Asianet Suvarna News Asianet Suvarna News

ಗೋಮಾಳ ಉಳುಮೆ ಮಾಡಿದ ಅರ್ಹ ರೈತರಿಗೆ ಶೀಘ್ರ ಹಕ್ಕುಪತ್ರ: ಸಚಿವ ಮಾಧುಸ್ವಾಮಿ

ನಮೂನೆ 50, 53, 57ರ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ ಜಮೀನಿನ ಹಕ್ಕು ಪತ್ರಗಳನ್ನು ವಿತರಣೆ ಮಾಡುತ್ತಿದ್ದು ಭೂಮಿಯನ್ನು ಸದ್ಭಳಕೆ ಮಾಡಿಕೊಳ್ಳಿ ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.

Eligible farmers will be issued the claim letter soon says minister jc madhuswamy gvd
Author
First Published Sep 11, 2022, 7:52 AM IST

ಚಿಕ್ಕನಾಯಕನಹಳ್ಳಿ (ಸೆ.11): ಸುಮಾರು ವರ್ಷಗಳಿಂದ ಗೋಮಾಳವನ್ನು ಉಳುಮೆ ಮಾಡಿಕೊಂಡು ಬಂದಿರುವ ಅರ್ಹ ರೈತ ಕುಟುಂಬಕ್ಕೆ ಸರ್ಕಾರ ಸದ್ಯದಲ್ಲೇ ಸಿಹಿ ಸುದ್ದಿ ನೀಡಲಿದೆ. ಈಗಾಗಲೇ ಕಾನೂನು ಪ್ರಕ್ರಿಯೆ ಶುರುವಾಗಿದ್ದು ವಿತರಿಸಲು ಇದ್ದ ಅಡೆ ತಡೆಗಳನ್ನು ನಿವಾರಿಸಲಾಗುತ್ತಿದೆ. ಯಾಂತ್ರಿಕ ಜೀವನದಲ್ಲಿ ಇಂದಿನ ದಿನಗಳಲ್ಲಿ ದನ, ಕುರಿ, ಮೇಕೆ ಗೋಮಾಳದಲ್ಲಿ ಮೇಯಿಸಿ ಸಾಕುವುದು ಕಡಿಮೆ ಆಗಿರುವುದನ್ನು ಗಣನೆಗೆ ತೆಗೆದುಕೊಂಡು ಅಗತ್ಯ ಇರುವಷ್ಟನ್ನು ಮಾತ್ರ ಬಿಟ್ಟು ಉಳಿದ ಭೂಮಿಯನ್ನು ಭೂಮಿ ಬಯಸುವ ಅರ್ಹ ಭೂರಹಿತರಿಗೆ ವಿತರಿಸಲಾಗುತ್ತದೆ ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.

ಪಟ್ಟಣದ ತೀನಂಶ್ರೀ ಭವನದಲ್ಲಿ ತಾಲೂಕು ಆಡಳಿತ ಹಮ್ಮಿಕೊಂಡಿದ್ದ ಹಂದನಕೆರೆ, ಕಂದಿಕೆರೆ ಹೋಬಳಿಯ ಸಾಗುವಳಿ ಚೀಟಿ ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ನಮೂನೆ 50, 53, 57ರ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ ಜಮೀನಿನ ಹಕ್ಕು ಪತ್ರಗಳನ್ನು ವಿತರಣೆ ಮಾಡುತ್ತಿದ್ದು ಭೂಮಿಯನ್ನು ಸದ್ಭಳಕೆ ಮಾಡಿಕೊಳ್ಳಿ ಎಂದು ತಿಳಿಸಿದರು. ಖರಾಬು, ಸೇಂದಿವನ, ಬೀಳು ಜಮೀನುಗಳ ಭೂಮಿಯನ್ನು ಶೆಟ್ಟಿಕೆರೆ, ಕಸಬಾ, ಹುಳಿಯಾರು, ಹದನಕೆರೆ, ಕಂದಿಕೆರೆ ಹೋಬಳಿಯ ಅರ್ಹ ಬಡವರಿಗೆ ಖಾತೆ ಪಹಣಿ ಪತ್ರಗಳನ್ನು ವಿತರಿಸಲು ಸಿದ್ದತೆ ಮಾಡಿಕೊಂಡಿದ್ದು 45 ಸಾವಿರ ಗೋಮಾಳ ಅರ್ಜಿ ಇದ್ದು 3,4 ಹಂತದಲ್ಲಿ ಡಿಸೆಂಬರ್‌, ಜನವರಿ ಒಳಗೆ ಪೂರ್ಣಗೊಳಿಸುತ್ತೇವೆ ಎಂದರು.

Tumakuru: ದೇಶದ ಸಮಗ್ರತೆಗಾಗಿ ಭಾರತ್‌ ಜೋಡೋ ಪಾದಯಾತ್ರೆ: ಮಾಜಿ ಶಾಸಕ ಷಡಕ್ಷರಿ

ಸಾಗುವಳಿ ಚೀಟಿ ಖಾತೆ-ಪಹಣಿ ಪಡೆಯಲು ಯಾರಿಗೂ ಹಣ ನೀಡಬೇಕಿಲ್ಲ. ಅರ್ಹರೆಲ್ಲರಿಗೂ ಉಚಿತವಾಗಿ ನೀಡಲಾಗುವುದು. ಯಾವುದೇ ಸಮಸ್ಯೆ ಇದ್ದರೂ ತಾಲೂಕು ಆಡಳಿತವನ್ನು ಸಂಪರ್ಕಿಸಿ ಪರಿಹಾರ ಕಂಡುಕೊಳ್ಳಿ. ಹಿಂದೆ ಸಾಗುವಳಿ ಚೀಟಿ ಪಡೆದ ಕೆಲವರು ಖಾತೆಯಾಗದೆ ಕಚೇರಿಗೆ ಅಲೆದಾಡುತ್ತಿದ್ದಾರೆ. ಈ ರೀತಿ ಆಗಬಾರದು ಎಂದು ನಾನೇ ಖುದ್ದು ಪರಿಶೀಲಿಸಿ ಅನೇಕ ಸಭೆಗಳನ್ನು ಮಾಡಿ ವಿತರಿಸುತ್ತಿದ್ದೇನೆ ಎಂದರು. ತಹಸೀಲ್ದಾರ್‌ ಬಿ.ತೇಜಸ್ವಿನಿ ಮಾತನಾಡಿ, ಹಂದನಕೆರೆ ಹೋಬಳಿಯ 90, ಕಂದಿಕೆರೆಯ 26 ಜನರಿಗೆ ಸಾಗುವಳಿ ಚೀಟಿ, 8 ಜನರಿಗೆ ಮನೆಗಳ ಹಕ್ಕು ಪತ್ರ, ಮಳೆಯಿಂದ ಹಾನಿಯಾದ 42 ಮನೆಗಳಿಗೆ ಪರಿಹಾರ ವಿತರಿಸಲಾಗಿದೆ. 

ತಾಲೂಕು ಆಡಳಿತ ಜನಸ್ನೇಹಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಒಟ್ಟು 2077 ಅರ್ಜಿಗಳನ್ನು ವಿಲೇ ಮಾಡುತ್ತಿದ್ದು ಹಂತ ಹಂತವಾಗಿ ಸಾಗುವಳಿ ಚೀಟಿ ನೀಡಲು ತಾಲೂಕು ಆಡಳಿತ ಕ್ರಮ ಕೈಗೊಂಡಿದೆ. ಅನಧಿಕೃತವಾಗಿ ಸರ್ಕಾರಿ ಜಾಗದಲ್ಲಿ ಮನೆ ನಿರ್ಮಿಸಿಕೊಂಡವರಿಗೆ 94 ಸಿಸಿಯಲ್ಲಿ ಅರ್ಜಿಸಲ್ಲಿಸಲು ಮಾ.31ರವೆಗೆ ಅವಕಾಶ ನೀಡಲಾಗಿದೆ ಎಂದರು. ಸಾಮಾಜಿಕ ವಲಯ ಅರಣ್ಯಾಧಿಕಾರಿ ಹಂಸವಿ, ಬಗರ್‌ಹುಕುಂ ಕಮಿಟಿ ಸದಸ್ಯ ಎಳ್ಳೇನಹಳ್ಳಿ ನಿರಂಜನ್‌ಮೂರ್ತಿ, ತಿಮ್ಲಾಪುರ ಶಂಕರಣ್ಣ, ಲತಾ ಕೇಶವಮೂರ್ತಿ, ರಂಗಪ್ಪ, ಕಂದಾಯ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

ಜೆಡಿಎಸ್‌ ಸದೃಢಗೊಳಿಸಲು ಪಂಚರತ್ನ ಪ್ರವಾಸ: ನಿಖಿಲ್ ಕುಮಾರಸ್ವಾಮಿ

ಹಕ್ಕು ಪತ್ರ ವಿತರಣೆ ಸಂಬಂಧಿಸಿದಂತೆ ಯಾವುದೇ ರಾಜಕೀಯ ಹಾಗೂ ಭೇದಭಾವ ಮಾಡುವುದಿಲ್ಲ. ಅರ್ಹ ಸಾಗುವಳಿದಾರ ನಮೂನೆ 50, 53 ,57ರ ರೈತರಿಗೆ ನೀಡಲಾಗುತ್ತಿದೆ. ಬೆಳೆ, ಮನೆ ಪರಿಹಾರ ಅವಲೋಕನ ಈ ವಿಷಯದಲ್ಲಿ ಅನಾವಶ್ಯಕವಾಗಿ ಗೊಂದಲ ಆಗುವುದು ಬೇಡ. ಪಿತ್ರಾರ್ಜಿತ ಆಸ್ತಿಯು ಸೇರಿದಂತೆ ಫಲಾನುಭವಿ ಕುಟುಂಬಕ್ಕೆ ಒಟ್ಟು 4.38 ಗುಂಟೆ ಜಮೀನನ್ನು ಮಾತ್ರ ಸರ್ಕಾರ ಮಂಜೂರು ಮಾಡುತ್ತದೆ.
-ಜೆ.ಸಿ.ಮಾಧುಸ್ವಾಮಿ ಸಚಿವ

Follow Us:
Download App:
  • android
  • ios