ಮಾಗಡಿ(ಏ.19): ಕೊರೋನಾ ವೈರಸ್‌ ಸೋಂಕಿನ ಭೀತಿಯ ನಡುವೆಯೂ ಸೇವೆಯಲ್ಲಿ ತೊಡಗಿರುವ 2338 ಮಂದಿ ಆಶಾ ಕಾರ್ಯಕರ್ತರಿಗೆ ಪ್ರೋತ್ಸಾಹ ಧನವಾಗಿ ತಲಾ 3 ಸಾವಿರ ನೀಡಲು ಬಮೂಲ್‌ ಆಡಳಿತ ಮಂಡಳಿ ನಿರ್ಧರಿಸಿದೆ.

ಸಂಸದ ಡಿ.ಕೆ.ಸುರೇಶ್‌ ಅವರು ಬಮೂಲ್‌ ಆಡಳಿತ ಮಂಡಳಿಗೆ ಪತ್ರ ಬರೆದು ಬೆಂಗಳೂರು ಹಾಲು ಒಕ್ಕೂಟ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಆಶಾ ಕಾರ್ಯಕರ್ತೆಯರಿಗೆ ತಲಾ 5 ಸಾವಿರ ರು.ಪ್ರೋತ್ಸಾಹ ಧನ ನೀಡುವಂತೆ ಮನವಿ ಮಾಡಿದ್ದರು. 

ಪ್ರಾಣವನ್ನೇ ಪಣಕ್ಕಿಟ್ಟು ಕೊರೋನಾ ವಿರುದ್ಧ ಹೋರಾಟ: ಆಶಾ ಕಾರ್ಯಕರ್ತೆಯರಿಗೆ ಹೂಮಳೆ ಸ್ವಾಗತ

ಈ ಹಿನ್ನೆಲೆಯಲ್ಲಿ ಬಮೂಲ್‌ ಆಡಳಿತ ಮಂಡಳಿ ಸಭೆ ನಡೆಸಿ ತಲಾ 3 ಸಾವಿರ ರು. ಪ್ರೋತ್ಸಾಹ ಧನ ನೀಡಲು ನಿರ್ಣಯ ಕೈಗೊಂಡಿದೆ. ಕೊರೋನಾ ಸೋಂಕಿನ ವಿರುದ್ಧ ಹೋರಾಡುತ್ತಿರುವ ಬೆಂಗಳೂರು ನಗರದ 687, ಬೆಂಗಳೂರು ಗ್ರಾಮಾಂತರದ 782 ಹಾಗೂ ರಾಮನಗರ ಜಿಲ್ಲೆಯ 869 ಆಶಾ ಕಾರ್ಯಕರ್ತರಿಗೆ ಈ ಪ್ರೋತ್ಸಾಹ ಧನ ಸಿಗಲಿದೆ.