ಮೈಸೂರು (ಮಾ.12): ಅಪಘಾತದಲ್ಲಿ ಮೃತಪಟ್ಟಎಂಜಿನಿಯರ್‌ ನಾಲ್ವರಿಗೆ ಜೀವದಾನ ಮಾಡಿದ್ದಾರೆ. ಚಂದನ್‌ ಮಲ್ಲಪ್ಪ (28) ಮೃತ ಎಂಜಿನಿಯರ್‌. ಅಪಘಾತದಲ್ಲಿ ಗಾಯಗೊಂಡಿದ್ದ ಇವರು ನಾಲ್ವರಿಗೆ ತಮ್ಮ ಅಂಗಾಂಗ ದಾನ ಮಾಡುವ ಮೂಲಕ ಅವರ ಜೀವ ರಕ್ಷಿಸಿದ್ದಾರೆ. 

ಹೃದಯದ ಕೊಳವೆ, ಎರಡು ಕಿಡ್ನಿ, ಒಂದು ಲಿವರ್‌ ದಾನ ಮಾಡಿದ್ದಾರೆ. ಭಾನುವಾರ ಸಂಭವಿಸಿದ ಅಪಘಾತದಲ್ಲಿ ಗಂಭೀರ ಸ್ಥಿತಿಯಲ್ಲಿದ್ದ ಚಂದನ್‌ ಅವರನ್ನು ಮೈಸೂರಿನ ಅಪೋಲೋ ಬಿಜಿಎಸ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. 

'ಅಂಗಾಂಗ ದಾನ ಮಾಡ್ತೇನೆ' ಬಿಗ್‌ಬಿ ಘೋಷಣೆ, ಮೆಚ್ಚುಗೆಗಳ ಮಹಾಪೂರ .

ಎರಡು ದಿನಗಳ ಕಾಲ ಕೃತಕ ಉಸಿರಾಟದಲ್ಲಿ ಇರಿಸಲಾಗಿತ್ತು. ಬಳಿಕ ಚಿಕಿತ್ಸೆಗೆ ಸ್ಪಂದಸದೆ ಅವರು ಮೃತರಾದರು. ಮೆದುಳು ನಿಷ್ಕಿ್ರಯಗೊಂಡಿದ್ದರಿಂದ ಏಕಕಾಲಿಕ ಕಿಡ್ನಿ, ಮೇದೋಜ್ಞೀರಕ ಗ್ರಂಥಿ ಮತ್ತು ಯಕೃತ್ತು ಅಪೋಲೊ ಆಸ್ಪತ್ರೆಗೆ ದಾನ ಮಾಡಿದ್ದಾರೆ. ಒಂದು ಕಿಡ್ನಿಯನ್ನು ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ, ಹಾಟ್ಸ್‌ ವಾಲ್ಮ್‌ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ದಾನ ಮಾಡಲಾಗಿದೆ.