ರಾಯಚೂರು(ಸೆ.03): ಅಕ್ರಮ ಕೂಟ ರಚಿಸಿ ಇಸ್ಪೀಟ್ ಆಡಿದ್ದ ಸರ್ಕಾರಿ ಪ್ರಾಥಮಿಕ ನೌಕರರ ಸಂಘದ ಜಿಲ್ಲಾಧ್ಯಕ್ಷ ಅಮಾನತು ಆದ ಘಟನೆ ಇಂದು(ಗುರುವಾರ) ನಡೆದಿದೆ. ವೀರಭದ್ರಪ್ಪ ಎಂಬುವರೇ ಅಮಾನತು ಆಗಿರುವ ಶಿಕ್ಷಕರಾಗಿದ್ದಾರೆ.

ತಾಲೂಕಿನ ಏಗನೂರು ದಂಡು ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕನಾಗಿ ಕರ್ತವ್ಯ ನಿರ್ವಹಿಸ್ತಿದ್ದ ವೀರಭದ್ರಪ್ಪ ಅವರು ಸರ್ಕಾರಿ ಶಿಕ್ಷಕರ ಸಂಘದ ಕಾರ್ಯಾಲಯದಲ್ಲಿ ಇಸ್ಟೀಟ್ ಆಡುತ್ತಿದ್ದರು. ರೆಡ್ ಆ್ಯಂಡ್ ಆಗಿ ಸಿಕ್ಕಿಬಿದ್ದಿದ್ದರಿಂದ ವೀರಭದ್ರಪ್ಪ ವಿರುದ್ಧ ರಾಯಚೂರಿನ ಪಶ್ಚಿಮ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು.

ರಾಯಚೂರು: ಡ್ರಗ್‌ ಪಾರ್ಕ್ ಸ್ಥಾಪನೆ, ಶ್ರೀರ್ಘ ಮೋದಿ ಬಳಿಗೆ ನಿಯೋಗ ಸಚಿವ ಶೆಟ್ಟರ್‌ 

ದೂರಿನ ಆಧಾರದ ಮೇಲೆ ಡಿಡಿಪಿಐ ಬಿ. ಎಚ್. ಗೋನಾಳ್ ಅವರು ವೀರಭದ್ರಪ್ಪನನ್ನ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.