ಗೋ ರಕ್ಷಣೆಗಾಗಿ ಗೋಶಾಲೆ ಸ್ಥಾಪನೆ: ಸಚಿವ ಪ್ರಭು ಚವ್ಹಾಣ್
ಗೋಹತ್ಯೆ ನಿಷೇಧ ಕಾಯ್ದೆಯನ್ನು ಜಾರಿ ನಂತರ ಜಾನುವಾರುಗಳು ಕಸಾಯಿಖಾನೆಗಳಿಗೆ ಹೋಗುವುದನ್ನು ತಡೆಗಟ್ಟಿರಕ್ಷಣೆ ಮಾಡುವ ನಿಟ್ಟಿನಲ್ಲಿ ಸರ್ಕಾರ ಪ್ರತಿ ಜಿಲ್ಲೆಯಲ್ಲಿ ಗೋಶಾಲೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದು ಪಶುಸಂಗೋಪನೆ ಸಚಿವ ಪ್ರಭು ಬಿ.ಚವ್ಹಾಣ್ ತಿಳಿಸಿದರು.
ದೊಡ್ಡಬಳ್ಳಾಪುರ/ದಾಬಸ್‌ಪೇಟೆ (ನ.30): ಗೋಹತ್ಯೆ ನಿಷೇಧ ಕಾಯ್ದೆಯನ್ನು ಜಾರಿ ನಂತರ ಜಾನುವಾರುಗಳು ಕಸಾಯಿಖಾನೆಗಳಿಗೆ ಹೋಗುವುದನ್ನು ತಡೆಗಟ್ಟಿರಕ್ಷಣೆ ಮಾಡುವ ನಿಟ್ಟಿನಲ್ಲಿ ಸರ್ಕಾರ ಪ್ರತಿ ಜಿಲ್ಲೆಯಲ್ಲಿ ಗೋಶಾಲೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದು ಪಶುಸಂಗೋಪನೆ ಸಚಿವ ಪ್ರಭು ಬಿ.ಚವ್ಹಾಣ್ ತಿಳಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಕೊಡಿಗೆಯಲ್ಲಿ ಜಿಲ್ಲಾ ಸರ್ಕಾರಿ ಗೋಶಾಲೆ ಲೋಕಾರ್ಪಣೆಗೊಳಿಸಿ, ಗೋಪೂಜೆ ಸಲ್ಲಿಸಿ ಮಾತನಾಡಿದ ಅವರು, ಅಕ್ರಮ ಕಸಾಯಿಖಾನೆಗಳಿಗೆ ಮುಚ್ಚುವ ಉದ್ದೇಶದಿಂದಲೇ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದ ನಂತರದಲ್ಲಿ ಗೋವುಗಳ ರಕ್ಷಣೆಗಾಗಿ ಜಿಲ್ಲಾ ಮಟ್ಟದಲ್ಲಿ ಗೋಶಾಲೆಗಳನ್ನು ಸ್ಥಾಪನೆಗೆ ಮುಂದಾಗಿದ್ದರ ಫಲವೇ ಇಂದು ಲೋಕಾರ್ಪಣೆಯಾಗಿರುವ ಗೋಶಾಲೆಯಾಗಿದೆ. ಮೂಕ ಪ್ರಾಣಿಗಳ ರಕ್ಷಣೆಯಾಗಬೇಕು ಎನ್ನುವುದೇ ನಮ್ಮ ಸರ್ಕಾರದ ಸಂಕಲ್ಪ ಎಂದು ಅವರು ಸ್ಪಷ್ಟಪಡಿಸಿದರು.
ಜಾನುವಾರುಗಳ ಆರೈಕೆಗೆ ಬೆನ್ನೆಲುಬಾಗಿ ನಿಲ್ಲುವ ಸಲುವಾಗಿ ರಾಜ್ಯದಲ್ಲಿ ಪಶು ಸಂಜೀವಿನಿ ಆಂಬ್ಯುಲೆನ್ಸ್ ಗಳು ಕಾರ್ಯನಿರ್ವಹಿಸುತ್ತಿವೆ. ಜಾನುವಾರುಗಳ ಸಮಸ್ಯೆ ಕುರಿತು ಹೊತ್ತು ಬರುವ ಸಾರ್ವಜನಿಕರಿಗೆ ಕೂಡಲೇ ಸ್ಪಂದಿಸಿ, ಜಾನುವಾರುಗಳ ಪಾಲನೆ, ಪೋಷಣೆ, ಆರೈಕೆ ಮತ್ತು ಪಶು ಆರೋಗ್ಯ ಸೇವೆಗಾಗಿ ಪಶುಸಂಗೋಪನೆ ಇಲಾಖೆ ಕಾರ್ಯನಿರ್ವಹಿಸುತ್ತಿದೆ ಎಂದು ಪ್ರಭು ಚವ್ಹಾಣ್ ವಿವರಿಸಿದರು.
ವಿಶ್ವದ ನಂ.1 ತಾಂತ್ರಿಕ ಕೇಂದ್ರವಾಗಲಿರುವ ಬೆಂಗಳೂರು: ಸಚಿವ ಅಶ್ವತ್ಥ್ ನಾರಾಯಣ
ಸರ್ಕಾರದ ಜನಪರ ಯೋಜನೆಗಳಾದ ಗೋಹತ್ಯೆ ನಿಷೇಧ ಕಾಯ್ದೆ, ಪ್ರಾಣಿ ಕಲ್ಯಾಣ ಮಂಡಳಿ, ಪಶು ಸಹಾಯವಾಣಿ 1962, ಪಶು ಸಂಜೀವಿನಿ ಆಂಬ್ಯುಲೆನ್ಸ್, ಪಶು ಸಂಚಾರ ಚಿಕಿತ್ಸಾಲಯ, ಪಶು ಚಿಕಿತ್ಸಾಲಯಗಳು, ಗೋಶಾಲೆಗಳ ನಿರ್ಮಾಣ, ಗೋಮಾತಾ ಸಹಕಾರ ಸಂಘ, ಪುಣ್ಯಕೋಟಿ ದತ್ತು ಯೋಜನೆ, 400 ಪಶು ವೈದ್ಯರ ನೇಮಕಾತಿ, 250 ಪಶು ವೈದ್ಯಕೀಯ ಪರಿವೀಕ್ಷಕರ ನೇಮಕಾತಿ, ಇಲಾಖೆಯಲ್ಲಿ ಮುಂಬಡ್ತಿ ಹಾಗೂ ಆಡಳಿತಕ್ಕೆ ವೇಗ ಹೆಚ್ಚಿಸಿರುವುದು ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರಲಾಗಿದೆ. ಈ ಯೋಜನೆಗಳನ್ನು ಜನರಿಗೆ ತಲುಪಿಸಲು ಶ್ರಮಿಸಲಾಗುತ್ತಿದೆ ಎಂದು ಪ್ರಭು ಚವ್ಹಾಣ್ ಹೇಳಿದರು.
ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಮಾತನಾಡಿ, ಪಶುಸಂಗೋಪನೆ ಇಲಾಖೆಗೆ ಪ್ರಭು ಚವ್ಹಾಣ್ ಅವರು ಕಾಯಕಲ್ಪ ನೀಡಿ ಜನಪರ ಯೋಜನೆಗಳನ್ನು ಜಾರಿಗೆ ತಂದು ರೈತರ ಮನೆ ಬಾಗಿಲಿಗೆ ಪಶುಸೇವೆ ಒದಗಿಸುತ್ತಿದ್ದಾರೆ. ಇಲಾಖಾ ಅಧಿಕಾರಿಗಳು ಶ್ರಮಿಸಬೇಕು. ಇದನ್ನು ಜನರು ಸದುಪಯೋಗ ಪಡಿಸಿಕೊಳ್ಳಲು ಮಾಹಿತಿ ನೀಡಬೇಕು ಎಂದರು.
ಕೃಷಿ ಪ್ರಧಾನ ದೇಶವಾದ ಭಾರತದಲ್ಲಿ ಜಾನುವಾರು ಸಂಕುಲ ರಕ್ಷಣೆಯೇ ನಮ್ಮ ಸರ್ಕಾರದ ಗುರಿಯಾಗಿದೆ. ಜಾನುವಾರು ತುರ್ತು ಚಿಕಿತ್ಸೆಗಾಗಿ ಆಂಬ್ಯುಲೆನ್ಸ್, ಗೋಹತ್ಯೆ ನಿಷೇಧ ಕಾಯ್ದೆ, ಗೋಶಾಲೆ, ಪುಣ್ಯಕೋಟಿ ದತ್ತು ಯೋಜನೆ ಸೇರಿದಂತೆ ಜನಪರ ಯೋಜನೆಗಳು ಜನರಿಗೆ ಸಹಕಾರಿಯಾಗಿವೆ ಎಂದರು. ಇದೇ ಸಂದರ್ಭದಲ್ಲಿ ನಿಡವಂದ ಪಶು ಚಿಕಿತ್ಸಾಲಯ ಮತ್ತರ ತ್ಯಾಮಗೊಂಡ್ಲು ಪಶು ಆಸ್ಪತ್ರೆ ಲೋಕಾರ್ಪಣೆ ಮಾಡಿದರು.
ಸಚಿವ ಎಂಟಿಬಿ- ಶಾಸಕ ಶರತ್ ಬಚ್ಚೇಗೌಡರ ನಡುವೆ ಪ್ರೋಟೋಕಾಲ್ ಜಟಾಪಟಿ
31 ಹಸು ದತ್ತು ಪಡೆದ ಸುಧಾಕರ್: ಪುಣ್ಯಕೋಟಿ ದತ್ತು ಯೋಜನೆ ಜಾರಿಗೆ ತಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 11 ಹಸು ಪಡೆದರು. ನಾನು ಕೂಡ 31 ಹಸುಗಳನ್ನು ಜಿಲ್ಲೆಗೊಂದರಂತೆ ಗೋವು ದತ್ತು ಪಡೆದಂತೆಯೇ ಚಿತ್ರನಟ ಸುದೀಪ್ ಕೂಡ ದತ್ತು ಪಡೆದಿದ್ದಾರೆ. ನೀವು ಜಿಲ್ಲೆಗೊಂದರಂತೆ 31 ಗೋವುಗಳನ್ನು ದತ್ತು ಪಡೆಯುವಂತೆ ಸಲಹೆ ನೀಡಿದರು. ಪ್ರಭು ಚವ್ಹಾಣ್ ಅವರ ಮನವಿಗೆ ಸ್ಪಂದಿಸಿದ ಸಚಿವ ಡಾ.ಸುಧಾಕರ್ ನಾನು ಕೂಡ 31 ಗೋವು ದತ್ತು ಪಡೆಯುತ್ತೇನೆ ಎಂದರು. ಶಾಸಕ ಡಾ.ಶ್ರೀನಿವಾಸಮೂರ್ತಿ, ಮಾಜಿ ಶಾಸಕ ನಾಗರಾಜು ಅವರು ತಲಾ 5 ಗೋವು ದತ್ತು ಪಡೆಯುತ್ತೇನೆ ಎಂದರು.