Asianet Suvarna News Asianet Suvarna News

EWS Reservation: ಸುಪ್ರೀಂ ತೀರ್ಪು ಸ್ವಾಗತಿಸಿದ ಕೆ.ಎಸ್‌.ಈಶ್ವರಪ್ಪ

ಆರ್ಥಿಕವಾಗಿ ಹಿಂದುಳಿದವರ ಮೀಸಲಾತಿ ಪರ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನ ಸ್ವಾಗತಿಸುತ್ತೇನೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ  ಹೇಳಿದರು.  ರಾಷ್ಟ್ರದ ಹಿತದೃಷ್ಟಿಯಿಂದ ನೀಡಿರುವ ಸುಪ್ರೀಂ ಆದೇಶ ಎಲ್ಲರೂ ಸ್ವಾಗತಿಸಬೇಕು. ರಾಷ್ಟ್ರದ ಹಿತದೃಷ್ಟಿಯಿಂದ ಜಾತಿ ತರಬಾರದು ಎಂದು ಹೇಳಿದರು. 

EWS reservation KS Eshwarappa welcomed the Supreme verdict at shivamogga rav
Author
First Published Nov 7, 2022, 2:17 PM IST

ಶಿವಮೊಗ್ಗ (ನ.7) :ಆರ್ಥಿಕವಾಗಿ ಹಿಂದುಳಿದವರ ಮೀಸಲಾತಿ ಪರ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನ ಸ್ವಾಗತಿಸುತ್ತೇನೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ  ಹೇಳಿದರು. ಸುಪ್ರೀಂ ಕೋರ್ಟ್ ತೀರ್ಪುಗೆ ಸಂಬಂಧಿಸಿದಂತೆ ಶಿವಮೊಗ್ಗದಲ್ಲಿ ಸೋಮವಾರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಸಾಮಾನ್ಯ ವರ್ಗಕ್ಕೂ ಶೇ.10 ಮೀಸಲಾತಿಗೆ ಕೋರ್ಟ್ ನೀಡಿರುವ ತೀರ್ಪು ಸ್ವಾಗತಾರ್ಹ. ರಾಷ್ಟ್ರದ ಹಿತದೃಷ್ಟಿಯಿಂದ ನೀಡಿರುವ ಸುಪ್ರೀಂ ಆದೇಶ ಎಲ್ಲರೂ ಸ್ವಾಗತಿಸಬೇಕು. ರಾಷ್ಟ್ರದ ಹಿತದೃಷ್ಟಿಯಿಂದ ಜಾತಿ ತರಬಾರದು ಎಂದು ಹೇಳಿದರು. 

ಆರ್ಥಿಕವಾಗಿ ಹಿಂದುಳಿದ ಮೇಲ್ಜಾತಿಗೆ 10% ಮೀಸಲಾತಿ: ಕೇಂದ್ರದ ನಿರ್ಧಾರ ಎತ್ತಿಹಿಡಿದ ಸುಪ್ರೀಂ ಕೋರ್ಟ್‌

 ಆರ್ಥಿಕವಾಗಿ ಹಿಂದುಳಿದ ಜನರ ಬುದ್ಧಿವಂತಿಕೆ ದೇಶಕ್ಕೆ ಬೇಕು. ಮುಂದುವರಿದ ಸಮಾಜದ ಬಡ ಪ್ರತಿಭಾವಂತಗೆ ಮೀಸಲಾತಿ ಸಿಗದಿದ್ದರೆ ದೇಶಕ್ಕೇ ನಷ್ಟ. ಇದರಿಂದ ಬೇರೆ ಯಾವ ವರ್ಗಕ್ಕೂ ನಷ್ಟವಿಲ್ಲ. ಇಲ್ಲಿ ಯಾರೂ ಜಾತಿ ವಿಚಾರಗಳನ್ನು ತರಬಾರದು ಎಂದರು.

ದತ್ತಪೀಠದ ಬಗ್ಗೆ ಸುಪ್ರೀಂ ಕೋರ್ಟ್‌ನಿಂದ ತೀರ್ಪು ಬಂದಿದೆ. ಅದರ ಪ್ರಕಾರ ಕೇಂದ್ರ ರಾಜ್ಯ ಸರ್ಕಾರ ನಡೆದುಕೊಂಡು ಹೋಗುತ್ತಿವೆ. ಮುಂಬರುವ ದಿನದಲ್ಲಿ ದತ್ತಪೀಠ ಹಿಂದುಪೀಠ ಆಗುವ ಬಗ್ಗೆ ವಿಶ್ವಾಸ ಇದೆ ಎಂದು ಪತ್ರಕರ್ತರ ಪ್ರಶ್ನೆ ಒಂದಕ್ಕೆ ಉತ್ತರಿಸಿದರು.

ಕಾಂಗ್ರೆಸ್ ಪಕ್ಷ ಬಿಟ್ಟವರನ್ನು ಮರಳಿ ಪಕ್ಷಕ್ಕೆ ಬರುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನೀಡಿರುವ ಆಹ್ವಾನ ಕುರಿತು ಪ್ರತಿಕ್ರಿಯೆ ನೀಡಿದ ಅವರು, ತಮ್ಮ ಪಕ್ಷ ಬೆತ್ತಲೆ ಆಗಿದೆ ಅಂತಾ ಅವರೇ ಒಪ್ಪಿಕೊಂಡಾಗೆ ಆಯ್ತು. ಮರಳಿ ಕಾಂಗ್ರೆಸ್ ಪಕ್ಷಕ್ಕೆ  ಸೇರಿಸಿಕೊಳ್ಳಲ್ಲ ಅಂದಿದ್ದರು. ಇಂತಹ ದುಸ್ಥಿತಿ ಕಾಂಗ್ರೆಸ್ ಗೆ ಬಂದಿದೆ ಕಾಂಗ್ರೆಸ್. ಅದು ಡಿಕೆ ಶಿವಕುಮಾರ್ ನೀಡಿರುವ ಹೇಳಿಕೆಯಿಂದ ಸ್ಪಷ್ಟವಾಗಿದೆ ಎಂದು ಲೇವಡಿ ಮಾಡಿದರು.

ಚುನಾವಣೆಗೆ ನಿಲ್ಲುವವರು ಎರಡು ಲಕ್ಷ ಕೊಡಬೇಕಂತೆ. ನಿಷ್ಠಾವಂತ ಕಾಂಗ್ರೆಸ್ಸಿಗ ಎರಡು ಲಕ್ಷ ಎಲ್ಲಿಂದ ತರುತ್ತಾನೆ. ಬಡವರು ಚುನಾವಣೆಗೆ ನಿಲ್ಲಬಾರದು ಅಂತಾ ಕಾಂಗ್ರೆಸ್ ಹೇಳಿ ಬಿಡಲಿ. ಈ ಬಗ್ಗೆ ಡಿಕೆ ಶಿವಕುಮಾರ್ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.

ಎಐಸಿಸಿ ದೂತರ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯದ ಹಿರಿಯ ರಾಜಕಾರಣಿ. ಅವರಿಗೆ ಮುಖ್ಯಮಂತ್ರಿ ಹುದ್ದೆ ತಪ್ಪಿಸಿದ್ದು ಇದೇ ಕಾಂಗ್ರೆಸ್ಸಿಗರು, ಸಿದ್ದರಾಮಯ್ಯ ಎಂದು ಆರೋಪಿಸಿದರು.

ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತದೆ. ಕಾಂಗ್ರೆಸ್ ಯಾವುದೇ ಕಾರಣಕ್ಕೂ ಅಧಿಕಾರಕ್ಕೆ ಬರುವುದಿಲ್ಲ. ಕಾಂಗ್ರೆಸ್ ಜಾತಿ, ಗೂಂಡಾಗಿರಿ ಹಣದ ಮೇಲೆ ಗೆದ್ದು ಅಭ್ಯಾಸವೇ ಹೊರತು ನೇರವಾಗಿ ಚುನಾವಣೆ ಎದುರಿಸಿ ಗೆಲ್ಲುವುದಕ್ಕೆ ಕಾಂಗ್ರೆಸ್ ನಿಂದ ಸಾಧ್ಯವಿಲ್ಲ ಎಂದು ಹೇಳಿದರು.

ಸಿದ್ದರಾಮಯ್ಯ ಸ್ಪರ್ಧೆ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಈಶ್ವರಪ್ಪ, ಸಿದ್ದರಾಮಯ್ಯ ಅಲೆಮಾರಿ ಆಗಿದ್ದಾರೆ. ಸಿದ್ದರಾಮಯ್ಯ ಒಬ್ಬ ಅಲೆಮಾರಿ ರಾಜಕಾರಣಿ. ಅಲೆಮಾರಿ ಎಲ್ಲಿಯೇ ನಿಂತರು  ಸೋಲುತ್ತಾರೆ ಎಂದು ಛೇಡಿಸಿದರು.

ಪರಮೇಶ್ವರ್ ಅವರನ್ನು ಸೋಲಿಸಿದರು, ಖರ್ಗೆ ಸಿಎಂ ಆಗಲು ಬಿಡಲಿಲ್ಲ, ಇದೀಗ ಡಿಕೆ ಶಿವಕುಮಾರ್ ಗೆ ಅಡ್ಡಗಾಲು ಹಾಕ್ತಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಸಿದ್ದರಾಮಯ್ಯಗೆ ಎಲ್ಲಿ ನಿಲ್ಲೋದು ಅಂತಾ ಗೊತ್ತಿಲ್ಲ. ಇನ್ನು 150 ಸ್ಥಾನ ಎಲ್ಲಿ ಗೆಲ್ಲೋದು ಎಂದು ವ್ಯಂಗ್ಯವಾಡಿದರು.

ಆರ್ಥಿಕವಾಗಿ ಹಿಂದುಳಿದ ಎಲ್ಲಾ ವರ್ಗಗಳಿಗೆ 10% ಮೀಸಲು ಏಕೆ, ಹೇಗೆ ಜಾರಿಯಾಗಬೇಕು?

ನನಗೆ ಆಗ ಅನ್ಯಾಯ ಮಾಡಿದ್ದೆ ಈಗ ಸರಿಯಾಗಿ ಮಾಡ್ತೀನಿ ಅಂತಾ ಖರ್ಗೆ ಬುದ್ದಿ ಕಲಿಸುತ್ತಾರೆ. ಎಲ್ಲಿ ಸ್ಪರ್ಧೆ ಮಾಡೋದು ಅಂತಾ ಹುಡುಕ್ತಿದ್ದಾರೆ. ಕಾಂಗ್ರೆಸ್ ನ ಅನೇಕರ ಪರಿಸ್ಥಿತಿ ಇದೇ ಆಗಿದೆ. ಕೋಲಾರಕ್ಕೆ ಆಹ್ವಾನಿಸಿದ್ದಾರೆ, ಜಮೀರ್ ಕರೆಯುತ್ತಿದ್ದಾರೆ ಅಂತಾರೆ. ಎಲ್ಲರೂ ಸುಮ್ಮನೆ ಕರೆಯುತ್ತಾರೆ. ಯಾರೂ ಬಿಟ್ಟು ಕೊಡಲು ಸಿದ್ದರಿಲ್ಲ. ಸಿದ್ದರಾಮಯ್ಯ ಎರಡು ಕಡೆ ಅಲ್ಲ. ರಾಜ್ಯದ 224 ಕ್ಷೇತ್ರದಲ್ಲೂ ನಿಲ್ಲಲ್ಲಿ ನನಗೇನು? ಅವರು ಎಲ್ಲಿ ನಿಂತರೂ ಸೋಲು ಕಾಣುವುದು ನಿಶ್ಚಿತ ಎಂದು ಹೇಳಿದರು.

Follow Us:
Download App:
  • android
  • ios