Asianet Suvarna News Asianet Suvarna News

ತುರ್ತು ಸೇವೆಗಳಿಗಾಗಿ ಕ್ಲಿನಿಕ್ ಸ್ಥಾಪನೆ: ಸಚಿವ ಪರಮೇಶ್ವರ್

ರೈಲ್ವೆ ನಿಲ್ದಾಣದಲ್ಲಿ ಆಗುವ ಅವಘಡಗಳಿಗೆ ತುರ್ತು ಸೂಕ್ತ ಚಿಕಿತ್ಸೆ ನೀಡುವ ಸಲುವಾಗಿ ರೈಲ್ವೆ ನಿಲ್ದಾಣದಲ್ಲಿ ತೆರೆದಿರುವ 'ಸಿದ್ದಾರ್ಥ ಕ್ಲಿನಿಕ್' ಜನರಿಗೆ ಸಹಕಾರಿಯಾಗಲಿದೆ ಎಂದು ಸಾಹೇ ವಿಶ್ವವಿದ್ಯಾಲಯದ ಕುಲಾಧಿಪತಿ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ತಿಳಿಸಿದರು. 

Establishment of clinic for emergency services Says Minister Dr G Parameshwar gvd
Author
First Published Mar 8, 2024, 12:05 PM IST

ತುಮಕೂರು (ಮಾ.08): ರೈಲ್ವೆ ನಿಲ್ದಾಣದಲ್ಲಿ ಆಗುವ ಅವಘಡಗಳಿಗೆ ತುರ್ತು ಸೂಕ್ತ ಚಿಕಿತ್ಸೆ ನೀಡುವ ಸಲುವಾಗಿ ರೈಲ್ವೆ ನಿಲ್ದಾಣದಲ್ಲಿ ತೆರೆದಿರುವ 'ಸಿದ್ದಾರ್ಥ ಕ್ಲಿನಿಕ್' ಜನರಿಗೆ ಸಹಕಾರಿಯಾಗಲಿದೆ ಎಂದು ಸಾಹೇ ವಿಶ್ವವಿದ್ಯಾಲಯದ ಕುಲಾಧಿಪತಿ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ತಿಳಿಸಿದರು. ನಗರದ ರೈಲ್ವೇ ನಿಲ್ದಾಣದಲ್ಲಿ ಸಿದ್ಧಾರ್ಥ ವೈದ್ಯಕೀಯ ಕಾಲೇಜಿನ ವತಿಯಿಂದ ಆರಂಭಿಸಲಾದ ತುರ್ತು ಚಿಕಿತ್ಸೆ ಕೇಂದ್ರ ಲೋಕಾರ್ಪಣೆಗೊಳಿಸಿ ಮಾತನಾಡಿದ ಗೃಹ ಸಚಿವರು, ತುಮಕೂರು ರೈಲ್ವೆ ನಿಲ್ದಾಣದ ಆಜುಬಾಜಿನಲ್ಲಿ ಆಗುವ ಅಪಘಾತ ಸೇರಿದಂತೆ ಇತರೆ ಸಮಸ್ಯೆಗಳು ಜರುಗಿದಾಗ ತುರ್ತು ಚಿಕಿತ್ಸೆ ದೊರೆಯಲಿ ಎಂಬ ಆಶಯದಿಂದ ಸಿದ್ದಾರ್ಥ ವೈದ್ಯಕೀಯ ಮಹಾವಿದ್ಯಾಲಯದ ಆಶ್ರಯದಲ್ಲಿ ಸಿದ್ದಾರ್ಥ ತುರ್ತು ಚಿಕಿತ್ಸೆ ಘಟಕ ತೆರೆಯಲಾಗಿದೆ ಎಂದರು.

ಅಪಘಾತಗಳಾದಾಗ ಮನುಷ್ಯನಿಗೆ ಚಿಕಿತ್ಸೆ ಅತಿ ಮುಖ್ಯವಾಗಿದ್ದು ಇಂತಹ ಸಂದರ್ಭದಲ್ಲಿ ತುರ್ತು ಚಿಕಿತ್ಸೆ ಕೇಂದ್ರ ಅವಶ್ಯಕತೆ ಇರುತ್ತದೆ. ಈ ನಿಟ್ಟಿನಲ್ಲಿ ರೈಲ್ವೆ ಪ್ರಯಾಣಿಕರಿಗೆ ಉಪಯೋಗವಾಗುವ ನಿಟ್ಟಿನಲ್ಲಿ ಚಿಕಿತ್ಸಾ ಕೇಂದ್ರದಲ್ಲಿ ಎಮರ್ಜೆನ್ಸಿ ಡಾಕ್ಟರ್ ಜೊತೆಗೆ ಶುಶ್ರೂಷಕಿಯರು ಔಷಧಿಗಳು ಸೇರಿದಂತೆ ಒಂದು ಆಂಬುಲೆನ್ಸ್ ಕೂಡ ಲಭ್ಯವಿರಲಿದೆ ಎಂದು ಅವರು ಹೇಳಿದರು.ಜನರ ಅಗತ್ಯತೆಗಳಿಗೆ ಜವಾಬ್ದಾರಿಯುತ ಮತ್ತು ಸ್ಪಂದಿಸುವ ಸಮಾನ, ಕೈಗೆಟುಕುವ ಮತ್ತು ಗುಣಮಟ್ಟದ ಆರೋಗ್ಯ ಸೇವೆಗೆ ಮುಂದಾಗುವುದು ಇಂದಿನ ಅಗತ್ಯವಾಗಿದೆ ಎಂದು ಸಾಹೇ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಸವ್ಯಸಾಚಿ ಡಾ. ಜಿ.ಪರಮೇಶ್ವರ ಅಭಿಪ್ರಾಯಪಟ್ಟರು.

ಸಾರ್ವಜನಿಕ ಪ್ರದೇಶಗಳಲ್ಲಿ ಮೂಲಭೂತ ಸೌಲಭ್ಯಗಳು ಜನರಿಗೆ ತಲುಪಬೇಕು. ಅದೇ ರೀತಿ ಸಾವಿರಾರು ಜನ ದಿನನಿತ್ಯ ಪ್ರಯಾಣಿಸುವ ರೈಲ್ವೆ ನಿಲ್ದಾಣದಲ್ಲಿ ಪ್ರಾಥಮಿಕ ಮಟ್ಟದ ಸೇವಾ ಕೇಂದ್ರ ಇರಬೇಕೆಂಬ ಆಶಯದಿಂದ ರೈಲ್ವೆ ಇಲಾಖೆ ಸಹಕಾರದಿಂದ ಸಿದ್ದಾರ್ಥ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ವತಿಯಿಂದ ಈ ಘಟಕ ತೆರೆಯಲಾಗಿದೆ ಎಂದು ಅವರು ನುಡಿದರು.

ಸಿಎಂ ಆಗುವ ಅರ್ಹತೆ ಪರಮೇಶ್ವರ್‌ಗೆ ಇದೆ: ಸಚಿವ ಕೆ.ಎನ್‌.ರಾಜಣ್ಣ

ತುರ್ತು ಚಿಕಿತ್ಸಾ ಕೊಠಡಿ ಲೋಕಾರ್ಪಣೆ ವೇಳೆ ನೈಋತ್ಯ ರೈಲ್ವೆಯ ಬೆಂಗಳೂರು ವಿಭಾಗದ ವ್ಯವಸ್ಥಾಪಕರಾದ ಯೋಗೇಶ್ ಮೋಹನ್, ಶ್ರೀ ಸಿದ್ದಾರ್ಥ ಶಿಕ್ಷಣ ಸಂಸ್ಥೆಯ ಟ್ರಸ್ಟಿ ಶ್ರೀಮತಿ ಕನ್ನಿಕಾ ಪರಮೇಶ್ವರ, ಸಾಹೇ ವಿ.ವಿ. ಉಪಕುಲಪತಿಗಳಾದ ಡಾ.ಬಿ.ಕೆ. ಲಿಂಗೇಗೌಡ, ರಿಜಿಸ್ಟರ್ ಎಂ ಜೆಡ್ ಕುರಿಯನ್, ಕುಲಾಧಿಪತಿಗಳ ಸಲಹೆಗಾರರಾದ ಡಾ. ವಿವೇಕ್ ವೀರಯ್ಯ, ಸಿದ್ದಾರ್ಥ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಡಾ. ಶಾಣಿಕೊಪ್ಪ, ಡಾ.ಪ್ರವೀಣ್ ಕುಡುವಾ, ಉಪಪ್ರಾಂಶುಪಾಲ ಡಾ. ಪ್ರಭಾಕರ್‌ ಸೇರಿದಂತೆ ಜಿಲ್ಲಾ ಪಂಚಾಯಿತಿ ಸಿಇಒ ಜಿ ಪ್ರಭು, ಎಸ್ ಪಿ ಅಶೋಕ್ ವೆಂಕಟ್, ಮಹಾನಗರ ಪಾಲಿಕೆ ಆಯುಕ್ತರಾದ ಅಶ್ವಿಜಾ ಸೇರಿದಂತೆ ರೈಲ್ವೆ ನಿಲ್ದಾಣದ ಅಧಿಕಾರಿಗಳು, ಶ್ರೀ ಸಿದ್ಧಾರ್ಥ ವೈದ್ಯಕೀಯ ಮಹಾ ವಿದ್ಯಾಲಯದ ಕಾಲೇಜಿನ ಸಿಬ್ಬಂದಿ ಉಪಸ್ಥಿತರಿದ್ದರು.

Follow Us:
Download App:
  • android
  • ios