ಬೆಂಗಳೂರು (ಫೆ.02):  ಸಸ್ಯಕಾಶಿ ಲಾಲ್‌ಬಾಗ್‌ ಉದ್ಯಾನವನಕ್ಕೆ ಭೇಟಿ ನೀಡುವವರು ಇಂದಿನಿಂದ ಸಾಮಾನ್ಯ ಪ್ರವೇಶ ದರದ ಜತೆಗೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ)ಯನ್ನು ಪಾವತಿಸಬೇಕಾಗುತ್ತದೆ. ಕೇಂದ್ರ ಸರ್ಕಾರ ಮನರಂಜನೆಗೂ ಜಿಎಸ್‌ಟಿ ಸೇರಿಸಿರುವ ಪರಿಣಾಮ ಪ್ರವೇಶ ದರಕ್ಕೆ ಜಿಎಸ್‌ಟಿ ಸೇರಿಸಿ ಪರಿಷ್ಕೃತ ದರ ಪಟ್ಟಿಸೇರಿಸಲಾಗಿದೆ ಎಂದು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪರಿಷ್ಕೃತ ದರದ ಪ್ರಕಾರ ವ​ಯ​ಸ್ಕ​ರಿಗೆ ಪ್ರವೇಶ ದರವನ್ನು 25ರಿಂದ 30 ರು. ಕ್ಕೆ ಏ​ರಿ​ಕೆ ಮಾ​ಡ​ಲಾ​ಗಿದೆ. ಮ​ಕ್ಕ​ಳಿಗೆ ಈ ಹಿಂದೆ ಉ​ಚಿತ ಪ್ರ​ವೇ​ಶ​ವಿತ್ತು. ಇ​ದೀಗ ಆರು ವ​ರ್ಷ​ದೊ​ಳ​ಗಿನ ಮ​ಕ್ಕ​ಳಿಗೆ ಮಾತ್ರ ಉ​ಚಿತ ಪ್ರ​ವೇಶ ಕ​ಲ್ಪಿ​ಸ​ಲಾ​ಗಿದ್ದು, 6ರಿಂದ 12 ವರ್ಷದೊ​ಳ​ಗಿನ ಮ​ಕ್ಕ​ಳಿಗೆ 10, 12 ವರ್ಷ ಮೇ​ಲ್ಪ​ಟ್ಟಮ​ಕ್ಕ​ಳಿಗೆ 30 ರು. ದ​ರ ನಿ​ಗ​ದಿ​ಯಾ​ಗಿದೆ.

ಲಾಲ್‌ಬಾಗ್‌ ಕುರಿತು ನಿಮಗೆ ತಿಳಿದಿರದ 8 ಸಂಗತಿಗಳು ...

ಪ್ರವೇಶ ದರದ ಜೊತೆಗೆ ಕಾ​ರು​ ಹಾಗೂ ವಾಹನಗಳ ಪ್ರ​ವೇ​ಶ ಶು​ಲ್ಕ ಸಹ 5 ರು. ಹೆಚ್ಚಳ ಮಾಡಲಾಗಿದೆ ಎಂದು ರಾಜ್ಯ ತೋ​ಟ​ಗಾ​ರಿಕೆ ಇ​ಲಾಖೆ ಉ​ಪ​ನಿ​ರ್ದೇ​ಶಕಿ(ಲಾ​ಲ್‌​ಬಾ​ಗ್‌) ಜಿ.ಕು​ಸು​ಮಾ ತಿ​ಳಿ​ಸಿ​ದರು.

ವಾ​ಹ​ನಗಳ ಶುಲ್ಕ ಇಂತಿದೆ :  ದ್ವಿ​ಚಕ್ರ ವಾ​ಹನಗ​ಳಿಗೆ 3 ಗಂಟೆ ಅ​ವಧಿಗೆ ಸಾ​ಮಾನ್ಯ ದಿ​ನ​ಗ​ಳಲ್ಲಿ 30 ರಜಾ ದಿ​ನ​ಗ​ಳಲ್ಲಿ 35 ರು. ನಿ​ಗ​ದಿ​ಪ​ಡಿ​ಸ​ಲಾ​ಗಿದೆ. ಕಾರುಗ​ಳಿಗೆ 3 ಗಂಟೆ ಅ​ವಧಿ​ಗೆ ಸಾ​ಮಾನ್ಯ ದಿ​ನ​ಗ​ಳಲ್ಲಿ 40 ಹಾಗೂ 50 ರು., ಟೆಂಪೊ ಟ್ರಾ​ವೆ​ಲ​ರ್‌ಗೆ ಸಾ​ಮಾನ್ಯ ದಿ​ನ​ಗ​ಳಲ್ಲಿ 70 ಹಾಗೂ ರಜಾ ದಿ​ನ​ಗ​ಳಲ್ಲಿ 80 ರು. ನಿಗದಿ ಮಾಡಲಾಗಿದೆ. ಬಸ್‌ಗ​ಳಿಗೆ 110 ಹಾಗೂ 130 ರು. ನಿ​ಗ​ದಿ​ಪ​ಡಿ​ಸ​ಲಾ​ಗಿದೆ. (ಹಿಂದೆ ಕ್ರ​ಮ​ವಾಗಿ 100 ಮತ್ತು 120 ಇತ್ತು) ಎಲ್ಲಾ ವಾ​ಹ​ನ​ಗ​ಳಿಗೂ ಪ್ರತಿ ಮೂರು ಗಂಟೆ ಅ​ವಧಿಯ ನಂತರ ಶುಲ್ಕ ಏ​ರಿ​ಕೆ​ಯಾ​ಗ​ಲಿ​ದೆ. 5 ನಿಂದ 25 ರು. ​ವ​ರೆಗೆ ಏ​ರಿ​ಕೆ​ ಮಾಡಲಾಗಿದೆ. ಈ ಹಿಂದೆ 2018ರಲ್ಲಿ ಶುಲ್ಕ ಏ​ರಿಕೆ ಮಾ​ಡ​ಲಾ​ಗಿ​ತ್ತು.