ಶಿವಮೊಗ್ಗ: ಇಂಜಿನಿಯರಿಂಗ್ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು
ಶಿವಮೊಗ್ಗದಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿನಿಯೋರ್ವಳು ಅನುಮಾನಾಸ್ಪದವಾಗಿ ಸಾವಿಗೀಡಾದ ಘಟನೆ ನಡೆದಿದೆ. ಆದರೆ ಇದು ಅಪಘಾತ ಎಂದು ಕಾಲೇಜು ಆಡಳಿತ ಮಂಡಳಿ ಹೇಳಿದೆ.
ಶಿವಮೊಗ್ಗ [ಡಿ.07]: ಶಿವಮೊಗ್ಗದ ಪ್ರತಿಷ್ಠಿತ ಪಿಇಎಸ್ ಸಂಸ್ಥೆಯ ಫೆಸಿಟ್ ಇಂಜಿನಿಯರಿಂಗ್ ಕಾಲೇಜ್ ವಿದ್ಯಾರ್ಥಿನಿ ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದಾಳೆ.
"
ಶಿವಮೊಗ್ಗ ತಾಲ್ಲೂಕಿನ ಬೀರನಕೆರೆ ಬಳಿ ಸಂಭವಿಸಿದ ಅಪಘಾತದಲ್ಲಿ ವಿದ್ಯಾರ್ಥಿನಿ ಪರಿಣಿತಾ (20) ಅನುಮಾನಸ್ಪದ ರೀತಿಯಲ್ಲಿ ಸಾವಿಗೀಡಾಗಿದ್ದಾಳೆ.
ಇಲ್ಲಿನ ಫೆಸಿಟ್ ಕಾಲೇಜ್ ವತಿಯಿಂದ ಬೀರನಕೆರೆ ಬಳಿ ಸರ್ವೆ ಕಾರ್ಯಕ್ಕೆ ಸಂಬಂಧಿಸಿದಂತೆ ಕ್ಯಾಂಪ್ ನಡೆಸಲಾಗುತ್ತಿತ್ತು. ಕಳೆದ ನಾಲ್ಕು ದಿನಗಳಿಂದ ಬೀರನಕೆರೆಯಲ್ಲಿ 22 ವಿದ್ಯಾರ್ಥಿಗಳ ತಂಡ ವಾಸ್ತವ್ಯ ಹೂಡಿತ್ತು. ಇಂದು ಬೆಳಿಗ್ಗೆ ವಾಕಿಂಗ್ ತೆರಳಿದ್ದ ವೇಳೆ ನಡೆದ ದುರ್ಘಟನೆ ನಡೆದಿದೆ.
ಶಿವಮೊಗ್ಗ: ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನ, ಕಾಮುಕನಿಗೆ ಸ್ಥಳೀಯರಿಂದ ಗೂಸ!...
ಅಪರಿಚಿತ ವಾಹನ ಗುದ್ದಿ ಸಾವು ಸಂಭವಿಸಿದೆ ಎಂದು ಕಾಲೇಜ್ ಆಡಳಿತ ಮಂಡಳಿಯ ಸ್ಪಷ್ಟನೆ ನೀಡಿದ್ದು, ಇದನ್ನು ಒಪ್ಪದ ಪೋಷಕರು ಕಾಲೇಜು ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಕಾಲೇಜ್ ಆಡಳಿತ ಮಂಡಳಿ ಮತ್ತು ಪೋಷಕರ ನಡುವೆ ವಾಗ್ವಾದ ನಡೆದಿದ್ದು, ಪೋಲಿಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.
ಇದೊಂದು ಅನುಮಾನಸ್ಪದ ಸಾವಾಗಿದ್ದು ನ್ಯಾಯ ದೊರಕಿಸಿ ಕೊಡಿ ಎಂದು ಮೃತ ವಿದ್ಯಾರ್ಥಿನಿ ತಂದೆ ಸಿದ್ದಲಿಂಗೇಗೌಡ ಅಳಲು ತೋಡಿ ಕೊಂಡಿದ್ದು, ಮೃತ ವಿದ್ಯಾರ್ಥಿನಿ ಪರಿಣಿತಾ ಜೊತೆಗೆ ವಾಕಿಂಕ್ ತೆರಳಿದ್ದ ವಿದ್ಯಾರ್ಥಿನಿಯೂ ಕೂಡ ಈ ಬಗ್ಗೆ ಯಾವುದೇ ರೀತಿಯ ಸ್ಪಷ್ಟನೆ ನೀಡಿಲ್ಲ.
ಆಡಳಿತ ಮಂಡಳಿ ಈ ಬಗ್ಗೆ ಕ್ಷಣಕ್ಕೊಂದು ಹೇಳಿಕೆ ನೀಡುತ್ತಿದ್ದು ಪ್ರಕರಣವು ಗೊಂದಲಕ್ಕೆ ಕಾರಣವಾಗಿದೆ. ಈ ಸಂಬಂಧ ಶಿವಮೊಗ್ಗ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.