Asianet Suvarna News Asianet Suvarna News

ಮಣಿಪಾಲದಲ್ಲಿ ಐಸ್‌ಕ್ರೀಂ ಘಟಕ ಸ್ಥಾಪನೆ

ಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದಿಂದ ಮಣಿಪಾಲದಲ್ಲಿ ಐಸ್‌ಕ್ರೀಂ ತಯಾರಿಕಾ ಘಟಕ ಹಾಗೂ ಗ್ರಾಹಕರಿಗೆ ಆ್ಯಪಲ್‌ ಮಿಲ್‌್ಕ ಶೇಕ್‌ ಹೊಸ ಉತ್ಪನ್ನವನ್ನು ಪರಿಚಯಿಸಲು ಚಿಂತನೆ ನಡೆದಿದೆ ಎಂದು ಒಕ್ಕೂಟದ ಅಧ್ಯಕ್ಷ ಸುಚರಿತ ಶೆಟ್ಟಿಹೇಳಿದರು.

Establishment of ice cream unit in Manipal udupi rav
Author
First Published Oct 23, 2022, 7:30 AM IST

ಕಾರ್ಕಳ (ಅ.23) : ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದಿಂದ ಮಣಿಪಾಲದಲ್ಲಿ ಐಸ್‌ಕ್ರೀಂ ತಯಾರಿಕಾ ಘಟಕ ಹಾಗೂ ಗ್ರಾಹಕರಿಗೆ ಆ್ಯಪಲ್‌ ಮಿಲ್‌್ಕ ಶೇಕ್‌ ಹೊಸ ಉತ್ಪನ್ನವನ್ನು ಪರಿಚಯಿಸಲು ಚಿಂತನೆ ನಡೆದಿದೆ ಎಂದು ಒಕ್ಕೂಟದ ಅಧ್ಯಕ್ಷ ಸುಚರಿತ ಶೆಟ್ಟಿಹೇಳಿದರು.

Business Idea : ಅಮೂಲ್ ಫ್ರಾಂಚೈಸಿ ಪಡೆದು ಹೀಗೆ ಗಳಿಕೆ ಶುರು ಮಾಡಿ

ಅವರು ಕಾರ್ಕಳ ತಾಲೂಕು ಪತ್ರಕರ್ತರ ಸಂಘದ ವತಿಯಿಂದ ಕಾರ್ಕಳ ತಾಲೂಕು ಪ್ರವಾಸಿ ಮಂದಿರದಲ್ಲಿ ಶನಿವಾರ ನಡೆದ ಪತ್ರಿಕಾ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು. ದ.ಕ. ಸಹಕಾರಿ ಹಾಲು ಉತ್ಪಾದಕ ಒಕ್ಕೂಟದ ವತಿಯಿಂದ ಧರ್ಮಸ್ಥಳ ದೇವಾಲಯಕ್ಕೆ ತಿಂಗಳಿಗೆ 20 ಲಕ್ಷ ರುಪಾಯಿ ಮೌಲ್ಯದ ತುಪ್ಪವನ್ನು ಸರಬರಾಜು ಮಾಡಲಾಗುತ್ತಿದೆ. ಮಹಿಳೆಯರ ಉನ್ನತ ಶಿಕ್ಷಣಕ್ಕಾಗಿ ಉಚಿತವಾಗಿ ಒಕ್ಕೂಟದ ವತಿಯಿಂದ ಮಂಗಳೂರಿನಲ್ಲಿ ಹೊಸ ಹಾಸ್ಟೆಲ್‌ ನಿರ್ಮಾಣಕ್ಕಾಗಿ 2 ಕೋಟಿ ಅನುದಾನ ಮೀಸಲಿಡಲಾಗಿದೆ. ಉಡುಪಿ ಜಿಲ್ಲೆಯಲ್ಲಿ ದಿನವಹಿ ಸರಾಸರಿ 1,30,000 ಲೀಟರ್‌ ಹಾಲು, 3000 ಕಿ.ಗ್ರಾಂ. ಮೊಸರು ಹಾಗೂ 2000 ಕಿ.ಗ್ರಾಂ. ಮಜ್ಜಿಗೆ ನಿತ್ಯ ಮಾರಾಟವಾಗುತ್ತಿದೆ. ಹಾಲಿನ ಗುಣಮಟ್ಟದಲ್ಲಿ ಒಕ್ಕೂಟವು ದೇಶದಲ್ಲಿ ಹಾಗೂ ರಾಜ್ಯದಲ್ಲಿಯೆ ಮುಂದಿದೆ ಎಂದು ಅಧ್ಯಕ್ಷರು ಹೇಳಿದರು.

ಚರ್ಮಗಂಟು ಲಸಿಕೆ ದಾಸ್ತಾನು: ಇತ್ತೀಚಿನ ದಿನಗಳಲ್ಲಿ ಕೃಷಿ ಕ್ಷೇತ್ರವು ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗುತ್ತಿದ್ದು, ಕಳೆದ ವರ್ಷದಿಂದ ಹಾಲಿನ ಉತ್ಪಾದನೆಯೂ ಕುಂಠಿತಗೊಳ್ಳುತ್ತಿದೆ ಎಂದ ಅಧ್ಯಕ್ಷ ಸುಚರಿತ ಶೆಟ್ಟಿ, ದನ ಕಳವು ಪ್ರಕರಣಗಳು, ಆರೋಗ್ಯ ಸಂಬಂಧಿ ಕಾಯಿಲೆಗಳಿಂದ ಪಶುಗಳು ಮೃತಪಟ್ಟರೆ ಪರಿಹಾರ ನೀಡಲಾಗುವುದು. ದ.ಕ.- ಉಡುಪಿ ಜಿಲ್ಲೆಗಳಲ್ಲಿ ಪಶುಗಳಿಗೆ ಚರ್ಮಗಂಟು ರೋಗದ ಲಕ್ಷಣಗಳು ಕಂಡುಬಂದಿಲ್ಲ. ಆದರೂ ಮುನ್ನೆಚ್ಚರಿಕೆಗಾಗಿ 25000 ಲಸಿಕೆಯನ್ನು ಒಕ್ಕೂಟವು ಈಗಾಗಲೇ ತರಿಸಿಕೊಂಡು ದಾಸ್ತಾನಿರಿಸಿದೆ. ಚರ್ಮಗಂಟು ರೋಗದ ಪಶುಗಳ ಹಾಲನ್ನು ಉಪಯೋಗಿಸಬಹುದಾಗಿದೆ ಎಂದು ತಿಳಿಸಿದರು.

ಒಕ್ಕೂಟದ ನಿರ್ದೇಶಕ ನರಸಿಂಹ ಕಾಮತ್‌ ಮಾತನಾಡಿ, ಕೇಂದ್ರ ಸರ್ಕಾರದ ಸಹಕಾರಿ ಸಚಿವಾಲಯವು ಸಹಕಾರಿ ಕ್ಷೇತ್ರದಲ್ಲಿ ಹೆಚ್ಚಿನ ನಿರೀಕ್ಷೆ ಗಳನ್ನು ಹುಟ್ಟು ಹಾಕಿದೆ. ಕೇಂದ್ರ ಸರ್ಕಾರ ಹೆಚ್ಚಿನ ಪ್ರಮಾಣದಲ್ಲಿ ಅತ್ಮನಿರ್ಭರ ಯೋಜನೆಗಳಡಿ ಸ್ವಾವಲಂಬಿ ಕಾರ್ಯಗಳಿಗೆ ಅವಕಾಶ ನೀಡುತ್ತಿದೆ. ಸಹಕಾರ ಭಾರತಿ ಹಾಗೂ ಭಾರತೀಯ ಕಿಸಾನ್‌ ಸಂಘದ ವತಿಯಿಂದ ಹಾಲಿನ ಖರೀದಿ ದರ ಏರಿಸುವಂತೆ ಸರ್ಕಾರಕ್ಕೆ ಒತ್ತಡ ಹೇರಲಾಗುತ್ತಿದೆ ಎಂದು ಹೇಳಿದರು.

ಮಣಿಪಾಲ್ ಆಸ್ಪತ್ರೆಯಲ್ಲಿರುವ ಆನಂದ್ ಮಾಮನಿ ಮತ್ತು ಶ್ರೀಮಂತ ‌ಇಲ್ಲಾಳ್ ಆರೋಗ್ಯ ವಿಚಾರಿಸಿದ ಸಿಎಂ

ನಿರ್ದೇಶಕರುಗಳಾದ ಸುಧಾಕರ ಶೆಟ್ಟಿಬಜಗೋಳಿ, ಬೋಳ ಸದಾಶಿವ ಶೆಟ್ಟಿಮಾತನಾಡಿದರು. ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗಣೇಶ್‌ ನಾಯಕ್‌ ಸಾಣೂರು ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಉಡುಪಿ ಜಿಲ್ಲಾ ಪತ್ರಕರ್ತರ ಸಂಘದ ಉಪಾಧ್ಯಕ್ಷ ಆರ್‌.ಬಿ. ಜಗದೀಶ್‌, ಜಿಲ್ಲಾ ಪ್ರತಿನಿಧಿಗಳಾದ ಮೊಹಮ್ಮದ್‌ ಷರೀಫ್‌, ಉದಯ್‌ ಕುಮಾರ್‌, ಸಂಘದ ಕಾರ್ಯದರ್ಶಿ ಬಾಲಕೃಷ್ಣ ಭೀಮಗುಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪತ್ರಕರ್ತ ಹರೀಶ್‌ ಬೈಲೂರು ಕಾರ್ಯಕ್ರಮ ನಿರೂಪಿಸಿದರು. ಸಂಘದ ಉಪಾಧ್ಯಕ್ಷ ಹರೀಶ್‌ ಸಚ್ಚರಿಪೇಟೆ ಸ್ವಾಗತಿಸಿದರು. ಕೋಶಾಧಿಕಾರಿ ರಾಂ ಅಜೆಕಾರು ವಂದಿಸಿದರು.

Follow Us:
Download App:
  • android
  • ios