ಅಭಿವೃದ್ಧಿ ಹೆಸರಲ್ಲಿ ಪರಿಸರ ನಾಶ
ಇಂದಿನ ದಿನಗಳಲ್ಲಿ ಸರ್ಕಾರ ಅಭಿವೃದ್ಧಿಯ ಹೆಸರಿನಲ್ಲಿ ಪರಿಸರ ನಾಶ ಮಾಡುತ್ತಿದೆ ಎಂದು ಚಲನಚಿತ್ರ ನಟ ಹಾಗೂ ಸಾಮಾಜಿಕ ಕಾರ್ಯಕರ್ತ ಚೇತನ್ ಹೇಳಿದರು.
ಕುಣಿಗಲ್: ಇಂದಿನ ದಿನಗಳಲ್ಲಿ ಸರ್ಕಾರ ಅಭಿವೃದ್ಧಿಯ ಹೆಸರಿನಲ್ಲಿ ಪರಿಸರ ನಾಶ ಮಾಡುತ್ತಿದೆ ಎಂದು ಚಲನಚಿತ್ರ ನಟ ಹಾಗೂ ಸಾಮಾಜಿಕ ಕಾರ್ಯಕರ್ತ ಚೇತನ್ ಹೇಳಿದರು.
ತಾಲೂಕಿನ ಕಸಬಾ ಹೋಬಳಿ ಸಂತೆಮಾವತ್ತೂರು ಗೊಲ್ಲ ರ ಹಟ್ಟಿಯ ಜುಂಜಪ್ಪನ ಕಾವಲಿನಲ್ಲಿ ಕಾಡುಗೊಲ್ಲ ಜುಂಜಪ್ಪನ ಕಾವಲು ಸಂರಕ್ಷಣಾ ಸಮಿತಿ ಘಟಕ ಕುಣಿಗಲ್ ಮತ್ತು ಅರಣ್ಯ ಇಲಾಖೆಯಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಗಿಡ ನೆಟ್ಟು ಮಾತನಾಡಿದರು.
ಕಾಡುಗೊಲ್ಲ ಜುಂಜಪ್ಪ ಒಬ್ಬ ಪಶುಪಾಲಕನಾಗಿದ್ದು ಅವರ ಪರಂಪರೆ ಕರ್ನಾಟಕದ ಬಯಲು ಸೀಮೆಗಳಾದ ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಹಬ್ಬಿದೆ. ಜುಂಜಪ್ಪನ ಕುರುಹು ಇರುವುದೇ ಇಂತಹ ಕಾವಲುಗಳಲ್ಲಿ. ಆದ್ದರಿಂದ ನಾವು ಅತ್ಯಂತ ಜೋಪಾನವಾಗಿ ಇದನ್ನು ಉಳಿಸಿಕೊಳ್ಳಬೇಕೆಂದು ಕರೆ ನೀಡಿದರು.
ಶಿವರಾಜ್‌ಕುಮಾರ್ ಅಭಿನಯದ ವೇದ ಚಲನಚಿತ್ರ ಗಾಯಕ ಮೋಹನ್ ಕುಮಾರ್ ಕಾಡುಗೊಲ್ಲ ಜುಂಜಪ್ಪನ ಕಗ್ಗದ ಪದಗಳನ್ನು ಹಾಡಿದರು.
ಕಾರು ಖರೀದಿ ಬ್ಯಾನ್
ಸುಂದರ ನಗರಗಳು ಪರಿಸರ ಮಾಲಿನ್ಯದಿಂದ ತಮ್ಮ ಸೌಂದರ್ಯ ಕಳೆದುಕೊಳ್ಳುತ್ತಿವೆ. ಪ್ರಕೃತಿ ಸೌಂದರ್ಯ ವಾಯು ಮಾಲಿನ್ಯ, ಜಲ ಮಾಲಿನ್ಯ, ಶಬ್ಧ ಮಾಲಿನ್ಯ ಸೇರಿದಂತೆ ನಾನಾ ಮಾಲಿನ್ಯದಿಂದ ನಾಶವಾಗ್ತಿದೆ. ವಾಹನಗಳು ಅನೇಕ ಮಾಲಿನ್ಯವುಂಟು ಮಾಡ್ತಿವೆ. ಸಾರ್ವಜನಿಕ ಸಾರಿಗೆಗಿಂತ ಸ್ವಂತ ವಾಹನಗಳಿಂದ ಅನುಕೂಲ ಹೆಚ್ಚು. ಇದೇ ಕಾರಣಕ್ಕೆ ಭಾರತ ಸೇರಿದಂತೆ ನಾನಾ ದೇಶಗಳಲ್ಲಿ ಸ್ವಂತ ವಾಹನ ಬಳಕೆದಾರರ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ. ಕೆಲವರು ಒಂದೋ ಎರಡೋ ಅಲ್ಲ ನಾಲ್ಕೈದು ವಾಹನವನ್ನು ಮನೆಯಲ್ಲಿಟ್ಟುಕೊಂಡಿರುತ್ತಾರೆ. ಪತಿ , ಪತ್ನಿ, ಮಕ್ಕಳು ಎಲ್ಲರಿಗೂ ಒಂದೊಂದು ಕಾರ್ ಇರುತ್ತೆ. ನಮ್ಮ ಜೀವನವನ್ನು ಈ ವಾಹನಗಳ ಮತ್ತಷ್ಟು ಸರಳಗೊಳಿಸಿರಬಹುದು. ಆದ್ರೆ ಪರಿಸರ ನಾಶಕ್ಕೆ ಇವು ಕಾರಣವಾಗ್ತಿವೆ. ಇದ್ರ ಅರಿವೆ ಇದ್ರೂ ಜನರು ಪೆಟ್ರೋಲ್ – ಡಿಸೇಲ್ ನಿಂದ ಓಡುವ ವಾಹನಕ್ಕೆ ಹೆಚ್ಚು ಆದ್ಯತೆ ನೀಡ್ತಾರೆ.
ಮನೆ ಮುಂದೆ ಜಾಗವಿಲ್ಲದಂತೆ ಒಂದರ ಹಿಂದ ಒಂದು ನಿಲ್ಲುವ ಈ ವಾಹನ ಪ್ರಕೃತಿ ಮೇಲೆ ದುಷ್ಪರಿಣಾಮ ಬೀರುತ್ತದೆ. ಮಾಲಿನ್ಯ (Pollution) ದಿಂದ ನಮ್ಮನ್ನು ಹಾಗೂ ಪ್ರಕೃತಿ (nature) ಯನ್ನು ರಕ್ಷಿಸಲು ಸರ್ಕಾರ ನಾನಾ ಪ್ರಯತ್ನಗಳನ್ನು ಮಾಡ್ತಿದೆ. ಸಾರ್ವಜನಿಕ ವಾಹನವನ್ನು ಹೆಚ್ಚಾಗಿ ಬಳಸುವಂತೆ, ಪ್ಲಾಸ್ಟಿಕ್ ನಿಂದ ದೂರ ಇರುವಂತೆ, ಪ್ರವಾಸಿ ಸ್ಥಳಗಳಲ್ಲಿ ಸ್ವಚ್ಛತೆ ಕಾಯ್ದುಕೊಳ್ಳುವಂತೆ ಬೋರ್ಡ್ ಗಳನ್ನು ಹಾಕಿದೆ. ಆದ್ರೆ ಜನರು ಮಾತ್ರ ಇವೆಲ್ಲವನ್ನು ನಿರ್ಲಕ್ಷ್ಯಿಸಿ ತಮ್ಮ ಅಲ್ಪ ಸಂತೋಷಕ್ಕೆ ಆದ್ಯತೆ ನೀಡ್ತಿದ್ದಾರೆ. ಆದ್ರೆ ಸ್ವಿಜರ್ಲ್ಯಾಂಡ್ (Switzerland) ಸರ್ಕಾರ, ಪರಿಸರ ರಕ್ಷಣೆಗೆ ಭಿನ್ನ ನಿರ್ಧಾರ ಕೈಗೊಂಡಿದೆ. ಆ ಕಾನೂನು ಕೇಳಿದ್ರೆ ನೀವೂ ದಂಗಾಗ್ತೀರಾ.
Maha Vajiralongkorn: 38 ವಿಮಾನ, 300 ಕಾರ್, ವಿಶ್ವದ ದುಬಾರಿ ವಜ್ರ ಹೊಂದಿರುವಾತ ಯಾರು ಗೊತ್ತಾ?
ಸ್ವಿಸ್ ಸರ್ಕಾರ ಜಾರಿಗೆ ತಂದ ಕಾನೂನು ಯಾವುದು? : ಸ್ವಿಸ್ ಸರ್ಕಾರ, ಸ್ವಂತ ವಾಹನ ಖರೀದಿಗೆ ನಿಷೇಧ ಹೇರಿದೆ. ಸ್ವಿಸ್ ನಗರದ ಜರ್ಮೆಟ್ (Zermatt) ಈಗ ಇದೇ ವಿಷ್ಯಕ್ಕೆ ಚರ್ಚೆಯಲ್ಲಿದೆ. ಇಲ್ಲಿನ ಸರ್ಕಾರ, ಪರಿಸರ ರಕ್ಷಣೆಗಾಗಿ ಕಾರ್ ಬ್ಯಾನ್ ಮಾಡಿದೆ. ಇಲ್ಲಿನ ಜನರು ವಾಹನ ಖರೀದಿ ಮಾಡಿ ತಮ್ಮ ಮನೆ ಮುಂದೆ ನಿಲ್ಲಿಸುವಂತಿಲ್ಲ. ನಗರದಿಂದ ಬೇರೆ ಊರಿಗೆ ಹೋಗಿ, ಬರುವ ಜನರು ಸಾರ್ವಜನಿಕ ವಾಹನವನ್ನು ಮಾತ್ರ ಬಳಕೆ ಮಾಡ್ಬೇಕು. ನಗರದಲ್ಲಿ ಸಾರ್ವಜನಿಕ ವಾಹನ ಬಿಟ್ಟು ಮತ್ತ್ಯಾವುದೇ ವಾಹನ ಸಂಚಾರ ಮಾಡುವಂತಿಲ್ಲ. ಇಷ್ಟೇ ಅಲ್ಲದೆ ಸರ್ಕಾರ, ಪೆಟ್ರೋಲ್ – ಡಿಸೇಲ್ ವಾಹನಗಳ ಮೇಲೂ ನಿಷೇಧ ಹೇರಿದೆ.
ವಾಹನದ ಅಗತ್ಯವಿದೆ ಎನ್ನುವವರು ಸರ್ಕಾರಕ್ಕೆ ವಿಶೇಷ ಮನವಿ ಸಲ್ಲಿಸಬೇಕು. ಸರ್ಕಾರ ಅದಕ್ಕೆ ಒಪ್ಪಿಗೆ ನೀಡಿದ ನಂತ್ರ ಕಾರನ್ನು ಖರೀದಿ ಮಾಡ್ಬಹುದು. ಆದ್ರೆ ಪೆಟ್ರೋಲ್ – ಡಿಸೇಲ್ ಕಾರ್ ಖರೀದಿಗೆ ಅವಕಾಶವಿಲ್ಲ. ಸರ್ಕಾರವೇ ಮಿನಿ ಕಾರನ್ನು ತಯಾರಿಸಿ ಜನರಿಗೆ ನೀಡುವ ವ್ಯವಸ್ಥೆ ಮಾಡುತ್ತದೆ. ಸರ್ಕಾರ ನೀಡುವ ಕಾರನ್ನು ಮಾತ್ರ ಸಾರ್ವಜನಿಕರು ಖರೀದಿ ಮಾಡ್ಬೇಕಾಗುತ್ತದೆ. ಬಿಲ್ಡರ್ ಹಾಗೂ ಬಾಡಿಗೆ ಸವಾರರಿಗೆ ಈ ನಿಮಯದಲ್ಲಿ ರಿಯಾಯಿತಿ ನೀಡಿದೆ.
ಚಿಂತಕ ಉಜ್ಜಜ್ಜಿ ರಾಜಣ್ಣ ಬಯಲು ಸೀಮೆಯ ಸಸ್ಯ ಸಂಪತ್ತು ಮತ್ತು ಜೀವ ವೈವಿಧ್ಯತೆ ಬಗ್ಗೆ ಮಾತನಾಡಿದರು.
ಕಾಡುಗೊಲ್ಲ ಜುಂಜಪ್ಪನ ಕಾವಲು ಸಂರಕ್ಷಣಾ ಸಮಿತಿಯ ಮುಖಂಡ ನಾಗಣ್ಣ ಜಿ.ಕೆ. ಕಾರ್ಯಕ್ರಮ ನಿರ್ವಹಿಸಿದರು. ಈ ಸಂದರ್ಭದಲ್ಲಿ ವಕೀಲರಾದ ಸಿಂಗಯ್ಯ, ಉಪನ್ಯಾಸಕ ಶಿವಲಿಂಗಯ್ಯ, ಹನುಮಂತಪ್ಪ, ನಾಗಮ್ಮ, ಅರಣ್ಯ ಅಧಿಕಾರಿ ತಾರಕೇಶ್ವರಿ, ಮೋಹನ್, ಸಿಳ್ಳೇಖ್ಯಾತ ಸಮುದಾಯದ ಲಕ್ಷ್ಮೀ ನರಸಿಂಹ, ಸೋಲಿಗ ಸಮುದಾಯದ ಹೊನ್ನಪ್ಪ, ಇರುಳಿಗ ಸಮುದಾಯದ ರತ್ನಗಿರಿ, ಶೋಷಿತ ಸಮುದಾಯಗಳ ವೇದಿಕೆಯ ಶಿವರಾಜು, ಜಯಣ್ಣ, ಚಿಕ್ಕಣ್ಣ ಹಟ್ಟಿಶಿವರಾಜು, ಧನಂಜಯ ವಿ.ಎಸ್., ಕನ್ನಡ ಹೋರಾಟಗಾರ ಜ್ಞಾನ ಮಧು, ಗ್ರಾ.ಪಂ ಅಧ್ಯಕ್ಷೆ ಹೇಮಾಬಾಯಿ, ಗ್ರಾ.ಪಂ ಸದಸ್ಯ ಮಂಜುನಾಥ, ಶಶಿಕುಮಾರ್ ಮುಂತಾದವರು ಉಪಸ್ಥಿತರಿದ್ದರು.