ಚಾಮರಾಜನಗರ(ಜೂ. 02): ಪುರಸಭೆ ಚುನಾವಣೆ ನಡೆದು ಫಲಿತಾಂಶ ಬಂದು ವರ್ಷ ಉರುಳಿದರೂ ನೂತನ ಪುರಸಭಾ ಸದಸ್ಯರಿಗೆ ಅಧಿಕಾರ ಭಾಗ್ಯ ಮಾತ್ರ ದೊರೆತಿಲ್ಲ! ಕಳೆದ ವರ್ಷ ಮೇ 31 ರಂದು ಪುರಸಭೆ ಚುನಾವಣೆ ಫಲಿತಾಂಶ ಹೊರ ಬಿದ್ದು, ಬಿಜೆಪಿ 14, ಕಾಂಗ್ರೆಸ್‌ 7, ಎಸ್‌ಡಿಪಿಐ ಹಾಗೂ ಪಕ್ಷೇತರ ತಲಾ ಒಂದು ಸ್ಥಾನ ಪಡೆದಿವೆ.

ಚುನಾವಣೆ ಮತದಾನಕ್ಕೂ ಮುನ್ನ ಪುರಸಭೆ ಅಧ್ಯಕ್ಷ ಸ್ಥಾನ ಬಿಸಿಎಂ(ಬಿ) ಹಾಗೂ ಉಪಾಧ್ಯಕ್ಷ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು.ಇದೇ ಹುಮ್ಮಸ್ಸಿನಲ್ಲಿ ಬಿಸಿಎಂ(ಬಿ) ಅಧ್ಯಕ್ಷ ಸ್ಥಾನ ಮೀಸಲಾದ ಹಿನ್ನಲೆ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳು ಚುನಾವಣೆ ಎದುರಿಸಿ ಗೆಲವು ಸಾಧಿಸಿದ್ದರು.

.70 ದಿನಗಳ ಬಳಿಕ ಭಟ್ಕಳದಲ್ಲಿ ಸಾರಿಗೆ ಬಸ್‌ ಸೇವೆ ಆರಂಭ

ಇದಾದ ಬಳಿಕ ಪುರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಮೀಸಲಾತಿಯಲ್ಲಿ ರೋಸ್ಟರ್‌ ಪದ್ಧತಿ ಸರಿಯಿಲ್ಲ ಎಂದು ಕೆಲ ಆಕಾಂಕ್ಷಿಗಳು ನ್ಯಾಯಾಲಯ ಮೆಟ್ಟಿಲೇರಿದರು.

ರೋಸ್ಟರ್‌ನಲ್ಲಿ ತೊಡಕಾಗಿರುವ ಬಗ್ಗೆ ಮನಗಂಡ ನ್ಯಾಯಾಲಯ ತಡೆಯಾಜ್ಞೆ ನೀಡಿ, ಮೀಸಲಾತಿ ಸರಿಪಡಿಸಿ ಎಂದು ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದ್ದೂ ಆಯಿತು. ಮತ್ತೆ ರಾಜ್ಯ ಸರ್ಕಾರ ಮೀಸಲಾತಿ ನಿಗದಿಪಡಿಸಿದರೂ ಇಲ್ಲೂ ರೋಸ್ಟರ್‌ ಪದ್ಧತಿಯಂತೆ ಮೀಸಲು ನಿಗದಿಯಾಗಿಲ್ಲ ಎಂದು ಮತ್ತೆ ನ್ಯಾಯಾಲಯ ತಡೆಯಾಜ್ಞೆ ನೀಡಿದ ಕಾರಣ ಪುರಸಭೆ ಸದಸ್ಯರಿಗೆ ಒಂದು ವರ್ಷಗಳಾದರೂ ಅಧಿಕಾರ ಸಿಕ್ಕಿಲ್ಲ. ಪುರಸಭೆಯಲ್ಲಿ ಗೆದ್ದಂತಹ ಸದಸ್ಯರಿಗೆ ಒಂದು ವರ್ಷವಾದರೂ ಅಧಿಕಾರ ಸಿಗದ ಕಾರಣ ಉಪ ವಿಭಾಗಾಧಿಕಾರಿಗಳೇ ಪುರಸಭೆ ಆಡಳಿತಾಧಿಕಾರಿಗಳಾಗಿದ್ದಾರೆ.

ಕೊಡಗಿನಲ್ಲಿ ಕೆಎಸ್‌ಆರ್‌ಟಿಸಿಗೆ ಪ್ರತಿ ದಿನ 10 ಲಕ್ಷದಷ್ಟು ನಷ್ಟ!

ಆದರೆ ಪುರಸಭೆಯಲ್ಲಿ ಬಿಜೆಪಿ ಬೆಂಬಲಿಗರೇ ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದಿರುವ ಕಾರಣ ಅಧಿಕಾರ ಪಡೆದು ಅಧ್ಯಕ್ಷ ಗಾದೆಯ ಕುರ್ಚಿಯಲ್ಲಿ ಕೂರಲು ಅಧ್ಯಕ್ಷ ಆಕಾಂಕ್ಷಿಗಳು ತುದಿಗಾಲಿನ ಮೇಲೆ ನಿಂತಿದ್ದಾರೆ.

ಪುರಸಭೆ ಚುನಾವಣೆ ನಡೆದು ಒಂದು ವರ್ಷ ಕಳೆದರೂ ಪುರಸಭೆ ಸದಸ್ಯರಿಗೆ ಅಧಿಕಾರ ಸಿಗದ ಕಾರಣ ಜನರ ಮೂಲ ಸೌಕರ್ಯ ಹಾಗೂ ಜನರ ಸಮಸ್ಯೆಗಳಿಗೆ ತೊಂದರೆಯಾಗಿದೆ.

ಹಗ್ಗ ಜಗ್ಗಾಟ

ಗುಂಡ್ಲುಪೇಟೆ: ಪುರಸಭೆ ಅಧ್ಯಕ್ಷ ಸ್ಥಾನ ಬಿಸಿಎಂ(ಬಿ) ಮತ್ತು ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ.ಮತ್ತೆ ಮೀಸಲಾತಿ ಬದಲಾವಣೆಯಾದರಲ್ಲಿ ಮತ್ತೆ ಪುರಸಭೆ ಸದಸ್ಯರಲ್ಲಿ ಹಗ್ಗಜಗ್ಗಾಟ ನಡೆಯಲಿದೆ. ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಲ್ಲಿ ಬಿಸಿಎಂ ವರ್ಗಕ್ಕೆ ಸೇರಿದ ಬಿಜೆಪಿ ಜಿ.ಎಸ್‌. ಕಿರಣ್‌ ಗೌಡ, ನಾಗೇಶ್‌, ವೀಣಾ ಮಂಜುನಾಥ್‌ ಹಾಗೂ ಕಾಂಗ್ರೆಸ್‌ನ ಜಿ.ಎಸ್‌. ಮಧುಸೂಧನ್‌ ಹಾಗೂ ಪಕ್ಷೇತರರ ಅಭ್ಯರ್ಥಿ ಪಿ.ಶಶಿಧರ್‌(ದೀಪು) ಇದ್ದಾರೆ. ಪುರಸಬೆ ಮೀಸಲಾತಿಗೆ ತಡೆಯಾಜ್ಞೆ ಇದೆ. ರಾಜ್ಯ ಸರ್ಕಾರ ಮೀಸಲಾತಿ ಬದಲಿಸಿ ಮೀಸಲಾತಿ ನೀಡಿದರೆ ಬಿಸಿಎಂ(ಬಿ)ನಲ್ಲಿ ಗೆದ್ದಂತರ ಅಧ್ಯಕ್ಷಕಾಂಕ್ಷಿಗಳಿಗೆ ಭಾರಿ ನಿರಾಶೆಯಂತೆ ಆಗಲಿದೆ.