Asianet Suvarna News Asianet Suvarna News

ಸರ್ಕಾರಿ ಶಾಲಾ ಮಕ್ಕಳ ಶೈಕ್ಷಣಿಕ ಗುಣಮಟ್ಟ ಹೆಚ್ಚಳಕ್ಕೆ ಒತ್ತು

ಹಳೇ ವಿದ್ಯಾರ್ಥಿಗಳ ತಂಡ, ತಾವು ಓದಿದ ಸರ್ಕಾರಿ ಶಾಲೆಗೆ ಮಕ್ಕಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವ ದೃಷ್ಟಿಯಿಂದ ಅನೇಕ ಅಭಿವೃದ್ಧಿ ಕೆಲಸಗಳಲ್ಲಿ ಕೈಜೋಡಿಸುತಿದ್ದು, ಜೊತೆಗೆ ಶಿಕ್ಷಕರನ್ನು ಕರೆಯಿಸಿ, ಗುರುವಂದನ ಕಾರ್ಯಕ್ರಮ ಆಯೋಜಿಸಿದ್ದರು.

Emphasis on increasing the educational standard of government school children snr
Author
First Published Nov 26, 2023, 8:33 AM IST

 ಕೊರಟಗೆರೆ :  ಹಳೇ ವಿದ್ಯಾರ್ಥಿಗಳ ತಂಡ, ತಾವು ಓದಿದ ಸರ್ಕಾರಿ ಶಾಲೆಗೆ ಮಕ್ಕಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವ ದೃಷ್ಟಿಯಿಂದ ಅನೇಕ ಅಭಿವೃದ್ಧಿ ಕೆಲಸಗಳಲ್ಲಿ ಕೈಜೋಡಿಸುತಿದ್ದು, ಜೊತೆಗೆ ಶಿಕ್ಷಕರನ್ನು ಕರೆಯಿಸಿ, ಗುರುವಂದನ ಕಾರ್ಯಕ್ರಮ ಆಯೋಜಿಸಿದ್ದರು.

ಕೊರಟಗೆರೆ ತಾಲೂಕಿನ ಗೊಡ್ರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ ಹಾಗೂ ಪ್ರೌಢಶಾಲೆಯಲ್ಲಿ ಹಳೆ ವಿದ್ಯಾರ್ಥಿಗಳ ವೃಂದ ಗುರುವಂದನ ಕಾರ್ಯಕ್ರಮದ ಜೊತೆಗೆ ಶಾಲೆಯ ಅಭಿವೃದ್ಧಿಗೆ ಕೈಜೋಡಿಸಲು ಕೆಲ ಕಾರ್ಯಕ್ರಮ ಆಯೋಜನೆಗೊಳಿಸಿದ್ದಾರೆ.

2006- 2007ನೇ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ವೃಂದ ಶಾಲೆಯ ಅಭಿವೃದ್ಧಿಗೆ ಅನೇಕ ಕೊಡುಗೆ ನೀಡಿದ್ದಾರೆ.

ಶಿಕ್ಷಕರಿಗೆ ಗುರುವಂದನಾ ಕಾರ್ಯಕ್ರಮ ಆಯೋಜಿಸಿ, ಇತರ ವಿದ್ಯಾರ್ಥಿಗಳಿಗೂ ಶಾಲೆಯ ಅಭಿವೃದ್ಧಿ ಹಾಗೂ ಗುರುಗಳಿಗೆ ಗೌರವದ ಬಗ್ಗೆ ಅಭಿಮಾನ ಮೂಡಿಸುವ ಉತ್ತಮ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಗೊಡ್ರಳ್ಳಿ ಸರ್ಕಾರಿ ಶಾಲೆ ಕುಗ್ರಾಮ. ಋಣಾತ್ಮಕ ಶಿಕ್ಷಣದಿಂದ ಹೆಚ್ಚು ವಿದ್ಯಾರ್ಥಿಗಳು ಶಾಲೆಗೆ ದಾಖಲಾಗುತ್ತಿದ್ದು, 180 ವಿದ್ಯಾರ್ಥಿಗಳಿದ್ದ ಶಾಲೆ ಇಂದು 500 ರಿಂದ 600 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಮಾಹಿತಿ ಸಿಂಧು ಯೋಜನೆಯಡಿ 20ಕ್ಕೂ ಹೆಚ್ಚು ಕಂಪ್ಯೂಟರ್‌ ಅಳವಡಿಸಿ ದಾನಿಗಳಿಂದ ಕಂಪ್ಯೂಟರಿಕರಣಗೊಳಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳ ಹಾಜರಾತಿ ಸಹ ಹೆಚ್ಚಾಗಿದೆ.

-ಕಾಮರಾಜು, ಮಾಜಿ ಮುಖ್ಯೋಪಾಧ್ಯಾಯರು

ಹಳೆಯ ವಿದ್ಯಾರ್ಥಿಗಳು ವಿದ್ಯಾರ್ಥಿಗಳಲ್ಲಿ ಗುರುವಂದನಾ ಕಾರ್ಯಕ್ರಮದ ಮೂಲಕ ಗುರುಗಳಿಗೆ ನೀಡುವಂತಹ ಗೌರವ ಕೃತಜ್ಞತೆಗಳನ್ನ ಪ್ರತಿಬಿಂಬಿಸುತ್ತಿರುವುದು ಬಹಳ ಉತ್ತಮ ಬೆಳವಣಿಗೆ. ಹಳೆಯ ವಿದ್ಯಾರ್ಥಿಗಳಿಂದ ಮೂರು ಲಕ್ಷ ರೂಪಾಯಿ ಮೌಲ್ಯದ ಆರ್ ಒ ಪ್ಲಾಂಟ್, ಎರಡು ಮೂರು ಲಕ್ಷದ ಡೆಸ್ಕ್, ದ್ವಾರಪಾಲ ಅಳವಡಿಸಲಾಗಿದೆ. ಇನ್ನು ಹೆಚ್ಚಿನ ಸಾಕಾರ ಕೊಡುತ್ತಿದ್ದಾರೆ.

ಹೇಮಲತಾ, ಮುಖ್ಯೋಪಾಧ್ಯಾಯನಿ.

ನಾವು 2006 ಮತ್ತು 7ನೇ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು, ಗುರುವಂದನ ಕಾರ್ಯಕ್ರಮ ಆಯೋಜಿಸಿದ್ದೇವೆ. ನಾವು ಉತ್ತಮ ಪ್ರಜೆಗಳಾಗಿ ವಿಶೇಷ ಸ್ಥಾನಮಾನದಲ್ಲಿದ್ದೇವೆ. ಇದಕ್ಕೆಲ್ಲ ಕಾರಣ ಗುರುಗಳಾಗಿರುವುದರಿಂದ ಅವರಿಗೆ ಗುರುವಂದನಾ ಕಾರ್ಯಕ್ರಮದ ಮೂಲಕ ಕೃತಜ್ಞತೆ ಸಲ್ಲಿಸಲು ಈ ಕಾರ್ಯಕ್ರಮ ಆಯೋಜಿಸಿದ್ದೇವೆ.

-ಆನಂದ್ ಹಳೆಯ ವಿದ್ಯಾರ್ಥಿ.

Follow Us:
Download App:
  • android
  • ios