ಅಪಾಯಕಾರಿ ಪಟಾಕಿ ನಿಷೇಧಕ್ಕೆ ಪರಿಸರವಾದಿಗಳ ಸ್ವಾಗತ

ಅಪಾಯಕಾರಿ ಪಟಾಕಿಯಿಂದಾಗುವ ಅನಾಹುತಗಳನ್ನು ತಪ್ಪಿಸಲು ರಾಜ್ಯ ಸರ್ಕಾರ ಅಪಾಯಕಾರಿ ಪಟಾಕಿಗಳನ್ನು ನಿಷೇದಿಸಿರುವ ಕ್ರಮ ಸ್ವಾಗತಾರ್ಹ ಎಂದು ಪರಿಸರವಾದಿ ಟಿ.ಸಿ. ಗೋವಿಂದರಾಜು ಪತ್ರಿಕಾಪ್ರಕಟಣೆಯಲ್ಲಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

Environmentalists welcome hazardous fireworks ban snr

 ತಿಪಟೂರು : ಅಪಾಯಕಾರಿ ಪಟಾಕಿಯಿಂದಾಗುವ ಅನಾಹುತಗಳನ್ನು ತಪ್ಪಿಸಲು ರಾಜ್ಯ ಸರ್ಕಾರ ಅಪಾಯಕಾರಿ ಪಟಾಕಿಗಳನ್ನು ನಿಷೇದಿಸಿರುವ ಕ್ರಮ ಸ್ವಾಗತಾರ್ಹ ಎಂದು ಪರಿಸರವಾದಿ ಟಿ.ಸಿ. ಗೋವಿಂದರಾಜು ಪತ್ರಿಕಾಪ್ರಕಟಣೆಯಲ್ಲಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಹಲವಾರು ದಶಕಗಳಿಂದ ಪಟಾಕಿ ತಯಾರಿಕೆ ವೇಳೆ ಮತ್ತು ಸಂಗ್ರಹ ಸ್ಥಳಗಳಲ್ಲಿ ತಯಾರಕರ ಅಸಡ್ಡೆ ಮತ್ತು ಇನ್ನಿತರೆ ಕಾರಣಗಳಿಂದ ರಾಜ್ಯ ಮತ್ತು ಹೊರ ರಾಜ್ಯಗಳಲ್ಲಿ ಸಂಭವಿಸಿದ ಸ್ಪೋಟಕ ಪ್ರಕರಣಗಳಿಂದ ಅಗ್ನಿಗೆ ಸಾವಿರಾರು ಜನ ಬಲಿಯಾಗಿದ್ದು ಅದರಲ್ಲಿ ಹಲವಾರು ಬಾಲ ಕಾರ್ಮಿಕರು ಸೇರಿದ್ದಾರೆ. ಅಲ್ಲದೆ ಹೆಚ್ಚು ಶಬ್ದ ಮಾಡುವ ಗಡಂಬಾಜ್ ಹಚ್ಚಿದ ನಂತರ ಅದರಿಂದ ಹೊರಹೊಮ್ಮುವ ಅಪಾಯಕಾರಿ ರಾಸಾಯನಿಕ ಗಾಳಿಯಲ್ಲಿ ಬೆರೆತು ಉಸಿರಾಟದ ತೊಂದರೆ, ಅಲರ್ಜಿ, ಶ್ವಾಸಕೋಶದ ಸಮಸ್ಯೆ, ಹೃದಯ ಸಮಸ್ಯೆ ಇರುವವರಿಗೆ ಹೆಚ್ಚು ತೊಂದರೆಯಾಗುತ್ತಿದೆ. ಹಿಂದೆಲ್ಲಾ ಗಣೇಶ ಮತ್ತು ದೀಪಾವಳಿಗೆ ಮಾತ್ರ ಪಟಾಕಿಗಳನ್ನು ಬಳಸುತ್ತಿದ್ದರು. ಆದರೆ ಈಗ ವರ್ಷವಿಡೀ ಪಟಾಕಿಗಳನ್ನು ಬಳಸಲಾಗುತ್ತಿದ್ದು ಚುನಾವಣೆ, ವಿಜಯೋತ್ಸವ, ಸಭೆ, ಮೆರವಣಿಗೆ ಹೀಗೆ ಹಲವು ಜಯಂತಿಗಳಿಗೆ ಪಟಾಕಿ ಬಳಸುತ್ತಿದ್ದು ಸರ್ಕಾರ ಪಟಾಕಿಯನ್ನು ಬಳಸುವುದರ ಕುರಿತು ಸ್ಪಷ್ಟ ನೀತಿ ಜಾರಿಗೆ ತರಬೇಕು. ಇದೇ ವೇಳೆ ಮಕ್ಕಳು ಆಡುವ ಸುರು ಸುರು ಬತ್ತಿ, ಭೂ ಚಕ್ರ ಹೂಕುಂಡ, ಮತಾಪು ಮುಂತಾದ ಅಪಾಯ ರಹಿತ ಅಲ್ಲದ ಪಟಾಕಿಗಳನ್ನು ಮುಂದುವರೆಸುವಂತೆ ಸರ್ಕಾರವನ್ನು ಗೋವಿಂದರಾಜು ಒತ್ತಾಯಿಸಿದ್ದಾರೆ.

ಅನಧಿಕೃತ ಪಟಾಕಿ ವಶ

 ಕೆ.ಆರ್. ನಗರ :  ಅನಧಿಕೃತವಾಗಿ ಪಟಾಕಿ ದಾಸ್ತಾನು ಮಾಡಲಾಗಿದ್ದ ಮನೆಯೊಂದರ ಮೇಲೆ ದಾಳಿ ಮಾಡಿದ ಪಟ್ಟಣದ ಪೊಲೀಸರು ಲಕ್ಷಾಂತರ ರು. ಬೆಲೆ ಬಾಳುವ ಪಟಾಕಿ ವಶಕ್ಕೆ ಪಡೆದಿದ್ದಾರೆ.

ತಮಗೆ ದೊರೆತ ಖಚಿತ ಮಾಹಿತಿ ಆಧರಿಸಿ ಜನ ವಸತಿ ಪ್ರದೇಶದಲ್ಲಿರುವ ಲಕ್ಷಾಂತರ ರೂಪಾಯಿ ಬೆಲೆಬಾಳುವ 20ಕ್ಕೂ ಹೆಚ್ಚು ಪಟಾಕಿ ಬಾಕ್ಸ್ ಗಳನ್ನು ವಶಕ್ಕೆ ಪಡೆದು ತಾಲೂಕು ಆಡಳಿತದ ವತಿಯಿಂದ ತೆರೆಯಲಾಗಿರುವ ಗೋಡೌನ್ ಗೆ ಸಾಗಿಸಿದ್ದಾರೆ.

ಅನಧಿಕೃತವಾಗಿ ಪಟಾಕಿ ದಾಸ್ತಾನು ಮಾಡಿದ್ದ ಲೋಕೇಶ್ ಮತ್ತು ರವಿನಂದನ್ ಎಂಬುವರ ವಿರುದ್ದ ದೂರು ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ಧಾರೆ.

ಸಿಪಿಐ ಪಿ.ಪಿ. ಸಂತೋಷ್, ಎಸ್ಐ ಧನರಾಜ್ ಮತ್ತು ಸಿಬ್ಬಂದಿ ಹಾಗೂ ಅಗ್ನಿಶಾಮಕ ಠಾಣಾಧಿಕಾರಿ, ಕಂದಾಯ ಇಲಾಖೆ ಅಧಿಕಾರಿಗಳು, ಪುರಸಭೆ ಅಧಿಕಾರಿಗಳು ಇದ್ದರು.

ಪಟಾಕಿ ಬ್ಯಾನ್

ಬೆಂಗಳೂರು (ಅ.10): ರಾಜ್ಯದಲ್ಲಿ ಇನ್ನುಮುಂದೆ ಮದುವೆ, ಗಣೇಶ ಉತ್ಸವ ಹಾಗೂ ರಾಜಕೀಯ ಸಂಬಂಧಿತ ಕಾರ್ಯಕ್ರಮಗಳಲ್ಲಿ ಪಟಾಕಿ ಸಿಡಿಸುವುದನ್ನು ನಿಷೇಧಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಅತ್ತಿಬೆಲೆ ಪಟಾಕಿ ಮಳಿಗೆ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳೊಂದಿಗೆ ಸಭೆ ಮಾಡಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸುಪ್ರೀಂಕೋರ್ಟ್ ಆದೇಶದ ಪ್ರಕಾರ, ಹಸಿರು ಪಟಾಕಿ ನಿಯಾಮವಳಿಗಳಿಗೆ ವಿರುದ್ಧವಾಗಿ ಅಂಗಡಿಗಳು ಇದ್ದರೆ ಕ್ರಮ ಕೈಗೊಳ್ಳಬೇಕು. ಇನ್ನುಮುಂದೆ ಅನಧಿಕೃತ ಮಳಿಗೆಗಳು ಕಂಡುಬಂದಲ್ಲಿ ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳಲು ಸೂಚಿಸಿದ್ದೇವೆ. ಇನ್ಮುಂದೆ ಪಟಾಕಿ ಅಂಗಡಿಗಳಿಗೆ ಲೆಸೆನ್ಸ್ ಗಳಿಗೆ ಸುಪ್ರೀಂಕೋರ್ಟ್ ಆದೇಶದ ಪ್ರಕಾರವೇ ಲೆಸೆನ್ಸ್ ಕಡ್ಡಾಯ ನೀಡುವಂತೆ ಸೂಚಿಸಲಾಗಿದೆ ಎಂದರು.

Latest Videos
Follow Us:
Download App:
  • android
  • ios