Asianet Suvarna News Asianet Suvarna News

ಬಾಲ್ಯ ವಿವಾಹ ನಡೆಸುವ ಎಲ್ಲರೂ ಅಪರಾಧಿ : ನ್ಯಾ. ಗೀತಾಂಜಲಿ

ಬಾಲ್ಯ ವಿವಾಹಕ್ಕೊಳಗಾದ ಮಕ್ಕಳ ಮಾನಸಿಕ ದೌರ್ಬಲ್ಯತೆಗೆ ಖಿನ್ನತೆಗೆ ಒಳಗಾಗುತ್ತಾರೆ. ಇದರಲ್ಲಿ ಭಾಗವಹಿಸುವ ಎಲ್ಲರೂ ಅಪರಾಧಿಗಳಾಗುತ್ತಾರೆ. ಬಾಲ್ಯ ವಿವಾಹದ ಬಗ್ಗೆ ವಿದ್ಯಾರ್ಥಿನಿಯರು ತಮ್ಮ ಕುಟುಂಬ ಸೇರಿದಂತೆ ಸಾರ್ವಜನಿಕರಿಗೆ ಅರಿವು ಮೂಡಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಗೀತಾಂಜಲಿ ಹೇಳಿದರು.

Everyone who conducts child marriage is a criminal: Gitanjali snr
Author
First Published Oct 21, 2023, 8:18 AM IST

 ಶಿರಾ :  ಬಾಲ್ಯ ವಿವಾಹಕ್ಕೊಳಗಾದ ಮಕ್ಕಳ ಮಾನಸಿಕ ದೌರ್ಬಲ್ಯತೆಗೆ ಖಿನ್ನತೆಗೆ ಒಳಗಾಗುತ್ತಾರೆ. ಇದರಲ್ಲಿ ಭಾಗವಹಿಸುವ ಎಲ್ಲರೂ ಅಪರಾಧಿಗಳಾಗುತ್ತಾರೆ. ಬಾಲ್ಯ ವಿವಾಹದ ಬಗ್ಗೆ ವಿದ್ಯಾರ್ಥಿನಿಯರು ತಮ್ಮ ಕುಟುಂಬ ಸೇರಿದಂತೆ ಸಾರ್ವಜನಿಕರಿಗೆ ಅರಿವು ಮೂಡಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಗೀತಾಂಜಲಿ ಹೇಳಿದರು.

ತಾಲೂಕಿನ ಮೇಲ್ಕುಂಟೆ ಗ್ರಾ.ಪಂ. ವ್ಯಾಪ್ತಿಯ ಗೊಲ್ಲಹಳ್ಳಿಯಲ್ಲಿ ಸರ್ಕಾರಿ ಬಾಲಕಿಯರ ಪ.ಪೂ. ಕಾಲೇಜಿನ ವತಿಯಿಂದ ಹಮ್ಮಿಕೊಂಡಿರುವ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದಲ್ಲಿ ಏರ್ಪಡಿಸಿದ್ದ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಬಾಲ್ಯ ವಿವಾಹ ಶಿಕ್ಷಾರ್ಹ ಅಪರಾಧವಾಗಿದ್ದು, ಬಾಲ್ಯವಿವಾಹದಲ್ಲಿ ಪಾಲ್ಗೊಳ್ಳುವ ತಂದೆ ತಾಯಿ, ಸಂಬಂಧಿಕರು ಸೇರಿದಂತೆ ಬಾಲ್ಯವಿವಾಹದಲ್ಲಿ ಪಾಲ್ಗೊಳ್ಳುವ ಎಲ್ಲರೂ ಅಪರಾಧಿಗಳಾಗುತ್ತಾರೆ ಎಂದರು.

ಕಾರ್ಯಕ್ರಮದಲ್ಲಿ ವಕೀಲರ ಸಂಘದ ಅಧ್ಯಕ್ಷ ಎಚ್.ಪಿ.ಧರಣೇಶ್ ಗೌಡ, ಪ್ರಧಾನ ಕಾರ್ಯದರ್ಶಿ ಎಚ್.ಗುರುಮೂರ್ತಿ ಗೌಡ, ಪ್ರಾಂಶುಪಾಲ ಚಂದ್ರಯ್ಯ, ಶಿಬಿರಾಧಿಕಾರಿ ಎಚ್.ಗೋವಿಂದಯ್ಯ ಹಾಜರಿದ್ದರು.

20ಶಿರಾ2: ಶಿರಾ ತಾಲೂಕಿನ ಗೊಲ್ಲಹಳ್ಳಿಯಲ್ಲಿ ಹಮ್ಮಿಕೊಂಡಿರುವ ಎನ್.ಎಸ್.ಎಸ್. ವಾರ್ಷಿಕ ಶಿಬಿರದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಗೀತಂಜಲಿ ಮಾತನಾಡಿದರು. ವಕೀಲರ ಸಂಘದ ಅಧ್ಯಕ್ಷ ಧರಣೇಶ್ ಗೌಡ, ಪ್ರಧಾನ ಕಾರ್ಯದರ್ಶಿ ಎಚ್.ಗುರುಮೂರ್ತಿ ಗೌಡ ಇದ್ದರು.

ಭಾರಿ ಪೋಕ್ಸೊ ಪ್ರಕರಣ

ಚಿಕ್ಕಮಗಳೂರು (ಆ.17): ರಾಜ್ಯದಲ್ಲೇ ಪೋಕ್ಸೋ ಪ್ರಕರಣಗಳಲ್ಲಿ ನಂಬರ್ ಒನ್ ಕುಖ್ಯಾತಿಯನ್ನು ಕಾಫಿಕಣಿವೆ ಚಿಕ್ಕಮಗಳೂರು ಜಿಲ್ಲೆ ಹೊರುವ ಪರಿಸ್ಥಿತಿ ಬಂದಿದೆ.  ಜಿಲ್ಲೆಯಲ್ಲಿ ದಾಖಲಾಗಿರುವ  ಪೋಕ್ಸೋ ಕೇಸ್ ಗಳಿಂದ ಕಾಫಿನಾಡಿಗರ ನಿದ್ದೆಗೆಡಿಸಿದೆ. ‌‌ಬರೊಬ್ಬರಿ ಒಂದೂವರೆ ವರ್ಷದಲ್ಲಿ 173 ಪೋಕ್ಸೋ ಪ್ರಕರಣ ದಾಖಲಾಗಿದ್ರೆ ಈ ವರ್ಷ (2023 ) ಏಳು ತಿಂಗಳಿನಲ್ಲಿ 50 ಪ್ರಕರಣ ದಾಖಲಾಗಿದೆ.

ಬರೊಬ್ಬರಿ ಒಂದೂವರೆ ವರ್ಷದಲ್ಲಿ 173 ಪೋಕ್ಸೋ ಪ್ರಕರಣ: ಕಾಫಿನಾಡು ಚಿಕ್ಕಮಗಳೂರು ಜಿಲ್ಲೆ ಶೇ70 ರಷ್ಟು ಕಾಡು ಕಾಫಿ ತೋಟಗಳೇ ಇರೋದು. ಒಂಟಿ ಮನೆಗಳು ಕಿಮೀ ನಡೆದು ಮನೆ ಸೇರೋ ರಸ್ತೆಗಳ ನಡುವೆ ನೆಮ್ಮದಿಯಿಂದ ಮಲೆನಾಡಿಗರಿಗೆ ಪೋಸ್ಕೋ ಪ್ರಕರಣಗಳು ದಾಖಲಾಗ್ತಾ ಇರೋದನ್ನು ನೋಡಿದ್ರೆ ಅಪ್ರಾಪ್ತ ಬಾಲಕಿಯನ್ನು ಮನೆಯಿಂದ ಹೊರಕಳುಹಿಸುವುದು ಅನ್ನೋ ಅತಂಕ ಶುರುವಾಗಿದೆ.  ಇದಕ್ಕೆ ಪ್ರಮುಖ ಕಾರಣ ಬರೊಬ್ಬರಿ ಒಂದೂವರೆ ವರ್ಷದಲ್ಲಿ 173 ಪೋಕ್ಸೋ ಪ್ರಕರಣ ದಾಖಲಾಗಿರುವುದು. 2023ಈ ವರ್ಷ ಏಳು ತಿಂಗಳಿನಲ್ಲಿ 50 ಪ್ರಕರಣ ದಾಖಲಾಗಿದೆ. 

ಸತ್ಯ ಹೇಳಿದರೆ ಸಿ.ಟಿ.ರವಿಗೆ ಕೆಳಗಿಂದ ಮೇಲಿನವರೆಗೆ ಉರಿಯುತ್ತೆ: ಕೆಪಿಸಿಸಿ ರಾಜ್ಯ ವಕ್ತಾರ ಲಕ್ಷ್ಮಣ್

ಈ ಮೂಲಕ ರಾಜ್ಯದಲ್ಲೇ ಮೊದಲ ಜಿಲ್ಲೆ ಎನ್ನುವ ಕುಖ್ಯಾತಿಯನ್ನು ಪಡೆಯುತ್ತಾ ಎನ್ನುವ ಆತಂಕವೂ ಇದೆ. 2022ರ ಏಪ್ರೀಲ್ ನಿಂದ 2023ರ ಮಾರ್ಚ್ ತನಕ ಒಂದು ವರ್ಷದ ಅವಧಿಯಲ್ಲಿ ದಾಖಲಾದ ಪೋಕ್ಸೋ ಪ್ರಕರಣದಲ್ಲಿ 22 ಬಾಲಕಿಯರು ಗರ್ಭೀಣಿಯರಾಗಿದ್ದು 12 ಪ್ರಕರಣಗಳಲ್ಲಿ ಗರ್ಭಪಾತ ಮಾಡಿಸಲಾಗಿದೆ. 10 ಬಾಲಕಿಯರಿಗೆ ಹೆರಿಗೆಯಾಗಿದೆ. 2023ರ ಮಾರ್ಚ್ ನಿಂದ ಈವರೆಗೆ ದಾಖಲಾದ ಪೋಕ್ಸೊ ಪ್ರಕರಣದಲ್ಲಿ 6 ಬಾಲಕಿಯರು ಗರ್ಭೀಣಿಯರಾಗಿದ್ದು ನಾಲ್ಕು ಗರ್ಭಪಾತ , 2 ಬಾಲಕಿಯರಿಗೆ ಹೆರಿಗೆ ಮಾಡಿಸಲಾಗಿದೆ. ಇನ್ನೂ ಇದ್ರ ನಡುವೆ ಮತ್ತೊಂದು ಶಾಕಿಂಗ್ ನ್ಯೂಸ್ ಅಂದ್ರೆ ಪೊಲೀಸ್ರು, ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ಆರೋಗ್ಯ ಇಲಾಖೆಯಿಂದಲೇ ದೌರ್ಜನ್ಯ ಪ್ರಕರಣಗಳು ಬೆಳಕಿಗೆ ಬರುತ್ತಿದೆ..ಆಸ್ಪತ್ರೆಗೆ ಹೋದಾಗ್ಲೇ ಲೈಂಗಿಕ ದೌರ್ಜನ್ಯ ನಡೆದಿದೆ ಅನ್ನೋ ಮಾಹಿತಿ ಹೊರಬರುತ್ತಿದೆ..

ಪೋಕ್ಸೋ ಪ್ರಕರಣದ ಜೊತೆಗೆ ಬಾಲ್ಯ ವಿವಾಹವೂ ನಿಂತಿಲ್ಲ: ಪೋಕ್ಸೋ ಪ್ರಕರಣದ ಜೊತೆಗೆ ಕಾಫಿನಾಡಿನಲ್ಲಿ ಬಾಲ್ಯ ವಿವಾಹವೂ ನಿಂತಿಲ್ಲ. ಬಾಲ್ಯ ವಿವಾಹ ನಿಷೇಧ ಕಾಯ್ದೆ ಇದ್ದರೂ ಜಿಲ್ಲೆಯಲ್ಲಿ 2022-23ನೇ ಸಾಲಿನಲ್ಲಿ ಎಂಟು ಬಾಲ್ಯ ವಿವಾಹಗಳು ನಡೆದಿವೆ. ಬಾಲ್ಯ ವಿವಾಹಕ್ಕೆ ಸಂಬಂಧಿಸಿದಂತೆ 80 ದೂರುಗಳು ಬಂದಿದ್ದು, 72 ಬಾಲ್ಯ ವಿವಾಹಗಳನ್ನು ತಡೆಯುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಆದರೆ, 8 ಬಾಲ್ಯ ವಿವಾಹಗಳು ನಡೆದಿದ್ದು, ಎಫ್‌ಐಆರ್ ದಾಖಲಿಸಿದ್ದಾರೆ.2023 ಏಪ್ರಿಲ್‌ನಿಂದ ಜೂನ್ ತನಕ 16 ದೂರುಗಳು ಸ್ವೀಕಾರವಾಗಿದ್ದು, 15 ಬಾಲ್ಯ ವಿವಾಹಗಳನ್ನು ತಡೆಯಲಾಗಿದೆ. ಒಂದು ಬಾಲ ವಿವಾಹ ನಡೆದಿದೆ.

Follow Us:
Download App:
  • android
  • ios