ಚಿಕ್ಕಮಗಳೂರು: ನ.11ರಂದು ಹರಿಹರಪುರ ಮಠದಲ್ಲಿ ಸಮಾನ ಸಂಸ್ಕಾರ ಸಮಾವೇಶ

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಹರಿಹರಪುರ ಮಠದ ಆವರಣದಲ್ಲಿ ಸಮಾನ ಸಂಸ್ಕಾರ ಸಮಾವೇಶ ಆಯೋಜನೆ 

Equal Samskara Convention Will Be Held on Hariharapura Matha in Chikkamagaluru grg

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು(ನ.09): ಸನಾತನ ಹಿಂದೂ ಸಮಾಜ ಪರಿಷತ್ ವತಿಯಿಂದ ಸಮಾನ ಸಂಸ್ಕಾರ ಸಮಾವೇಶ ಎಂಬ ಬೃಹತ್ ಕಾರ್ಯಕ್ರಮವು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಹರಿಹರಪುರ ಮಠದ ಆವರಣದಲ್ಲಿ ನವೆಂಬರ್ 11ರಂದು ಆಯೋಜನೆಗೊಂಡಿದೆ. 

ಈ ಹಿಂದೆ ಸಮಾನ ಸಂಸ್ಕಾರ ಸಮಾವೇಶವನ್ನು ಕೊಪ್ಪ ತಾಲೂಕಿನಲ್ಲಿ ಅತ್ಯಂತ ಯಶಸ್ವಿಯಾಗಿ ನಡೆಸಿದ್ದ ಸನಾತನ ಹಿಂದೂ ಸಮಾಜ ಪರಿಷತ್ ಅದನ್ನು ಅತ್ಯಂತ ಯಶಸ್ವಿಯಾಗಿ ಈ ಭಾಗದಲ್ಲಿ ತಲುಪಿಸಿತ್ತು. ವೈವಿಧ್ಯತೆಯಲ್ಲಿ ಸಮನ್ವಯ ದೃಷ್ಟಿಕೋನ ಭಾರತೀಯ ಮೂಲ ಆಧ್ಯಾತ್ಮಿಕ ಸಾಹಿತ್ಯಕ್ಕೆ, ಪ್ರಾದೇಶಿಕ ಆಧ್ಯಾತ್ಮಿಕ ಸಾಹಿತ್ಯಕ್ಕೆ ಸಮಾನ ಮಹತ್ವವನ್ನು ನೀಡುತ್ತಿದೆ. ಏಕೋದ್ದೇಶವನ್ನು ಸಾಧಿಸಲು ಸಮಾನ ಸಂಸ್ಕಾರ ಅಭಿಯಾನವನ್ನು ಕೊಪ್ಪ ತಾಲೂಕಿನಲ್ಲಿ ಹಮ್ಮಿಕೊಂಡು, ಅದನ್ನು ಮುಗಿಸಿರುವ ಸಂಸ್ಥೆಯು, ಈ ಅಭಿಯಾನದ ಅಂಗವಾಗಿ ಕೊಪ್ಪ ತಾಲೂಕಿನ ಪ್ರತಿಯೊಂದು ಹಿಂದುಗಳ ಮನೆಗೆ ಖುದ್ದಾಗಿ ಭೇಟಿ ನೀಡಿ, ಅವರಿಗೆ ಐದು ಸಮಾನ ಸಂಸ್ಕಾರಗಳ ಬಗ್ಗೆ ಸರಿಯಾದ ಮಾಹಿತಿಯನ್ನು ನೀಡಿ, ಮೌಲ್ಯಯುತವಾದ ಉತ್ತಮ ಸಮಾಜದ ನಿರ್ಮಾಣಕ್ಕಾಗಿ, ಕೊಪ್ಪ ತಾಲೂಕಿನ ಪ್ರತಿಯೊಂದು ಶಾಲಾ ಕಾಲೇಜು ಮಕ್ಕಳಿಗೆ, ಪ್ರಬಂಧ ಸ್ಪರ್ಧೆಯನ್ನು ಮತ್ತು ಭಗವದ್ಗೀತಾ ಕಂಠಪಾಠ ಸ್ಪರ್ಧೆಯನ್ನು ನಡೆಸಿದೆ. ಹಾಗೆಯೇ ಕೊಪ್ಪ ತಾಲೂಕಿನ ಎಲ್ಲಾ ಮಾತೆಯರಿಗೆ, ಪ್ರತಿಯೊಂದು ಶಾಲಾ - ಕಾಲೇಜುಗಳ ಮಕ್ಕಳಿಗೆ ಹಾಗೂ ಎಲ್ಲರಿಗೂ ಸಹ, ಆಯ್ದ ವಚನಗಳು ಮತ್ತು ಭಗವದ್ಗೀತೆಯ ಭಕ್ತಿಯೋಗದ ಶ್ಲೋಕಗಳನ್ನು ಪಾರಾಯಣ ಮಾಡಲು ಕಲಿಸಿಕೊಡಲಾಗಿದೆ.

ಟಿಇಟಿ ಹಾಲ್‌ ಟಿಕೆಟಲ್ಲಿ ಸನ್ನಿ ಲಿಯೋನ್‍ ಅಶ್ಲೀಲ ಫೋಟೋ: ದೂರು ದಾಖಲು

ನವೆಂಬರ್ 11ರಂದು ಸಂಸ್ಕಾರ ಸಮಾವೇಶ 

ಇದೇ ತಿಂಗಳು ನ. 11ರಂದು ಶ್ರೀ ಮಠ ಹರಿಹರಪುರದಲ್ಲಿ ಸಮಾನ ಸಂಸ್ಕಾರ ಸಮಾವೇಶ ನಡೆಯುಲಿದ್ದು ಸಮಾನ ಸಂಸ್ಕಾರ ಸಮಾವೇಶದಲ್ಲಿ ಪರಮಪೂಜ್ಯ ಜಗದ್ಗುರು ಶ್ರೀ.ಶ್ರೀ.ಶಿವಾನುಭವ ಚರಮೂರ್ತಿ, ಶಿವರುದ್ರ ಮಹಾಸ್ವಾಮಿಗಳು, ಬೇಲಿಮಠ ಮಹಾಸಂಸ್ಥಾನ ಬೆಂಗಳೂರು, ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿಗಳವರು. ಪರಮಪೂಜ್ಯ ಶ್ರೀಗಳಾದ ಶಂಕರಾಚಾರ್ಯ ಸ್ವಯಂ ಪ್ರಕಾಶ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮಿಗಳವರು ಸಾನಿಧ್ಯ ವಹಿಸಲಿದ್ದಾರೆ. ಸಂಸ್ಕಾರ ಹಬ್ಬದ ಉದ್ಘಾಟನೆಯನ್ನು ಪೂಜ್ಯ ರಾಜರ್ಷಿ ಡಾ.ಡಿ ವೀರೇಂದ್ರ ಹೆಗ್ಗಡೆಯವರು ವಹಿಸಲಿದ್ದಾರೆ.
 

Latest Videos
Follow Us:
Download App:
  • android
  • ios