Asianet Suvarna News Asianet Suvarna News

ರಾಜ್ಯ ಸರ್ಕಾರದ ಮುಂದೆ ಡಿಮ್ಯಾಂಡ್ ಇಟ್ಟ ಮಾಜಿ ಸಚಿವ ಎನ್.ಮಹೇಶ್

ಮಾನವ ಮತ್ತು ಪ್ರಾಣಿ ಸಂಘರ್ಷ ತಡೆಗಟ್ಟುವ ನಿಟ್ಟಿನಲ್ಲಿ ಇಲಾಖೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ಇದಕ್ಕೆ ಪೂರಕವಾಗಿ ರಾಜ್ಯ ಸರಕಾರ ಅನುದಾನ ಬಿಡುಗಡೆಗೊಳಿಸಬೇಕು ಎಂದು ಮಾಜಿ ಸಚಿವ ಎನ್.ಮಹೇಶ್ ಒತ್ತಾಯಿಸಿದರು.

Ex minister N Mahesh who placed a demand before the state government snr
Author
First Published Nov 11, 2023, 9:32 AM IST

 ಸರಗೂರು :  ಮಾನವ ಮತ್ತು ಪ್ರಾಣಿ ಸಂಘರ್ಷ ತಡೆಗಟ್ಟುವ ನಿಟ್ಟಿನಲ್ಲಿ ಇಲಾಖೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ಇದಕ್ಕೆ ಪೂರಕವಾಗಿ ರಾಜ್ಯ ಸರಕಾರ ಅನುದಾನ ಬಿಡುಗಡೆಗೊಳಿಸಬೇಕು ಎಂದು ಮಾಜಿ ಸಚಿವ ಎನ್.ಮಹೇಶ್ ಒತ್ತಾಯಿಸಿದರು.

ತಾಲೂಕಿನ ಬಿ. ಮಟಕೆರೆ ಗ್ರಾಪಂ ವ್ಯಾಪ್ತಿಯ ಕಾಡಬೇಗೂರು ಗ್ರಾಮದ ಜಮೀನಿನಲ್ಲಿ ನಾಲ್ಕು ದಿನಗಳ ಹಿಂದೆ ಹುಲಿ ದಾಳಿಗೆ ಬಲಿಯಾದ ರೈತ ಬಾಲಾಜಿ ನಾಯ್ಕ್ ಎಂಬವರ ಮನೆಗೆ ಬಿಜೆಪಿ ನಿಯೋಗದೊಂದಿಗೆ ಭೇಟಿ ನೀಡಿದ ಅವರು, ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿ ಅವರು ಮಾತನಾಡಿದರು.

ಕಾಡಂಚಿನ ಗ್ರಾಮಗಳಲ್ಲಿ ಸಂಘರ್ಷದಂಥ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿವೆ. ಆನೆ, ಚಿರತೆ, ಹುಲಿ ದಾಳಿಗೆ ಅಮಾಯಕ ರೈತರು ಬಲಿಯಾಗುತ್ತಿದ್ದು, ಕಾಡಂಚಿನಲ್ಲಿ ನಿವಾಸಿಗಳು ಜೀವ ಹಿಡಿದುಕೊಂಡು ಜೀವಿಸುವ ವಾತಾವರಣ ಇದೆ. ಇಂಥ ಸನ್ನಿವೇಶದಲ್ಲಿ ರಾಜ್ಯ ಸರ್ಕಾರ ಶಾಶ್ವತವಾದ ಪರಿಹಾರ ಕಂಡುಕೊಳ್ಳಬೇಕು. ಆನೆ ಕಂದಕ, ರೈಲ್ವೆ ಕಂಬಿ ಅಳವಡಿಕೆಗೆ ಅನುದಾನ ಬಿಡುಗಡೆಗೊಳಿಸಬೇಕು. ಸ್ಥಳೀಯ ಶಾಸಕರು ಹೆಚ್ಚಿನ ಗಮನಹರಿಸಬೇಕು ಎಂದು ತಿಳಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷೆ ಮಂಗಳ ಸೋಮಶೇಖರ್ ಮಾತನಾಡಿದರು.

ಕಾಂಪೋಸ್ಟ್ ನಿಗಮದ ಮಾಜಿ ಅಧ್ಯಕ್ಷ ಎಸ್. ಮಹದೇವಯ್ಯ ಅವರು ಬಾಲಾಜಿ ನಾಯ್ಕ ಅವರ ಇಬ್ಬರು ಹೆಣ್ಣು ಮಕ್ಕಳ ಮುಂದಿನ ವಿದ್ಯಾಭ್ಯಾಸಕ್ಕೆ ನೆರವಾಗುವಂತೆ ಸಮಾಜ ಕಲ್ಯಾಣ ಇಲಾಖೆಗೆ ಸೂಚಿಸಲಾಗುವುದು ಎಂದರು.

ರಾಜ್ಯ ಹಿಂದುಳಿದ ವರ್ಗಗಳ ಪ್ರಧಾನ ಕಾರ್ಯದರ್ಶಿ ಸುರೇಶ್ ಬಾಬು, ಜಿಲ್ಲಾ ರೈತ ಮೋರ್ಚಾದ ರಮೇಶ್ ಕುಮಾರ್, ಜಿಲ್ಲಾ ಕಾರ್ಯದರ್ಶಿ ಮೋಹನ್, ಪಪಂ ಅಧ್ಯಕ್ಷೆ ರಾಧಿಕಾ ಶ್ರೀನಾಥ್, ತಾಲೂಕು ಬಿಜೆಪಿ ಘಟಕದ ಅಧ್ಯಕ್ಷ ಗುರುಸ್ವಾಮಿ, ಮಾಜಿ ಅಧ್ಯಕ್ಷ ಸಿ.ಕೆ. ಗಿರೀಶ್, ಎಸಿಎಫ್ ಪರಮೇಶ್, ಎಸ್ ಐ ನಂದೀಶ್ ಕುಮಾರ್, ತಾಪಂ ಮಾಜಿ ಅಧ್ಯಕ್ಷೆ ಮಂಜುಳಾ ದೇವಣ್ಣ, ಟೌನ್ ಪ್ರಧಾನ ಕಾರ್ಯದರ್ಶಿ ರಾಜೇಶ್ ಇದ್ದರು.

ಮಂಗಗಳ ಮಾರಣಹೋಮ

ರಾಮನಗರ (ಅ.30):  ರೇಷ್ಮೆನಗರಿ ರಾಮನಗರ ಜಿಲ್ಲೆಯಲ್ಲಿ ಹಲವಾರು ವರ್ಷಗಳಿಂದ ಕಾಡುಪ್ರಾಣಿಗಳ ಹಾವಳಿ ಹೆಚ್ಚುತಲೆ ಇದೆ, ಒಂದು ಕಡೆ ಆನೆ ಮತ್ತೊಂದು ಕಡೆ ಚಿರತೆ,ಹಾಗೂ ಕರಡಿ ಹೀಗೆ ಹಲವಾರು ಪ್ರಾಣಿಗಳ ಹಾವಳಿಯಿಂದ ಜನರು ಬೇಸತ್ತು ಹೋಗಿದ್ದಾರೆ, ಆದರೆ ಜನರಿಗೆ ತೊಂದರೆ ಕೊಡದೆ ಎಳನೀರು, ಕಡಲೆಕಾಯಿ, ತಿಂದು ಬದುಕುತ್ತಿದ್ದ ಕೋತಿಗಳಿಗೆ ವಿಷ ಹಾಕಿ ಸಾಯಿಸಿರುವ ಘಟನೆ ಬೆಳಕಿಗೆ ಬಂದಿದೆ.

ಸಾಯಿಸಿದ ಕೋತಿಗಳನ್ನು ಮೂಟೆಕಟ್ಟಿ ಎಸೆದು ಹೋದ ನರಭಕ್ಷಕರು

ರಾಮನಗರ ಜಿಲ್ಲೆಗೆ ಹೊಸದಾಗಿ ಆರಂಭಗೊಂಡ ಹಾರೋಹಳ್ಳಿ ತಾಲೂಕಿನ ಯಲಚವಾಡಿ ಪಂಚಾಯಿತಿ ವ್ಯಾಪ್ತಿಯ ಭೀಮ ಚಂದ್ರ ದೊಡ್ಡಿ ಗ್ರಾಮದ ರಸ್ತೆ ಬದಿಯ ಪಕ್ಕ ಗೋಣಿಚೀಲ ಎಸೆದು ಹೋಗಿದ್ದ ದುಷ್ಕರ್ಮಿಗಳು. ದಾರಿಹೋಕನೊಬ್ಬ ಗೋಣಿಚೀಲ ಬಿಚ್ಚಿ ನೋಡಿದಾಗ ಸುಮಾರು 3 ಕೋತಿಗಳು ಹಾಗೂ ನಾಲ್ಕು ಕೋತಿ ಮರಿಗಳು ಸತ್ತಿರುವ ಘಟನೆ ಬೆಳಕಿಗೆ ಬಂದಿದೆ. ಇನ್ನು ಈಉ ಕೋತಿಗಳನ್ನು ಬೇರೆಡೆ ಸಾಯಿಸಿ ಇಲ್ಲಿ ತಂದು ಎಸೆದಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

Haveri: ಸರ್ಕಾರಿ ಬಸ್‍ ಏರಿದ ಆಂಜನೇಯ: 30 ಕಿಲೋ ಮೀಟರ್ ಪ್ರಯಾಣಿಸಿದ ಕೋತಿ!

ಅಂದಹಾಗೆ ಕಳೆದ ಐದು ವರ್ಷಗಳಿಂದ ಕೋತಿಗಳ ಸಂಖ್ಯೆ ಜಿಲ್ಲೆಯಲ್ಲಿ ಗಣನೀಯವಾಗಿ ಹೆಚ್ಚುತ್ತಿದೆ. ಹಾಗಾಗಿ ಕೋತಿಗಳು ಆಹಾರ ಹರಿಸಿ ಗ್ರಾಮಗಳ ಮೇಲೆ ವಲಸೆ ಹೋಗಲು ಆರಂಭಿಸಿವೆ. ಗ್ರಾಮಗಳಲ್ಲಿ ಸಿಗುವ ಎಳನೀರು ಕಡಲೆಕಾಯಿ ಹಾಗೂ ಚೀಪೆ ಇನ್ನು ಮುಂತಾದ ಬೆಳೆಗಳ ಮೇಲೆ ದಾಳಿ ಮಾಡುತ್ತಿದ್ದು, ಇವನ ಹಿಮ್ಮೆಟ್ಟಿಸಲು ಜನರು ಕೂಡ ಹರಸಾಹಸ ಮಾಡುತ್ತಿದ್ದ ಯಾವುದೇ ಪ್ರಯೋಜನ ಆಗಿಲ್ಲ.ಇನ್ನೂ ಅರಣ್ಯ ಇಲಾಖೆಗೆ ದೂರು ನೀಡಿದ್ರು ಇಲಾಖೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಇದರಿಂದ ಬೇಸತ್ತ ಜನರು ವಿಷ ಹಾಕಿ ಕೋತಿಗಳನ್ನು ಸಾಯಿಸಿದ್ದಾರೆ ಎಂದು  ಆರೋಪಿಸಿದ್ದಾರೆ.

ವಕೀಲರ ಕಚೇರಿಲಿ ಕೋತಿಯ ಕಡತ ಪರಿಶೀಲನೆ :ಭಜರಂಗಿಯ ವೀಡಿಯೋ ವೈರಲ್

ಸತ್ತಿರುವ ಕೋತಿಗಳನ್ನು ಮರಣೋತ್ತರ ಪರೀಕ್ಷೆ ನಡೆಸಿದ ಅರಣ್ಯ ಇಲಾಖೆ

ನೆನ್ನೆ ಸಾರ್ವಜನಿಕರು ಮಣ್ಣು ಮಾಡಿದ್ದ ಕೋತಿಗಳನ್ನು ಅರಣ್ಯ ಇಲಾಖೆ ಮತ್ತೆ ಹೊರತೆಗೆದು ಮರಣೋತ್ತರ ಪರೀಕ್ಷೆ ಒಳಪಡಿಸಿತ್ತು. ಮರಣೋತರ ಪರೀಕ್ಷೆ ವರದಿ ಬಂದ ಕೂಡಲೇ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧನಕ್ಕೆ ಕ್ರಮ ತೆಗೆದುಕೊಳ್ತಾರಾ ಕಾದು ನೋಡಬೇಕು

Follow Us:
Download App:
  • android
  • ios