ವಿಜಯಪುರದಲ್ಲಿ ಎಥೆನಾಲ್ ಟ್ಯಾಂಕರ್ ಸ್ಫೋಟ, ಇಬ್ಬರ ಸಾವು
ಎಥೆನಾಲ್ ಟ್ಯಾಂಕರ್ ಸ್ಫೋಟ| ಇಬ್ಬರು ಕಾರ್ಮಿಕರ ಸಾವು| ನಗರದ ರೈಲ್ವೆ ನಿಲ್ದಾಣದ ಬಳಿ ಇರುವ ನಾಡಗೌಡ ರೋಡಲೈನ್ಸ್ ಗ್ಯಾರೇಜ್‌ನಲ್ಲಿ ನಡೆದ ಘಟನೆ| ಭಾರೀ ಸ್ಪೋಟದಿಂದ ಆತಂಕಕ್ಕೊಳಗಾದ ಜನತೆ| ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಗೋಳಗುಮ್ಮಟ ಠಾಣೆ ಪೊಲೀಸರು|
ವಿಜಯಪುರ(ಡಿ.21): ವೆಲ್ಡಿಂಗ್ ಮಾಡುವ ವೇಳೆ ಎಥೆನಾಲ್ ಟ್ಯಾಂಕರ್ ಸ್ಫೋಟವಾದ ಪರಿಣಾಮ ಇಬ್ಬರು ಕಾರ್ಮಿಕರ ಸಾವನ್ನಪ್ಪಿ, ಮೂವರು ಗಾಯಗೊಂಡ ಘಟನೆ ನಗರದ ರೈಲ್ವೆ ನಿಲ್ದಾಣದ ಬಳಿ ಇಂದು(ಶನಿವಾರ) ನಡೆದಿದೆ. ಮೃತ ಕಾರ್ಮಿಕರನ್ನು ರಾಜೂ ಹಾಗೂ ಪ್ರಕಾಶ ಟೋನಿ ಎಂದು ಗುರುತಿಸಲಾಗಿದೆ.
ಮೃತರನ್ನು ಉತ್ತರ ಪ್ರದೇಶ ಮೂಲದ ವಿರೇಂದ್ರ ಪ್ರಜಾಪತಿ(28) ಹಾಗೂ ವಿಜಯಪುರ ಮೂಲದ ರಾಜೂ ಗಿಡ್ಡೆ (30) ಎಂದು ಗುರುತಿಸಲಾಗಿದೆ. ವಿಶ್ವಾನಾಥ ಬಡಿಗೇರ, ಪ್ರಕಾಶ ಶಿರೋಳ ಹಾಗೂ ಬಸವರಾಜ ಡೊಣೂರ್ ಗಾಯಗೊಂಡವರಾಗಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಎಥೆನಾಲ್ ಖಾಲಿ ಮಾಡಿದ ಬಳಿಕ ಟ್ಯಾಂಕರ್‌ಅನ್ನು ಗ್ಯಾರೇಜ್‌ಗೆ ತಂದು ವೆಲ್ಡಿಂಗ್ ಮಾಡಿಸಲಾಗುತ್ತಿತ್ತು. ಈ ವೇಳೆ ಟ್ಯಾಂಕರ್ ಏಕಾಏಕಿ ಬ್ಲಾಸ್ಟ್ ಆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಟ್ಯಾಂಕರ್ ಏಕೆ ಸ್ಫೋಟಗೊಂಡಿದೆ ಎಂಬುದರ ಮಾಹಿತಿ ಲಭ್ಯವಾಗಿಲ್ಲ.
ಭಾರೀ ಸ್ಪೋಟದಿಂದ ಸುತ್ತಮುತ್ತಲಿನ ನಿವಾಸಿಗಳು ಆತಂಕಕ್ಕೊಳಗಾಗಿದ್ದಾರೆ. ಘಟನಾ ಸ್ಥಳಕ್ಕೆ ಗೋಳಗುಮ್ಮಟ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.