ಮೂಲಕ ಟೊಮೆಟೋ ಉತ್ಪಾದನೆಯ ಹೆಚ್ಚಳ, ಸಂಸ್ಕರಣೆ ಮತ್ತು ಸಂಗ್ರಹಣೆಗೆ ಸೇರಿದಂತೆ ಹಲವು ಅಭಿಪ್ರಾಯಗಳನ್ನು ಜನರಿಂದ ಸಂಗ್ರಹ ಮಾಡಲಾಗುತ್ತದೆ.
ಇದನ್ನೂ ಓದಿ: Good News: ಬೇಳೆ ಕಾಳುಗಳ ಬೆಲೆ ತಗ್ಗಿಸಲು ಮುಂದಾದ ಕೇಂದ್ರ ಸರ್ಕಾರ