ಎತ್ತಿನಹೊಳೆ ಸೇತುವೆ ಸ್ಥಳಾಂತರ: ರೈತರ ಆಕ್ರೋಶ
ಎತ್ತಿನಹೊಳೆ ಕಾಮಗಾರಿ ನಡೆಸುತ್ತಿರುವ ಗುತ್ತಿಗೆದಾರ ಓಪನ್ ಚಾನೆಲ್‌ಗೆ ನಿರ್ಮಿಸಬೇಕಾದ ಸೇತುವೆಯನ್ನು ಬೇರೆಡೆಗೆ ಸ್ಥಳಾಂತರಿಸಲಾಗುತ್ತಿದೆ ಎಂದು ಆರೋಪಿಸಿ ನೂರಾರು ಜನ ರೈತರು ಎತ್ತಿನಹೊಳೆ ಕಾಮಗಾರಿಯನ್ನು ಸ್ಥಗಿತಗೊಳಿಸಿ ಲಾರಿಗಳನ್ನು ಅಡ್ಡಗಟ್ಟಿ ನಿಗದಿತ ಸ್ಥಳದಲ್ಲಿಯೇ ಸೇತುವೆ ನಿರ್ಮಿಸಬೇಕು ಎಂದು ಆಗ್ರಹಿಸಿ ಸ್ಥಳದಲ್ಲಿಯೇ ಅಡುಗೆ ಮಾಡಿಕೊಂಡು ನೂರಾರು ರೈತರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ ಘಟನೆ ತಾಲೂಕಿನಲ್ಲಿ ಜರುಗಿತು.
ಕೊರಟಗೆರೆ : ಎತ್ತಿನಹೊಳೆ ಕಾಮಗಾರಿ ನಡೆಸುತ್ತಿರುವ ಗುತ್ತಿಗೆದಾರ ಓಪನ್ ಚಾನೆಲ್‌ಗೆ ನಿರ್ಮಿಸಬೇಕಾದ ಸೇತುವೆಯನ್ನು ಬೇರೆಡೆಗೆ ಸ್ಥಳಾಂತರಿಸಲಾಗುತ್ತಿದೆ ಎಂದು ಆರೋಪಿಸಿ ನೂರಾರು ಜನ ರೈತರು ಎತ್ತಿನಹೊಳೆ ಕಾಮಗಾರಿಯನ್ನು ಸ್ಥಗಿತಗೊಳಿಸಿ ಲಾರಿಗಳನ್ನು ಅಡ್ಡಗಟ್ಟಿ ನಿಗದಿತ ಸ್ಥಳದಲ್ಲಿಯೇ ಸೇತುವೆ ನಿರ್ಮಿಸಬೇಕು ಎಂದು ಆಗ್ರಹಿಸಿ ಸ್ಥಳದಲ್ಲಿಯೇ ಅಡುಗೆ ಮಾಡಿಕೊಂಡು ನೂರಾರು ರೈತರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ ಘಟನೆ ತಾಲೂಕಿನಲ್ಲಿ ಜರುಗಿತು.
ತಾಲೂಕಿನ ದೊಡ್ಡಪಾಲನಹಳ್ಳಿ ಗ್ರಾಮದ ಬಳಿ ಶ್ರೀ ಮುನೇಶ್ವರ ಸ್ವಾಮಿ ದೇವಸ್ಥಾನಕ್ಕೆ ಹೋಗುವ ರಸ್ತೆಗೆ ಅಡ್ಡಲಾಗಿ ಎತ್ತಿನಹೊಳೆ ತೆರೆದ ಚಾನೆಲ್‌ಗೆ ನಿರ್ಮಿಸಬೇಕಿದ್ದ ಸೇತುವೆ ಬೇರೆ ಸ್ಥಳಾಂತರಿಸಲಾಗುತ್ತಿದೆ ಎಂದು ಅಲ್ಲಿನ ನೂರಾರು ರೈತರು ಕಾಮಗಾರಿಯನ್ನ ನಿಲ್ಲಿಸಿ ಎತ್ತಿನಹೊಳೆ ಬಳಸಲಾಗುವ ಟ್ಯ್ರಾಕ್ಟರ್, ಜೆಸಿಬಿ, ಹಿಟಾಚಿ ಸೇರಿದಂತೆ ಲಾರಿಗಳನ್ನ ಅಡ್ಡಗಟ್ಟಿ ಪ್ರತಿಭಟನೆ ನಡೆಸಿ ನಿಯೋಜಿತ ಸ್ಥಳದಲ್ಲಿಯೇ ಸೇತುವೆ ನಿರ್ಮಿಸಬೇಕು ಎಂದು ಆಗ್ರಹಿಸಿದರು.
ಎತ್ತಿನಹೊಳೆ ಕಾಮಗಾರಿ ಓಪನ್ ಚಾನೆಲ್ ( ತೆರೆದ ಕಾಲುವೆ) ಕಾಮಗಾರಿಯಿಂದ ರೈತಾಪಿ ವರ್ಗ ಚಾನೆಲ್ ದಾಟಲು ಸಾಧ್ಯವಿಲ್ಲದ ಕಾರಣ ರೈತರಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಅನುಕೂಲವಾಗುವ ಸ್ಥಳಗಳಲ್ಲಿ ಸೇತುವೆ ನಿರ್ಮಾಣಕ್ಕೆ ಯೋಜನೆಯಲ್ಲಿ ಅವಕಾಶ ಕಲ್ಪಿಸಿಕೊಂಡಿದ್ದು, ಈಗ ಅಲ್ಲಿನ ಗುತ್ತಿಗೆದಾರ ನಿಗದಿತ ಸ್ಥಳದಲ್ಲಿ ಸೇತುವೆ ನಿರ್ಮಾಣ ಮಾಡದೆ 100 ಮೀಟರ್ ನಂತರ ಸೇತುವೆ ಗೆ ಗುತ್ತಿಗೆದಾರ ಅವಕಾಶ ಮಾಡಿಕೊಂಡಿರುವುದು ರೈತರಿಗೆ ಅಡಚಣೆ ಆಗುತ್ತಿರುವುದು ಕಾರಣ ಇಲ್ಲಿನ ನೂರಾರು ರೈತರು ಕಾಮಗಾರಿಯನ್ನು ನಿಗದಿತ ಸ್ಥಳದಲ್ಲಿ ಕಾರ್ಯಗತಗೊಳಿಸಬೇಕು ಎಂದು ಒತ್ತಾಯ ಮಾಡಿದ್ದಾರೆ.
ಪ್ರತಿಭಟನ ನಿರತ ರೈತರ ಒತ್ತಾಯ ಈ ಮಾರ್ಗದಲ್ಲಿ ಶ್ರೀ ಮುನೇಶ್ವರ ದೇವಸ್ಥಾನವಿದೆ, ನೂರಾರು ರೈತರು ಈ ಮಾರ್ಗದಲ್ಲಿ ಇರುವಂತ ಭೂಮಿಯಲ್ಲಿ ಹೂ, ತರಕಾರಿ ಬೆಳೆಯುವುದೇ ಹೆಚ್ಚಾಗಿರುವುದರಿಂದ ಇಲ್ಲಿನ ರೈತರು ಮಾರುಕಟ್ಟೆಗೆ ಸಾಗಿಸಲು ನಿಗದಿತ ಸ್ಥಳದಲ್ಲಿ ಸೇತುವೆ ನಿರ್ಮಾಣಗೊಳಿಸದಿದ್ದರೆ, ಒಂದು ಕಿಲೋಮೀಟರ್ ಸುತ್ತಿಕೊಂಡು ಮತ್ತೆ ಇದೇ ರಸ್ತೆಗೆ ಬರುವುದರಿಂದ ರೈತರಿಗೆ ತುಂಬಾ ಅನಾನುಕೂಲವಾಗಲಿದೆ, ಮಳೆಗಾಲದಲ್ಲಿ ಈ ರಸ್ತೆಯಲ್ಲಿ ಓಡಾಡುವುದೇ ಕಷ್ಟ. ರೈತರಿಗೆ ತುಂಬಾ ಅನುಕೂಲವಾಗಲಿದೆ ಆದ್ದರಿಂದ ದಯಮಾಡಿ ನಿಗದಿತ ಸ್ಥಳದಲ್ಲಿಯೇ ಸೇತುವೆ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸುತ್ತಿದ್ದಾರೆ.
ಶಾಶ್ವತ ಕುಡಿಯುವ ನೀರಿನ ಮೂಲವಾದ ಎತ್ತಿನಹೊಳೆ ಮೂಲ ಯೋಜನೆ ಅನುಷ್ಠಾನಗೊಂಡಿದ್ದರೆ ಕೊರಟಗೆರೆ ತಾಲೂಕಿನ ಗಡಿಭಾಗ ಬೈರಗೊಂಡ್ಲು ಬಳಿ ದೊಡ್ಡ ಬಫರ್ ಡ್ಯಾಮ್ ನಿರ್ಮಾಣಗೊಳ್ಳುತ್ತಿತ್ತು. ಆದರೆ ಕೊರಟಗೆರೆ ಹಾಗೂ ದೊಡ್ಡಬಳ್ಳಾಪುರ ನಡುವೆ ದರ ವ್ಯತ್ಯಾಸ ದಿಂದ ಕಾಮಗಾರಿ ಅನುಷ್ಠಾನದಲ್ಲಿ ವಿಳಂಬ ಕಾಣುತ್ತಿದ್ದು, ಆದರೆ ಕೊರಟಗೆರೆ ತಾಲೂಕಿನ ಎಲ್ಲಾ ಕೆರೆಗಳಿಗೂ ಮುಂದಿನ ದಿನಗಳಲ್ಲಿ ನೀರು ಹರಿಯಲಿದೆ ಎನ್ನಲಾಗುತ್ತಿದೆ.
ಕಳಪೆ ಕಾಮಗಾರಿ ಆರೋಪ
ಎತ್ತಿನಹೊಳೆ ಕಾಮಗಾರಿ ಕಾಳಪೆ ಕಾಮಗಾರಿ ನಡೆಯುತ್ತಿದೆ, ಕೋಟ್ಯಾಂತರ ರೂಪಾಯಿ ಅನುದಾನ ಹಗಲು ದರೋಡೆಯಾಗುತ್ತಿದೆ, ನಿಯಮಾನುಸಾರ ಕಾಮಗಾರಿ ನಡೆಯುತ್ತಿಲ್ಲ, ರೂಟ್ ಮ್ಯಾಪ್, ಎಸ್ಟಿಮೆಂಟ್ ಹಾಗೂ ಕಾಮಗಾರಿಗೆ ಬಹಳಷ್ಟು ವ್ಯತ್ಯಾಸವಿದೆ. ಓಪನ್ ಚಾನೆಲ್ ಕಾಮಗಾರಿ ನಡೆಯುವ ಹಂತದಲ್ಲಿಯೇ ಸಿಮೆಂಟ್ ವಾಲ್ ತತಕ್ಷಣವೇ ಮಾಡಲಾಗುತ್ತಿದೆ, ಸಿಮೆಂಟ್ ವಾಲ್‌ನಲ್ಲಿ ಕ್ವಾಲಿಟಿ ಇಲ್ಲ, ಅದು ಯಾವಾಗ ಬೇಕಾದರೂ ಕುಸಿಯಬಹುದು, ಒಟ್ಟಾರೆ ಎತ್ತಿನಹೊಳೆ ಕಾಮಗಾರಿ ಗುಣಮಟ್ಟದಿಂದ ಕೂಡಿಲ್ಲ ಎನ್ನುತ್ತಾರೆ ಸಾರ್ವಜನಿಕರು.
ಪರ್ಸೇಂಟೇಜ್ ಕೊಟ್ರೆ ಮಾತ್ರ ಬಿಲ್ ಪಾವತಿ
ಭೂ ಸ್ವಾದಿನ ಪ್ರಕ್ರಿಯೆ ಅಡಿ 1:3 ಅಂದ್ರೆ 100ಕ್ಕೆ ಶೇ.3 ಕೊಟ್ಟರೆ ಮಾತ್ರ ರೈತರ ಅಕೌಂಟ್‌ಗಳಿಗೆ ಹಣ ಸಂದಾಯವಾಗಲಿದೆ. ಇಲ್ಲವಾದರೆ ಯಾವುದೇ ಕಾರಣಕ್ಕೂ ಹಣ ಸಂದಾಯವಾಗುವುದಿಲ್ಲ ಎಂದು ರೈತರು ಎತ್ತಿನಹೊಳೆ ಹಾಗೂ ವಿಶ್ವೇಶ್ವರಯ್ಯ ಜಲ ನಿಗಮ ವಿರುದ್ಧ ಹಿಡಿ ಶಾಪ ಹಾಕುತ್ತಿದ್ದಾರೆ.