ಜನತೆಯೊಂದಿಗೆ ನೌಕರರು ಉತ್ತಮ ಬಾಂಧವ್ಯ ಹೊಂದಿ: ಕೃಷ್ಣಪ್ಪ

ನಾಲ್ಕನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವ ಎಂ.ಟಿ.ಕೃಷ್ಣಪ್ಪ ಅವರನ್ನು ತಾಲೂಕು ಸರ್ಕಾರಿ ನೌಕರರ ಸಂಘದ ವತಿಯಿಂದ ಅಭಿನಂದಿಸಲಾಯಿತು.

Employees have good rapport with people: Krishnappa snr

  ತುರುವೇಕೆರೆ :  ನಾಲ್ಕನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವ ಎಂ.ಟಿ.ಕೃಷ್ಣಪ್ಪ ಅವರನ್ನು ತಾಲೂಕು ಸರ್ಕಾರಿ ನೌಕರರ ಸಂಘದ ವತಿಯಿಂದ ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಎಂ.ಟಿ.ಕೃಷ್ಣಪ್ಪ ಸರ್ಕಾರ ಜಾರಿಗೊಳಿಸುವ ಯೋಜನೆಗಳನ್ನು ಜನಸಾಮಾನ್ಯರ ಬಳಿಗೆ ಕೊಂಡೊಯ್ಯುವುದು ಸರ್ಕಾರಿ ನೌಕರರೇ. ಸರ್ಕಾರಿ ನೌಕರರು ಜನಸಾಮಾನ್ಯರೊಂದಿಗೆ ಉತ್ತಮ ಬಾಂಧವ್ಯ ಹೊಂದಿರಬೇಕು. ಯೋಜನೆಗಳನ್ನು ಪ್ರಾಮಾಣಿಕವಾಗಿ ಜನರಿಗೆ ತಲುಪಿಸುವಂತಹ ಕಾರ್ಯವನ್ನು ಮಾಡಬೇಕು. ಸರ್ಕಾರಿ ಯೋಜನೆಗಳನ್ನು ಜನರಿಗೆ ತಲುಪಿಸಲು ಸತಾಯಿಸಬಾರದು, ಅನಗತ್ಯವಾಗಿ ತೊಂದರೆ ನೀಡಬಾರದು. ಬಡಜನರ ಸೇವೆ ಮಾಡಿ. ಬಡವರ ಶಾಪ ಒಳ್ಳೆಯದಲ್ಲ. ತಮ್ಮ ಕುಟುಂಬದ ಸದಸ್ಯರೇ ನಿಮ್ಮ ಬಳಿ ಬಂದಿದ್ದಾರೆಂದು ತಿಳಿದು ಅವರಿಗೆ ಸೇವೆ ನೀಡಿ ಎಂದು ಸರ್ಕಾರಿ ನೌಕರರಿಗೆ ಕೃಷ್ಣಪ್ಪ ಕಿವಿಮಾತು ಹೇಳಿದರು.

ಅಧಿಕಾರಿಗಳು ಬದ್ಧತೆಯಿಂದ ಕೆಲಸ ಮಾಡಿದರೆ ಆಯಾ ಸರ್ಕಾರಗಳಿಗೆ ಒಳ್ಳೆಯ ಜನಾಭಿಪ್ರಾಯ ಬರುತ್ತದೆ. ತುರುವೇಕೆರೆ ವಿಧಾನಸಭಾ ಕ್ಷೇತ್ರದಲ್ಲೂ ಸರ್ಕಾರಿ ನೌಕರರು ಪ್ರಾಮಾಣಿಕವಾಗಿ ಆಡಳಿತ ಮಾಡಿದಲ್ಲಿ ತಮಗೂ ಒಳ್ಳೆಯ ಹೆಸರು ಬರಲಿದೆ. ಉತ್ತಮ ಅಧಿಕಾರಿಗಳಿಗೆ ತಾವು ಎಂದೂ ತೊಂದರೆ ಕೊಡುವುದಿಲ್ಲ. ಜನ ಸಾಮಾನ್ಯರಿಗೆ ತೊಂದರೆ ನೀಡಿದರೆ ತಾವು ಸುಮ್ಮನಿರುವ ವ್ಯಕ್ತಿಯೂ ಅಲ್ಲ ಎಂಬುದು ಈಗಾಗಲೇ ಹಲವರಿಗೆ ಅರಿವಾಗಿದೆ. ಕ್ಷೇತ್ರದಲ್ಲಿ ತಹಸೀಲ್ದಾರ್‌, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮತ್ತು ಪೊಲೀಸ್‌ ಇಲಾಖೆ ಈ ಮೂವರು ಅಧಿಕಾರಿಗಳು ಉತ್ತಮವಾಗಿ ಕೆಲಸ ಮಾಡಿದರೆ ಅಲ್ಲಿನ ಶಾಸಕರಿಗೆ ಒಳ್ಳೆಯ ಹೆಸರು ಬರುತ್ತದೆ. ನೌಕರರಲ್ಲಿ ಏನಾದರೂ ಸಮಸ್ಯೆ ಇದ್ದಲ್ಲಿ ನೇರವಾಗಿ ತಮ್ಮೊಂದಿಗೆ ಚರ್ಚಿಸಬೇಕು ಎಂದ ಅವರು ಸರ್ಕಾರ 7ನೇ ವೇತನ ಆಯೋಗವನ್ನು ಶೀಘ್ರವೇ ಜಾರಿ ಮಾಡಬೇಕೆಂದರು.

ಈ ಸಂದರ್ಭದಲ್ಲಿ ತಾಲೂಕು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ನಂ.ರಾಜುಮುನಿಯೂರು, ಜೆಡಿಎಸ್‌ ರಾಜ್ಯ ಯುವಘಟಕದ ಅಧ್ಯಕ್ಷ ದೊಡ್ಡಾಘಟ್ಟಚಂದ್ರೇಶ್‌, ಗ್ರೇಡ್‌-2 ತಹಸೀಲ್ದಾರ್‌ ಡಿ.ಆರ್‌.ಸುನಿಲ್‌ ಕುಮಾರ್‌, ಸರ್ವೆ ಇಲಾಖೆ ನಟೇಶ್‌, ಬಿಸಿಎಂ ಇಲಾಖೆಯ ಭಾನುಮತಿ, ಕೃಷಿ ಇಲಾಖೆ ಗಿರೀಶ್‌, ಆಹಾರ ಇಲಾಖೆಯ ಕೃಷ್ಣೇಗೌಡ, ತೋಟಗಾರಿಕೆ ಶಿವಪ್ರಸಾದ್‌, ಜಗದೀಶ್‌, ನಂಜಪ್ಪ, ಗ್ರಾಮಲೆಕ್ಕಾಧಿಕಾರಿ ರಮೇಶ್‌ ಇನ್ನಿತರರು ಇದ್ದರು.

Latest Videos
Follow Us:
Download App:
  • android
  • ios