Asianet Suvarna News Asianet Suvarna News

ಜನರಿಗೆ ಅರ್ಥವಾಗದ ಎಲ್ಲವೂ ಪವಾಡಗಳಾದವು : ಹುಲಿಕಲ್ ನಟರಾಜ್

ಬುದ್ಧಿವಂತ ಪ್ರದರ್ಶನಗಳನ್ನು ಪವಾಡಗಳೆಂದು ನಂಬುವಂತೆ ಜನರನ್ನು ಮೋಸಗೊಳಿಸಿದರು. ಪ್ರಕೃತಿಯ ವಸ್ತುಗಳು, ಋತುಗಳ ಬದಲಾವಣೆಗಳು ಮತ್ತು ಅವರಿಗೆ ಅರ್ಥವಾಗದ ಎಲ್ಲವೂ ಒಂದು ಪವಾಡ ಮತ್ತು ಮೂಢನಂಬಿಕೆಗಳಾದವು ಎಂದು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಅಧ್ಯಕ್ಷ ಹಾಗೂ ಪವಾಡ ಬಯಲು ತಜ್ಞ ಹುಲಿಕಲ್ ನಟರಾಜ್ ತಿಳಿಸಿದರು

Everything that people did not understand became miracles: Hulikal Nataraj snr
Author
First Published Feb 16, 2024, 10:03 AM IST

 ಗುಬ್ಬಿ :  ಬುದ್ಧಿವಂತ ಪ್ರದರ್ಶನಗಳನ್ನು ಪವಾಡಗಳೆಂದು ನಂಬುವಂತೆ ಜನರನ್ನು ಮೋಸಗೊಳಿಸಿದರು. ಪ್ರಕೃತಿಯ ವಸ್ತುಗಳು, ಋತುಗಳ ಬದಲಾವಣೆಗಳು ಮತ್ತು ಅವರಿಗೆ ಅರ್ಥವಾಗದ ಎಲ್ಲವೂ ಒಂದು ಪವಾಡ ಮತ್ತು ಮೂಢನಂಬಿಕೆಗಳಾದವು ಎಂದು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಅಧ್ಯಕ್ಷ ಹಾಗೂ ಪವಾಡ ಬಯಲು ತಜ್ಞ ಹುಲಿಕಲ್ ನಟರಾಜ್ ತಿಳಿಸಿದರು

ತಾಲೂಕಿನ ಕಡಬ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವ ಹಾಗೂ ಬೀಳ್ಕೊಡುಗೆ ಸಮಾರಂಭ ಮತ್ತು ಪವಾಡಗಳ ರಹಸ್ಯ ಬಯಲು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನೀವು ನಗರ ಅಥವಾ ಹಳ್ಳಿಯಲ್ಲಿದ್ದರೂ ಮೂಢನಂಬಿಕೆಗಳು ಎಲ್ಲೆಡೆ ಇವೆ. ಭಾರತೀಯ ಸಮಾಜವು ವೇಗವಾಗಿ ಪ್ರಗತಿಯಲ್ಲಿದೆ, ಇನ್ನೂ ಅನೇಕ ಜನರು ಮೂಢನಂಬಿಕೆಗಳಲ್ಲಿ ಬಲವಾದ ನಂಬಿಕೆಗಳನ್ನು ಹೊಂದಿದ್ದಾರೆ. ಈ ಮೂಢನಂಬಿಕೆಗಳು ಮಾನವೀಯತೆಯ ಮೇಲೆ ಹಿಡಿತ ಸಾಧಿಸುವ ಉದ್ವಿಗ್ನತೆ ಮತ್ತು ಆತಂಕಗಳ ಅಭಿವ್ಯಕ್ತಿಗಳಾಗಿವೆ, ಅದು ಹುಟ್ಟಿನಿಂದ ಸಾವಿನವರೆಗೆ ಜೀವನದ ಕತ್ತಲೆಯಲ್ಲಿ ಹೋರಾಡುತ್ತಾ, ಶೈಕ್ಷಣಿಕ ಸ್ಥಾನಮಾನ ಮತ್ತು ಸಂಪತ್ತನ್ನು ಲೆಕ್ಕಿಸದೆ ಜನರನ್ನು ಕಾಡುತ್ತದೆ ಎಂದರು.

ಮಕ್ಕಳು ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳುವ ಜೊತೆಗೆ ಪ್ರಜ್ಞಾವಂತಿಕೆಯನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.

ಪವಾಡ ರಹಸ್ಯ ಬಯಲು ಮಾಡುವ ಮೂಲಕ ಮಕ್ಕಳಿಗೆ ಪ್ರಜ್ಞಾವಂತಿಕೆಯ ಅರಿವನ್ನು ಮೂಡಿಸಿದರು. ವಾರ್ಷಿಕೋತ್ಸವದ ಅಂಗವಾಗಿ ಮಕ್ಕಳ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಈ ಸಂದರ್ಭದಲ್ಲಿ ಎಸ್‌ಡಿಎಮ್‌ಸಿ ಅಧ್ಯಕ್ಷ ಶಿವಕುಮಾರ್‌, ಪ್ರಾಂಶುಪಾಲ ಪಾಲಾಕ್ಷ ಹಾಗಲವಾಡಿ, ಉಪ ಪ್ರಾಂಶುಪಾಲ ರವೀಂದ್ರನಾಥ್, ನಿವೃತ್ತ ಉಪನ್ಯಾಸಕ ರಾಮಣ್ಣ, ಎಂ.ಪಿ. ಪ್ರಕಾಶ್, ಸಿದ್ದಲಿಂಗೇಗೌಡ, ನಂಜುಂಡಪ್ಪ, ಮುಖ್ಯ ಶಿಕ್ಷಕಿ ಇಂದಿರಾ, ನಾಗರಾಜು, ನರಸಪ್ಪ, ಅನ್ವರ್‌, ನಾರಾಯಣ್ ಮುಕ್ಕಣಪ್ಪ, ಪಿಡಿಒ ನಟರಾಜ್, ಗ್ರಾಪಂ ಉಪಾಧ್ಯಕ್ಷ ಭರತ್ ಗೌಡ, ಸದಸ್ಯರಾದ ಕಲ್ಪನಾ, ಪೂರ್ಣಿಮಾ, ಪುರುಷೋತ್ತಮ್, ಎಸ್ಡಿಎಂಸಿ ಸದಸ್ಯರು, ಶಿಕ್ಷಕರು, ವಿದ್ಯಾರ್ಥಿಗಳು ಇತರರು ಹಾಜರಿದ್ದರು.

Follow Us:
Download App:
  • android
  • ios