Dharwad; ತುರ್ತು ಪರಿಸ್ಥಿತಿ ನಿರ್ವಹಣೆ ಪ್ರಾತ್ಯಕ್ಷಿಕೆ

ಗಾಂಧಿ ನಗರದ ಜಿಲ್ಲಾ ತರಬೇತಿ ಸಂಸ್ಥೆ ಆವರಣದಲ್ಲಿ ಮೈಸೂರಿನ ಎಟಿಐ ವಿಕೋಪ ನಿರ್ವಹಣಾ ಕೇಂದ್ರ ಏರ್ಪಡಿಸಿದ್ದ ಜಿಲ್ಲಾ ವಿಕೋಪ ನಿರ್ವಹಣೆ ಯೋಜನೆ ಪರಿಷ್ಕರಣೆ ಕುರಿತ ಕಾರ್ಯಾಗಾರದಲ್ಲಿ ಈ ಪ್ರಾತ್ಯಕ್ಷಿಕೆ ಜರುಗಿತು.

Emergency Management demonstrate in dharwad gow

ವರದಿ : ಪರಮೇಶ್ ಅಂಗಡಿ, ಏಷ್ಯಾನೆಟ್ ಸುವರ್ಣ ನ್ಯೂಸ್

ಧಾರವಾಡ (ಜು.2): ಧಾರವಾಡ ಅಗ್ನಿ ಅವಘಡಗಳು, ನೈಸರ್ಗಿಕ ವಿಕೋಪಗಳು, ಸಾಂಕ್ರಾಮಿಕಗಳು ಮೊದಲಾದ ವಿಪತ್ತು ನಿರ್ವಹಣೆ ಸಂದರ್ಭದಲ್ಲಿ ಅನುಸರಿಸಬೇಕಾದ ಕ್ರಮಗಳ ಕುರಿತು ಅಗ್ನಿಶಾಮಕ ಹಾಗೂ ತುರ್ತುಸೇವೆಗಳ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಿದರು. ಗಾಂಧಿ ನಗರದ ಜಿಲ್ಲಾ ತರಬೇತಿ ಸಂಸ್ಥೆ ಆವರಣದಲ್ಲಿ ಮೈಸೂರಿನ ಎಟಿಐ ವಿಕೋಪ ನಿರ್ವಹಣಾ ಕೇಂದ್ರ ಏರ್ಪಡಿಸಿದ್ದ ಜಿಲ್ಲಾ ವಿಕೋಪ ನಿರ್ವಹಣೆ ಯೋಜನೆ ಪರಿಷ್ಕರಣೆ ಕುರಿತ ಕಾರ್ಯಾಗಾರದಲ್ಲಿ ಈ ಪ್ರಾತ್ಯಕ್ಷಿಕೆ ಜರುಗಿತು.

ಜಿಲ್ಲಾ ಅಗ್ನಿಶಾಮಕ ಅಧಿಕಾರಿ ವಿನಾಯಕ ಕಲ್ಲುಕುಟಿಗರ್ ಹಾಗೂ ಅಗ್ನಿಶಾಮಕ ಠಾಣಾಧಿಕಾರಿ ಅಮೃತ ಅವರು ವಿವಿಧ ರೀತಿಯ ಅಗ್ನಿ ಅವಘಡಗಳ ಸಂದರ್ಭದಲ್ಲಿ ನಿರ್ವಹಿಸಬೇಕಾದ ಕ್ರಮಗಳು, ಅಡಿಗೆ ಅನಿಲ, ವಾಹನಗಳ ಇಂಧನ ಸೋರಿಕೆ ಮತ್ತಿತರ ವಿಪತ್ತು ಸಂದರ್ಭದಲ್ಲಿ ಬೆಂಕಿಗೆ ಕಾರಣವಾಗುವ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಕಾರ್ಯಪ್ರವೃತ್ತರಾಗಬೇಕು.

ಮಂಗಳೂರಿನಲ್ಲಿ ಮುಳುಗಿದ ಹಡಗಿನಿಂದ ತೈಲ ಸೋರಿಕೆ, ಸ್ಥಳೀಯರಿಗೆ ಆರೋಗ್ಯ ಸಮಸ್ಯೆ!

ಬೆಂಕಿ ನಂದಿಸಲು ನೀರು, ತಂಪುಕಾರಕ ವಸ್ತುಗಳು, ಫೋಮ್, ಬ್ಲ್ಯಾಂಕೆಟ್ ಬಳಕೆ ಪದ್ಧತಿಗಳನ್ನು ಪಾಲಿಸಬೇಕು. ಯಾವ ರೀತಿಯ ಅವಘಡ ಸಂಭವಿಸಿದೆ ಎಂಬುದನ್ನು ಆಧರಿಸಿ ಶಮನದ ವಿಧಾನ ನಿರ್ಧಾರವಾಗುತ್ತದೆ ಎಂದರು. ಪ್ರವಾಹ ಸಂದರ್ಭದಲ್ಲಿ ಜೀವರಕ್ಷಣೆಗೆ ಅಗತ್ಯವಿರುವ ಲೈಫ್‍ ಜಾಕೆಟ್, ಬೋಟ್, ರೋಪ್ ಲ್ಯಾಡರ್, ಆಮ್ಲಜನಕ ಪೂರೈಕೆಯ ಸಾಧನಗಳೊಂದಿಗೆ ಸಿಬ್ಬಂದಿ ಸದಾಕಾಲ ಸನ್ನದ್ಧರಾಗಿರುತ್ತಾರೆ. ಸಾರ್ವಜನಿಕರು ತುರ್ತು ಸಂದರ್ಭಗಳಲ್ಲಿ 101 ದೂರವಾಣಿ ಸಂಪರ್ಕಿಸಿ ನೆರವು ಪಡೆಯಬಹುದು ಎಂದು ವಿವರಿಸಿದರು.

ಜಿಲ್ಲಾ ತರಬೇತಿ ಸಂಸ್ಥೆಯಲ್ಲಿ 2 ದಿನಗಳ ಕಾಲ ನಡೆದ ಕಾರ್ಯಾಗಾರ ಸಮಾರೋಪಗೊಳ್ಳಲಾಯಿತು... ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಎಸ್.ಎನ್.ರುದ್ರೇಶ ಮಾತನಾಡಿ, ವಿಪತ್ತು ನಿರ್ವಹಣೆ ಕಾರ್ಯವು ಆಡಳಿತ ವ್ಯವಸ್ಥೆಯ ಮುಖ್ಯ ಜವಾಬ್ದಾರಿಗಳಲ್ಲೊಂದಾಗಿದೆ. ಎಲ್ಲ ಇಲಾಖೆಗಳು ತಮ್ಮ ಪಾತ್ರ ಅರಿತು ಸಕಾಲಿಕವಾಗಿ ನಿರ್ವಹಿಸಬೇಕು. ವಿಪತ್ತು ನಿರ್ವಹಣೆಗೆ ಪ್ರಾಥಮಿಕವಾಗಿ ಸ್ಪಷ್ಟ ಯೋಜನೆ ಸಿದ್ದಪಡಿಸಿ ಇಟ್ಟುಕೊಂಡಿರಬೇಕು ಎಂದರು.

ಹುಬ್ಬಳ್ಳಿ-ಧಾರವಾಡ ಸ್ಮಾರ್ಟ್‌ಸಿಟಿಗೆ ಹಂದಿಗಳೇ ಸವಾಲು..!

ಕಾರ್ಖಾನೆ ಮತ್ತು ಬಾಯ್ಲರುಗಳ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ಭಾರತಿ ಮುಗದುಮ್ ಅವರು ಕೈಗಾರಿಕಾ ವಿಪತ್ತು ನಿರ್ವಹಣೆ ಯೋಜನೆ ಕುರಿತು ವಿವರಿಸಿದರು. ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ದೀಪಕ್ ಮಡಿವಾಳ, ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಚಾರ್ಯೆ ಕವಿತಾ ಅಂಗಡಿ, ಎಟಿಐ ಬೋಧಕ ಡಾ.ಚಂದ್ರ ನಾಯಕ, ಜಿಲ್ಲಾಧಿಕಾರಿಗಳ ಕಚೇರಿ ವಿಪತ್ತು ನಿರ್ವಹಣೆ ಸಂಯೋಜಕ ಪ್ರಕಾಶ ವೈ. ಎಚ್ ಮತ್ತಿತರರು ಪಾಲ್ಗೊಂಡಿದ್ದರು.

Latest Videos
Follow Us:
Download App:
  • android
  • ios