‘ಬಲಿಜರ 2ಎ ಮೀಸಲನ್ನು ಉದ್ಯೋಗಕ್ಕೂ ವಿಸ್ತರಿಸಿ’

ಶಿಕ್ಷಣದಲ್ಲಿ ಬಲಿಜ ಸಮಾಜಕ್ಕೆ ದೊರೆತಿರುವ 2ಎ ಮೀಸಲಾತಿಯನ್ನು ಉದ್ಯೋಗ ಮತ್ತು ರಾಜಕೀಯಕ್ಕೂ ವಿಸ್ತರಿಸುವಂತೆ ಸರ್ಕಾರದ ಮೇಲೆ ಒತ್ತಡ ತರಲು ಬಲಿಜ ಸಮುದಾಯ ಒಗ್ಗೂಡಿ ಹೋರಾಟ ನಡೆಸುವ ಅನಿವಾರ್ಯತೆ ಇದೆ ಎಂದು ಮಾಜಿ ಮಂತ್ರಿ ಹಾಗೂ ಬಲಿಜ ಸಮುದಾಯದ ಮುಖಂಡ ಎಂ.ಆರ್‌.ಸೀತಾರಾಮಯ್ಯ ಹೇಳಿದರು.

Extend Balija 2A reservation to employment snr

 ತುಮಕೂರು :  ಶಿಕ್ಷಣದಲ್ಲಿ ಬಲಿಜ ಸಮಾಜಕ್ಕೆ ದೊರೆತಿರುವ 2ಎ ಮೀಸಲಾತಿಯನ್ನು ಉದ್ಯೋಗ ಮತ್ತು ರಾಜಕೀಯಕ್ಕೂ ವಿಸ್ತರಿಸುವಂತೆ ಸರ್ಕಾರದ ಮೇಲೆ ಒತ್ತಡ ತರಲು ಬಲಿಜ ಸಮುದಾಯ ಒಗ್ಗೂಡಿ ಹೋರಾಟ ನಡೆಸುವ ಅನಿವಾರ್ಯತೆ ಇದೆ ಎಂದು ಮಾಜಿ ಮಂತ್ರಿ ಹಾಗೂ ಬಲಿಜ ಸಮುದಾಯದ ಮುಖಂಡ ಎಂ.ಆರ್‌.ಸೀತಾರಾಮಯ್ಯ ಹೇಳಿದರು.

ನಗರದ ಮಂಜುನಾಥ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಬಲಿಜ ಸಂಘ, ಶ್ರೀ ಯೋಗಿನಾರಾಯಣ ಸೇವಾ ಸಮಿತಿ ವತಿಯಿಂದ ಆಯೋಜಿಸಿದ್ದ ಯೋಗಿನಾರೇಯಣ ಯತೀಂದ್ರದ 188ನೇ ಜೀವ ಸಮಾಧಿ ಮಹೋತ್ಸವ ಹಾಗೂ ಹೆಣ್ಣು ಮಕ್ಕಳ ವಿದ್ಯಾರ್ಥಿ ನಿಲಯದ ಉದ್ಘಾಟನೆ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. 2002ರಲ್ಲಿ 2ಎ ನಲ್ಲಿದ್ದ ಬಲಿಜ ಸಮುದಾಯವನ್ನು 3ಎಗೆ ಸೇರಿಸಲಾಯಿತು. ಆದರೆ ಬಿ.ಎಸ್‌.ಯಡಿಯೂರಪ್ಪ ಅವರ ಕಾಲದಲ್ಲಿ ನಮ್ಮಗಳ ಹೋರಾಟದ ಫಲವಾಗಿ ಶಿಕ್ಷಣದಲ್ಲಿ ಮಾತ್ರ ಸಮುದಾಯವನ್ನು 2ಎಗೆ ಸೇರಿಸಲಾಗಿದೆ. ಇದನ್ನು ಉದ್ಯೋಗ, ರಾಜಕೀಯ ಕ್ಷೇತ್ರಕ್ಕೂ ವಿಸ್ತರಿಸಬೇಕೆಂದರೆ ಒಗ್ಗಟ್ಟಿನ ಹೋರಾಟವೊಂದೇ ಅಸ್ತ್ರವೆಂದರು.

ಕಳೆದ ನಲವತ್ತು ವರ್ಷಗಳ ಹಿಂದೆ ನಮ್ಮ ತಂದೆ ಎಂ.ಎಸ್‌.ರಾಮಯ್ಯ ಅವರು ತುಮಕೂರು ನಗರದಲ್ಲಿ ವಿದ್ಯಾರ್ಥಿ ನಿಲಯವನ್ನು ಉದ್ಘಾಟಿಸಿದ್ದರು. ಇಂದು ನಾನು ಮಹಿಳಾ ವಿದ್ಯಾರ್ಥಿ ನಿಲಯವನ್ನು ಉದ್ಘಾಟಿಸಿದ್ದೇನೆ. ಇದರಿಂದ ಮಹಿಳಾ ಶಿಕ್ಷಣಕ್ಕೆ ಒತ್ತು ನೀಡಬೇಕೆಂಬ ನಮ್ಮ ಆಶಯ ಈಡೇರಿದೆ. ಜಿಲ್ಲಾ ಬಲಿಜ ಸಂಘದ ಅಧ್ಯಕ್ಷರಾದ ಟಿ.ಆರ್‌.ಅಂಜನಪ್ಪ ಅವರು ದಾನಿಗಳ ಸಹಾಯದಿಂದ ಕಟ್ಟಡವನ್ನು ಸುಸಜ್ಜಿತವಾಗಿ ನಿರ್ಮಾಣ ಮಾಡಿದ್ದಾರೆ. ದಕ್ಷತೆ ಮತ್ತು ಪ್ರಾಮಾಣಿಕತೆ ಇದ್ದರೆ, ದಾನಿಗಳಿಗೆ ಕೊರತೆ ಇಲ್ಲ ಎಂಬುದನ್ನು ನಿರೂಪಿಸಿದ್ದಾರೆ. ಇದರ ಪ್ರಯೋಜನವನ್ನು ಸಮುದಾಯದ ಪ್ರತಿಭಾವಂತ, ಬಡ ವಿದ್ಯಾರ್ಥಿನಿಯರು ಪಡೆದುಕೊಳ್ಳಬೇಕು. ಯುವಜನತೆ ರಾಜಕಾರಣಕ್ಕೆ ಬರಬೇಕು. ನಮ್ಮ ಸಮುದಾಯದ ಯಾವುದೇ ವ್ಯಕ್ತಿ ಚುನಾವಣೆಗೆ ಸ್ಪರ್ಧಿಸಿದರೆ, ಆತನ ನೆರವಿಗೆ ಸಮುದಾಯ ಧಾವಿಸಬೇಕು. ಪರಸ್ಪರ ಕಾಲೆಳೆಯುವುದನ್ನು ಬಿಡಬೇಕು. ಹುಟ್ಟು ಸಾವಿನ ನಡುವೆ ಸಾರ್ಥಕ ಹೆಜ್ಜೆ ಗುರುತುಗಳನ್ನು ಬಿಟ್ಟು ಹೋದರೆ, ಅದು ಮುಂದಿನ ಪೀಳಿಗೆಗೆ ದಾರಿ ದೀಪವಾಗಲಿದೆ ಎಂದು ಎಂ.ಆರ್‌.ಸೀತರಾಮಯ್ಯ ನುಡಿದರು.

ಸ್ಫೂರ್ತಿ ಚಿದಾನಂದ್‌ ಮಾತನಾಡಿ, 2010ರಲ್ಲಿ ಸರ್ಕಾರ ನೀಡಿದ 4500 ಚ.ಅಡಿ ಸಿ.ಎ.ನಿವೇಶನದಲ್ಲಿ ಸುಸಜ್ಜಿತವಾಗಿ ಮಹಿಳಾ ಹಾಸ್ಟೆಲ್‌ ನಿರ್ಮಾಣ ಮಾಡಲಾಗಿದೆ. ಬೆಂಗಳೂರಿನಲ್ಲಿ ಇದ್ದ ಹಾಸ್ಟೆಲ್‌ವೊಂದು ಹರಾಜಿಗೆ ಬಂದಾಗ, ಅಂದಿನ ಅಪೆಕ್ಸ್‌ ಬ್ಯಾಂಕಿನ ಅಧ್ಯಕ್ಷರು, ಈಗಿನ ಸಹಕಾರ ಸಚಿವ ಕೆ.ಎನ್‌.ರಾಜಣ್ಣ ಮತ್ತು ಎಂ.ಆರ್‌.ಸೀತಾರಾಮ್‌ ಅವರು ಬಹಳಷ್ಟುಶ್ರಮವಹಿಸಿ ಜಾಗವನ್ನು ಸಮುದಾಯಕ್ಕೆ ಸಿಗುವಂತೆ ಮಾಡಿದ್ದಾರೆ. ಇದಕ್ಕಾಗಿ ಇಬ್ಬರಿಗೂ ಸಮುದಾಯ ಚಿರಋುಣಿಯಾಗಿದೆ. ಈಗಾಗಲೇ ನಮ್ಮ ಗುರುಗಳಾದ ಕೈವಾರ ತಾತಯ್ಯ ಅವರ ಜನ್ಮಜಯಂತಿಯನ್ನು ಸರ್ಕಾರವೇ ಆಚರಿಸುತ್ತಿದೆ. ಸಮುದಾಯದ ಅಭಿವೃದ್ಧಿಗೆ ಬಲಿಜ ಅಭಿವೃದ್ಧಿ ನಿಗಮದ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕಿದೆ ಎಂದರು.

ಬಲಿಜ ಸಮುದಾಯದ ಮುಖಂಡ ಎನ್‌.ಗೋವಿಂದರಾಜು ಮಾತನಾಡಿ, ರಾಜಕಾರಣದಲ್ಲಿ ಬಲಿಜ ಸಮುದಾಯದ ಸ್ಥಿತಿ ಶೋಚನೀಯವಾಗಿದ್ದು, ಶೈಕ್ಷಣಿಕವಾಗಿಯೂ ಕುಂಠಿತವಾಗಿದೆ. ಹಾಗಾಗಿ ಶೈಕ್ಷಣಿಕ, ರಾಜಕೀಯ ಹಾಗೂ ಔದ್ಯೋಗಿಕ ಕ್ಷೇತ್ರದಲ್ಲಿ ನಮಗೆ 2ಎ ಮೀಸಲಾತಿ ಸಿಕ್ಕಾಗ, ಈ ಮೂರು ಕ್ಷೇತ್ರಗಳಲ್ಲಿ ಹೆಚ್ಚಿನ ಸಾಧನೆ ಸಾಧ್ಯ. ಈ ನಿಟ್ಟಿನಲ್ಲಿ ಹಾಲಿ ಸರ್ಕಾರದ ಭಾಗವಾಗಿರುವ ಶಾಸಕರು,ವಿಧಾನ ಪರಿಷತ್‌ ಸದಸ್ಯರು ಒಗ್ಗೂಡಿ ಹೋರಾಟ ನಡೆಸಿದರೆ, ನಮ್ಮ ಕೈಲಾದ ಎಲ್ಲಾ ರೀತಿಯ ಸಹಕಾರ ನೀಡಲು ಸಿದ್ಧ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಬಲಿಜ ಸಂಘದ ಅಧ್ಯಕ್ಷ ಟಿ.ಆರ್‌.ಅಂಜನಪ್ಪ ವಹಿಸಿದ್ದರು. ಹಾಸ್ಟೆಲ್‌ ನಿರ್ಮಾಣಕ್ಕೆ ಸಹಕರಿಸಿದ ಸಮುದಾಯದ ಹಿರಿಯರನ್ನು ಗೌರವಿಸಲಾಯಿತು. ಸುಮಾರು 200ಕ್ಕೂ ಹೆಚ್ಚು ಪ್ರತಿಭಾವಂತ ಮಕ್ಕಳನ್ನು ಗೌರವಿಸಲಾಯಿತು.

ವೇದಿಕೆಯಲ್ಲಿ ಎಚ್‌.ಎ.ವೆಂಕಟೇಶ್‌, ಸಿ.ಮುನಿರಾಜು, ಚಿಕ್ಕನರಸಿಂಹಯ್ಯ, ತಿಪ್ಪೇಸ್ವಾಮಿ, ಚಿಕ್ಕರಂಗಯ್ಯ, ಜಿಲ್ಲಾ ಬಲಿಜ ಸಂಘದ ಮಾಜಿ ಕಾರ್ಯದರ್ಶಿ ಬಿ.ವೆಂಕಟೇಶ್‌, ಕಾರ್ಯದರ್ಶಿ ಟಿ.ಆರ್‌.ಎಚ್‌. ಪ್ರಕಾಶ್‌, ಜಂಟಿ ಕಾರ್ಯದರ್ಶಿ ಜಯಣ್ಣ, ಮಂಜುನಾಥ್‌, ಗುತ್ತಿಗೆದಾರ ಜಗದೀಶ್‌,ದಿವಾಕರ್‌,ಗೀತಮ್ಮ ಮತ್ತಿತರರು ಉಪಸ್ಥಿತರಿದ್ದರು.

ಕೋಟ್‌...1

ಸಂಘದ ದೂರದೃಷ್ಟಿಯ ಫಲವಾಗಿ ಇಂದು ಮಹಿಳಾ ಹಾಸ್ಟೆಲ್‌ ತಲೆ ಎತ್ತಿ ನಿಂತಿದೆ. ಸಮಾಜದ ಅವಶ್ಯಕತೆಯನ್ನು ತಿಳಿದು, ಅದನ್ನು ಪೂರೈಸುವ ನಿಟ್ಟಿನಲ್ಲಿ ಸಮುದಾಯಗಳು ಮುಂದಾಗುವ ನಿಟ್ಟಿನಲ್ಲಿ ಹೆಚ್ಚಿನ ಅಸಕ್ತಿ ವಹಿಸಬೇಕಿದೆ. ಒಂದು ಸಮುದಾಯ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಿದರೆ, ಅದರಿಂದ ಸಾಮಾಜಿಕ, ಆರ್ಥಿಕ, ರಾಜಕೀಯ ಅಭಿವೃದ್ಧಿಯನ್ನು ನಿರೀಕ್ಷಿಸಬಹುದಾಗಿದೆ. ಈ ಕೆಲಸವನ್ನು ಮಠ, ಮಾನ್ಯಗಳು ಮಾಡಿವೆ. ಶೈಕ್ಷಣಿಕವಾಗಿ ಎಂ.ಎಸ್‌. ರಾಮಯ್ಯ, ಸಿದ್ಧಗಂಗಾ, ಸಿದ್ದಾರ್ಥ ಸಂಸ್ಥೆಗಳು ಹಾಕಿಕೊಟ್ಟತಳಹದಿ, ಆ ಸಮುದಾಯಗಳು ಶೈಕ್ಷಣಿಕ ಅಭಿವೃದ್ಧಿಗೆ ದೊಡ್ಡ ಕೊಡುಗೆ ನೀಡಿವೆ. ಎಲ್ಲಾ ಸಮುದಾಯದಲ್ಲಿಯೂ ಬಡವರು, ಮಧ್ಯಮವರ್ಗದ ಜನರಿದ್ದು, ಅವರ ಅಗತ್ಯತೆಗಳ ಕಡೆಗೆ ಸಂಘ ಸಂಸ್ಥೆಗಳು ಗಮನಹರಿಸಬೇಕಾಗಿದೆ.

ಜ್ಯೋತಿಗಣೇಶ್‌ ಶಾಸಕ

ಶುಭ ಸಮಾರಂಭಗಳಿಗೆ ಮಂಗಳ ದ್ರವ್ಯಗಳಾದ ಹರಿಸಿಣ, ಕುಂಕುಮ, ಬಳೆ ಒದಗಿಸುವ ವೃತ್ತಿಯನ್ನು ಮಾಡಿಕೊಂಡು ಬಂದಿರುವ ಈ ಸಮುದಾಯ ಶೈಕ್ಷಣಿಕ, ರಾಜಕೀಯ, ಔದ್ಯೋಗಿಕವಾಗಿ ಮುಂದೆ ಬರಬೇಕಾಗಿದೆ. ನನ್ನ ರಾಜಕೀಯ ತಿಳುವಳಿಕೆ ಪ್ರಕಾರ ಸ್ವಾಭಿಮಾನಿ ರಾಜಕಾರಣ ಸಾಧ್ಯವಿಲ್ಲ. ಸ್ವಾವಲಂಬಿ ರಾಜಕಾರಣ ಸಾಧ್ಯವಿದೆ. ಈ ನಿಟ್ಟಿನಲ್ಲಿ ಸಮುದಾಯದ ರಾಜಕೀಯ ಬೆಳವಣಿಗೆ ನಾವೆಲ್ಲರೂ ಒಗ್ಗೂಡಿ ಶ್ರಮಿಸೋಣ.

ತಾರಾ ಅನುರಾಧ ವಿಧಾನ ಪರಿಷತ್‌ ಮಾಜಿ ಸದಸ್ಯೆ ಹಾಗೂ ಚಲನಚಿತ್ರ ನಟಿ 

Latest Videos
Follow Us:
Download App:
  • android
  • ios