ದಾವಣಗೆರೆ(ಜ.03): ದಾವಣಗೆರೆ ಮೂಲದ ಸಾಪ್ಟವೇರ್ ಇಂಜಿನಿಯರ್ ಸೌಮ್ಯ ಅಮೇರಿಕಾದ ಹವಾಯಿ ದ್ವೀಪದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಹೊಸ ವರ್ಷ ಕ್ರಿಸ್ಮಸ್ ರಜೆ ಕಳೆಯಲು ಕ್ಯಾಲಿಪೋರ್ನಿಯಾದಿಂದ ಹವಾಯಿ ದ್ವೀಪಕ್ಕೆ ಹೋಗಿದ್ದರು ಸೌಮ್ಯ (29 ವರ್ಷ).

ಸಾಪ್ಟವೇರ್ ಇಂಜಿನಿಯರ್ ಆಗಿ ಪತಿ‌ ನಿರಂಜನ್ ಜೊತೆ ಕ್ಯಾಲಿಪೋರ್ನಿಯಾದ ದಲ್ಲಿ‌‌ ನೆಲಸಿದ್ದ ಸೌಮ್ಯ ಹವಾಯಿ ದ್ವೀಪದಲ್ಲಿ ಮೊಪೆಡ್ ನಲ್ಲಿ ಸಂಚರಿಸುವಾಗ ಸ್ಕಿಡ್ ಆಗಿ ಬಿದ್ದು ಗಾಯಗೊಂಡಿದ್ದರು.

ನರಭಕ್ಷಕ ಚಿರತೆಗಳ ಶೂಟೌಟ್, ಶೀಘ್ರ ಅನುಮತಿ: ಆನಂದ್‌ ಸಿಂಗ್‌

ಡಿಸಂಬರ್ 24 ರಂದು ಆಕ್ಸಿಡೆಂಟ್ ನಲ್ಲಿ ಗಾಯಗೊಂಡು ಆಸ್ಪತ್ರೆ ಸೇರಿದ್ದ ಸೌಮ್ಯ ಬುಧವಾರ ಮೃತಪಟ್ಟಿದ್ದಾರೆ. ಕುಟುಂಬಸ್ಥರು ಹವಾಯಿ ದ್ವೀಪದ ಆಸ್ಪತ್ರೆಯಲ್ಲೆ ಅಂಗಾಂಗ ದಾನ ಮಾಡಿದ್ದಾರೆ.

ದಾವಣಗೆರೆ ರೈಲ್ವೆ ನಿಲ್ದಾಣದಲ್ಲಿ ನಿವೃತ್ತ ವ್ಯವಸ್ಥಾಪಕರಾಗಿದ್ದ ಹೆಚ್ ಜಿ ಮುರುಗೇಂದ್ರಪ್ಪ ಪುತ್ರಿ ಸೌಮ್ಯ ಅವರ ಮೃತದೇಹತರಲು ವ್ಯವಸ್ಥೆ ಮಾಡುವಂತೆ ಕುಟುಂಬ ಭಾರತ ಸರ್ಕಾರಕ್ಕೆ ಮನವಿ ಮಾಡಿದೆ.