ಉಡುಪಿ(ಏ.17): ಕೊರೋನಾದಿಂದ ದೇಶದಲ್ಲಿ ಆಹಾರದ ಸಮಸ್ಯೆಯಾಗುವ ಸಾಧ್ಯತೆ ಇರುವುದರಿಂದ, ಜನರು ವಾರದಲ್ಲಿ ಕನಿಷ್ಠ 3 ಹೊತ್ತು ಉಪವಾಸ ಮಾಡುವ ಮೂಲಕ ಆಹಾರವನ್ನು ಉಳಿಸುವ ಸಂಕಲ್ಪ ಮಾಡುವಂತೆ ಉಡುಪಿ ಕೃಷ್ಣಮಠದ ಪರ್ಯಾಯ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ಕರೆ ನೀಡಿದ್ದಾರೆ.

ಕೊರೋನಾದಿಂದ ಭಾರತದ ಬಹಳ ತೊಂದರೆಯಲ್ಲಿದೆ. ಮುಂದೆ ಆಹಾರದ ಕೊರತೆಯೂ ಉಂಟಾಗುವ ಸಾಧ್ಯತೆ ಇದೆ. ದೇಶದ ಆಹಾರ ಸರಬರಾಜಿನ ಮೇಲೆ ಒತ್ತಡ ಕಡಿಮೆ ಮಾಡಬೇಕಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ವಾರದಲ್ಲಿ ಕನಿಷ್ಠ 3 ಹೊತ್ತಿನ ಊಟವನ್ನು ತ್ಯಾಗ ಮಾಡಬಹುದಾಗಿದೆ. ಆರೋಗ್ಯವಂತರು ಇಡೀ ದಿನ ಉಪವಾಸವನ್ನು ಆಚರಿಸಬಹುದು. ಇದರಿಂದ ಉಳಿದ ಆಹಾರವನ್ನು ಅಕ್ಕಪಕ್ಕದಲ್ಲಿ ಅಗತ್ಯ ಇರುವವರಿಗೆ ನೀಡಬಹುದು ಎಂದು ಶ್ರೀಗಳು ಅಭಿಪ್ರಾಯಪಟ್ಟಿದ್ದಾರೆ. 

ಉಡುಪಿ ಲಾಕ್‌ಡೌನ್ ಕ್ರಮಗಳಿಗೆ ಕೇಂದ್ರದಿಂದಲೂ ಶಹಭಾಷ್..!

ಒಳ್ಳೆಯ ಕಾರಣಕ್ಕಾಗಿ ಮಾಡುವ ಉಪವಾಸ ಮತ್ತು ಇಲ್ಲದವರಿಗೆ ಆಹಾರ ನೀಡುವುದರಿಂದ ಕೃಷ್ಣನಿಗೆ ತೃಪ್ತಿಯಾಗುತ್ತದೆ ಮತ್ತು ಶ್ರೇಯಸ್ಸಾಗುತ್ತದೆ ಎಂದು ಶ್ರೀಗಳು ತಮ್ಮ ವಿಡಿಯೋ ಪ್ರಕಟಣೆಯಲ್ಲಿ ಹೇಳಿದ್ದಾರೆ.