ಬೆಂಗಳೂರು :  ವಿದ್ವಾಂಸರು, ವಿಮರ್ಶಕರು ಹಾಗೂ ಓದುಗರಿಂದ ಅತ್ಯಂತ ಚರ್ಚೆ, ತಿರಸ್ಕಾರ ಹಾಗೂ  ಪ್ರಶಂಸೆಗೆ ಒಳಗಾದ ಬ್ರಿಟಿಷ್ ಕವಿ ಮಿಲ್ಟನ್ ನನ್ನು 21 ನೇ ಶತಮಾನದಲ್ಲಿ ಹೇಗೆ ಅರ್ಥ ಮಾಡಿಕೊಳ್ಳಬೇಕು ಎಂಬುದೇ ದೊಡ್ಡ ಪ್ರಶ್ನೆ ಯಾಗಿದೆ ಎಂದು ವಿಮರ್ಶಕ ಪ್ರೊ.ಸಿ.ಎನ್. ರಾಮಚಂದ್ರನ್ ಹೇಳಿದ್ದಾರೆ. 

ನಗರದ ವಾಡಿಯಾ ಸಭಾಂಗಣದಲ್ಲಿ ನಡೆ ದ ಕಾರ್ಯಕ್ರಮದಲ್ಲಿ ಅಂಕಿತ ಪುಸ್ತಕ ಪ್ರಕಾಶನ ಹೊರತಂದಿರುವ ಮಹಾಕವಿ ಜಾನ್ ಮಿಲ್ಟನ್‌ನ ಪ್ರೊ.ಕೆ.ಎಂ.ಸೀತಾರಾ ಮಯ್ಯ ಅವರು ಅನುವಾದಿಸಿರುವ ‘ಪ್ಯಾ ರಡೈಸ್ ಲಾಸ್ಟ್ ಮತ್ತು ಪ್ಯಾರಡೈಸ್  ರಿಗೇ ಯ್ನ್‌ ಡ್’, ಶ್ರೀನಿಧಿ ಡಿ.ಎಸ್. ಅವರ ‘ತೂಗುಮಂಚದಲ್ಲಿ ಕೂತು’ ಹಾಗೂ ವೈ.ಎನ್.ಗುಂಡೂರಾವ್ ರಚಿಸಿರುವ ‘ಮಕ್ಕಳಿಗಾಗಿ ಮತ್ತೊಮ್ಮೆ ಹೇಳಿದ ಕಥಾಸರಿತ್ಸಾಗರದ ಕಥೆಗಳು’ ಕೃತಿಗಳನ್ನು ಬಿಡುಗಡೆಗೊಳಿಸಿ ಅವರು, ಮಿಲ್ಟನ್ ಹಾಗೂ ಆತನ ಕಾವ್ಯ ಕುರಿತು ಮಾತನಾಡಿದರು.

18 ನೇ ಶತಮಾನದಲ್ಲಿ ಅತ್ಯಂತ ಪ್ರಸಿದ್ಧ ಕವಿ, ಇಂಗ್ಲಿಷ್ ಭಾಷೆಗೆ ಮಹತ್ವ ತಂದುಕೊಟ್ಟವ ನು ಎಂದು ಕೆಲ ವಿದ್ವಾಂಸರ ಹೊಗಳಿಕೆಗೆ ಪಾತ್ರನಾದ. ಆದರೆ, ೧೯ನೇ ಶತಮಾನದಲ್ಲಿ ಮಿಲ್ಟನ್ ಕಾವ್ಯ ಕುರಿತಂತೆ ವಿಭಿನ್ನ ದನಿಗಳು ಕೇಳಿಬಂದವು. ಕೀಟ್ಸ್, ಎಲಿಯಟ್ ಸೇರಿ
ದಂತೆ ಅಂದಿನ ಕಾಲದ ಪ್ರಸಿದ್ಧ ವಿಮರ್ಶಕರು, ವಿದ್ವಾಂಸರು 200 ವರ್ಷಗಳ ಕಾಲ ಇಂಗ್ಲಿಷ್ ಕಾವ್ಯವನ್ನು ತಪ್ಪು ದಾರಿಗೆ ಹಿಡಿಯುವಂತೆ ಮಾಡಿದ ಕವಿಯೆಂದು ಟೀಕಿಸಿದ್ದಾರೆ ಎಂದು ವಿಮರ್ಶಿಸಿದರು. 

ಶತಾವಧಾನಿ ಡಾ.ಆರ್.ಗಣೇಶ್ ಮಾತನಾಡಿ, ಕನ್ನಡದಲ್ಲಿ ಗ್ರೀಕ್ ಸಾಹಿತ್ಯದ ಆಸಕ್ತಿ ಹುಟ್ಟಿಸಿದವರಲ್ಲಿ ಗೋವಿಂದ ಪೈ, ಬಿಎಂಶ್ರೀ ಪ್ರಮುಖರು. ಮಹಾಕಾವ್ಯಗಳ ಪರಂಪರೆ ಪಾಶ್ಚಾತ್ಯ ಜಗತ್ತಿನಲ್ಲಿ ಇಲ್ಲ ಅನ್ನುವಂತಾಗಿದೆ. ತೌಲನಿಕ ಅಧ್ಯಯನಕ್ಕೆ ಕನ್ನಡದಲ್ಲಿ ಸಾಮಾಗ್ರಿ
ಗಳು ಕಡಿಮೆ. ಇದಕ್ಕೆ ಮಹಾಕವಿ ಜಾನ್ ಮಿಲ್ಟನ್‌ನ ಕೃತಿ ಪೂರಕವಾಗಿದೆ ಎಂದರು.

ಕನ್ನಡಪ್ರಭ ಪುರವಣಿ ಸಂಪಾದಕ ಗಿರೀಶ್ ರಾವ್ ಹತ್ವಾರ್ ಮಾತನಾಡಿ, ಲೇಖಕ ಅಥವಾ ಸಂಗ್ರಹಕಾರನ ಮನೋಧರ್ಮಕ್ಕೆ ಅನುಗುಣವಾಗಿ ಕಥೆ, ಕವಿತೆಗಳು ಮುಖ್ಯವಾಗುತ್ತವೆ. ಕಥಾಸರಿತ್ಸಾಗರದ ಕಥೆಗಳ ಕೃತಿಯಲ್ಲಿ ಇಂದಿನ ಮಕ್ಕಳಿಗೆ ಶಿಕ್ಷಣ, ಸಾಹಿತ್ಯ ಯಾಕೆ
ಮುಖ್ಯ ಅನ್ನುವುದನ್ನು ಕಟ್ಟಿಕೊಟ್ಟಿದ್ದಾರೆ.

ಪ್ರಸ್ತುತ ದಿನಗಳಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಕನ್ನಡ ಮರೆಯಾಗುತ್ತಿದೆ. ಮಕ್ಕಳ ಸಾಹಿತ್ಯದಲ್ಲೂ ಇಂಗ್ಲಿಷ್ ಪುಸ್ತಕಗಳಿಗೆ ಬೇಡಿಕೆ ಹೆಚ್ಚುತ್ತಿದೆ ಎಂದರು. ಅಂಕಿತ ಪ್ರಕಾಶನದ ಪ್ರಕಾಶ್ಕಂಬತ್ತಳ್ಳಿ, ಲೇಖಕರು ಉಪಸ್ಥಿತರಿದ್ದರು.