Asianet Suvarna News Asianet Suvarna News

ಹುಬ್ಬಳ್ಳಿಯಲ್ಲಿ ಪ್ರತಿಜ್ಞೆ ಕೈಗೊಂಡ ಶೆಟ್ಟರ್

ಹುಬ್ಬಳ್ಳಿಯಿಂದ ದೇಶದ ವಿವಿಧ ನಗರಗಳ ಕಡೆಗೆ ವಿಮಾನಗಳು ಹೋಗುವ ವ್ಯವಸ್ಥೆ ಮಾಡಲಾಗಿದ್ದು, ಕೇಂದ್ರ ಸರ್ಕಾರ ವಿಮಾನ ನಿಲ್ದಾಣದ ಅಭಿವೃದ್ಧಿ ಹೆಚ್ಚಿನ ಅನುದಾನ ನೀಡಲು ಮುಂದಾಗಿದೆ. ಆದರೆ, ಅದನ್ನು ರಾಜ್ಯ ಸರ್ಕಾರ ಸರಿಯಾಗಿ ಬಳಕೆ ಮಾಡಿಕೊಳ್ಳುತ್ತಿಲ್ಲ ಎಂದು ದೂರಿದರು

Ex CM Jagadish Shettar Visits Hubli Central constituency
Author
Bengaluru, First Published Sep 24, 2018, 9:03 PM IST

ಹುಬ್ಬಳ್ಳಿ[ಸೆ.24]: ಸೆಂಟ್ರಲ್ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುವುದೇ ನಮ್ಮ ಗುರಿ ಎಂದು ಮಾಜಿ ಸಿಎಂ ಹಾಗೂ ಶಾಸಕ ಜಗದೀಶ ಶೆಟ್ಟರ್ ಹೇಳಿದರು.

ಇಲ್ಲಿಯ ಕೋಟಿಲಿಂಗನಗರ ನಿವಾಸಿಗಳ ಅಭಿವೃದ್ಧಿ ಸಂಘದ ವತಿಯಿಂದ ಭಾನುವಾರ ಕೋಟಿಲಿಂಗ ನಗರದಲ್ಲಿ ಗಜಾನನ ಹಾಗೂ ಈಶ್ವರ ದೇವಸ್ಥಾನ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಕೋಟಿಲಿಂಗ ನಗರದ ಗಾರ್ಡನ್ ಅಭಿವೃದ್ಧಿಗೆ 19 ಲಕ್ಷ, ರಸ್ತೆ ನಿರ್ಮಾಣಕ್ಕೆ 18 ಲಕ್ಷ ಅನುದಾನ ನೀಡಲಾಗಿದ್ದು, ಸದ್ಯದಲ್ಲೇ ಇವುಗಳ ಕಾಮಗಾರಿ ಭೂಮಿಪೂಜೆ ಕಾರ್ಯಕ್ರಮ ಮಾಡಲಾಗುವುದು. ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ನಿತ್ಯ 12 ವಿಮಾನಗಳು ಹಾರಾಡುತ್ತಿವೆ. ಹುಬ್ಬಳ್ಳಿಯಿಂದ ದೇಶದ ವಿವಿಧ ನಗರಗಳ ಕಡೆಗೆ ವಿಮಾನಗಳು ಹೋಗುವ ವ್ಯವಸ್ಥೆ ಮಾಡಲಾಗಿದ್ದು, ಕೇಂದ್ರ ಸರ್ಕಾರ ವಿಮಾನ ನಿಲ್ದಾಣದ ಅಭಿವೃದ್ಧಿ ಹೆಚ್ಚಿನ ಅನುದಾನ ನೀಡಲು ಮುಂದಾಗಿದೆ. ಆದರೆ, ಅದನ್ನು ರಾಜ್ಯ ಸರ್ಕಾರ ಸರಿಯಾಗಿ ಬಳಕೆ ಮಾಡಿಕೊಳ್ಳುತ್ತಿಲ್ಲ ಎಂದು ದೂರಿದರು.

ಇದೇ ಸಂದರ್ಭದಲ್ಲಿ ನೂತನ ಗಜಾನನ ಹಾಗೂ ಈಶ್ವರ ದೇವಸ್ಥಾನ ಉದ್ಘಾಟನೆ ಮಾಡಲಾಯಿತು. ಜುಕ್ತಿಮಠ (ಸೂಡಿ)ದ ಡಾ. ಕೊಟ್ಟೂರ ಬಸವೇಶ್ವರ ಶಿವಾಚಾರ್ಯರು, ಪಾಲಿಕೆ ಸದಸ್ಯ ಪ್ರಕಾಶ ಕ್ಯಾರಕಟ್ಟಿ, ಸಂಘದ ಅಧ್ಯಕ್ಷ ವಿಕಾಸ ನಾಯಕ, ಕಾರ್ಯದರ್ಶಿ ಮಲ್ಲಿಕಾರ್ಜುನ ಕಲಭಾವಿ, ಗುರುಬಸಯ್ಯ ಶಾಮನೂರಮಠ, ಆರ್.ಟಿ. ತವನಪ್ಪನವರ, ಸಿದ್ದು ಆವಟಿ, ಪಿ.ಎ. ಜೈನರ್, ಪ್ರದೀಪ ತೇಗೂರ ಸೇರಿದಂತೆ ನೂರಾರು ನಿವಾಸಿಗಳು ಇದ್ದರು.

 

Follow Us:
Download App:
  • android
  • ios