ಮೈಸೂರು:(ಸೆ.20) ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಭಾಗವಹಿಸಲು ಕಾಡಿನಿಂದ ನಾಡಿಗೆ ಆಗಮಿಸಿದ್ದ ವರಲಕ್ಷ್ಮೀ ಆನೆಯು ಇಂದು ಮರಳಿ ಕಾಡಿಗೆ ತೆರಳುತ್ತಿದೆ. ಗರ್ಭಿಣಿಯಾಗಿರುವ ವರಲಕ್ಷ್ಮೀ ಆನೆಯನ್ನು ವಾಪಸ್‌ ಕಾಡಿಗೆ ಕಳುಹಿಸಲು ಅರಣ್ಯ ಇಲಾಖೆಯ ನಿರ್ಧರಿಸಿದೆ.

ಮೈಸೂರು ದಸರಾ ಜಂಬೂಸವಾರಿಗೆ ಈ ವರ್ಷ 2 ಹೊಸ ಆನೆ

ವರಲಕ್ಷ್ಮೀ ಆನೆ ಬದಲಾಗಿ ಗೋಪಾಲಸ್ವಾಮಿ ಆನೆಯನ್ನು ಕರೆತರಲು ಅರಣ್ಯ ಇಲಾಖೆ ನಿರ್ಧರಿಸಿದೆ. ಇಂದು ಸಂಜೆಯ ಹೊತ್ತಿಗೆ ಗೋಪಾಲಸ್ವಾಮಿ ಆನೆಯ ಮೈಸೂರು ಅರಮನೆಗೆ ಆಗಮಿಸಿ ದಸರಾ ಗಜಪಡೆಯೊಂದಿಗೆ ಸೇರಿಕೊಳ್ಳಲಿದೆ ಎಂದು ತಿಳಿಸಿದ್ದಾರೆ. 


ಗರ್ಭಿಣಿಯಾದ ವರಲಕ್ಷ್ಮೀ


ಈ ಬಗ್ಗೆ ಮಾಹಿತಿ ನೀಡಿದ ದಸರಾ ಆನೆ ವೈದ್ಯ ಡಾ.ಡಿ.ಎನ್‌. ನಾಗರಾಜು ಅವರು, 63 ವರ್ಷದ ವರಲಕ್ಷ್ಮೀ ಆನೆಯು ಗರ್ಭಿಣಿಯಾಗಿರುವ ಹಿನ್ನೆಲೆಯಲ್ಲಿ ವಾಪಸ್‌ ಕಾಡಿಗೆ ಕಳುಹಿಸಲಾಗುತ್ತಿದೆ. ಮತ್ತಿಗೊಡು ಆನೆ ಶಿಬಿರಕ್ಕೆ ವರಲಕ್ಷ್ಮೀ ತೆರಳಲಿದೆ. ವರಲಕ್ಷ್ಮೀ ತುಂಬಾ ಸಾಧು ಸ್ವಭಾವದಾಗಿದ್ದು, ಇದನ್ನು 1977ರಲ್ಲಿ ಕಾಕನಕೋಟೆಯಲ್ಲಿ ಸೆರೆ ಹಿಡಿಯಲಾಗಿದೆ. ಈ ಆನೆ 11ನೇ ಬಾರಿಗೆ ದಸರೆಯಲ್ಲಿ ಭಾಗವಹಿಸಲು ಆಗಮಿಸಿತ್ತು. ಆದರೆ, ಗರ್ಭಿಣಿಯಾಗಿರುವ ಕಾರಣ ವಾಪಸ್‌ ಕಾಡಿಗೆ ತೆರಳುತ್ತಿದೆ ಎಂದು ಹೇಳಿದರು. 

ಮದ ಇಳಿದು ಬಂದ ಗೋಪಾಲಸ್ವಾಮಿ!

37 ವರ್ಷದ ಗೋಪಾಲಸ್ವಾಮಿ ಆನೆಯು 6 ಬಾರಿ ದಸರೆಯಲ್ಲಿ ಭಾಗವಹಿಸಿತ್ತು. 2017ನೇ ಸಾಲಿನ ದಸರೆಯಲ್ಲಿ ಭಾಗವಹಿಸಿದ್ದ ಗೋಪಾಲಸ್ವಾಮಿ ಆನೆಯು 2018ನೇ ಸಾಲಿನಲ್ಲೂ ದಸರೆಯಲ್ಲಿ ಭಾಗವಹಿಸಬೇಕಿತ್ತು. ದಸರೆಗೆ ಕರೆ ತರಲು ಅರಣ್ಯ ಇಲಾಖೆ ಸಹ ನಿರ್ಧರಿಸಿತ್ತು. ಆದರೆ, ಕೊನೆ ಕ್ಷಣದಲ್ಲಿ ಗೋಪಾಲಸ್ವಾಮಿ ಆನೆಗೆ ಮದ ಹೆಚ್ಚಾದ ಕಾರಣ ಕರೆ ತರಲಿಲ್ಲ. ಗೋಪಾಲಸ್ವಾಮಿ ಆನೆ ಬದಲು ಪ್ರಶಾಂತ ಆನೆಯನ್ನು ಕರೆ ತರಲಾಗಿತ್ತು.

ಆದಿವಾಸಿಗಳನ್ನು ದಸರಾಗೆ ಕರೆತರಲು ಬಸ್‌ ವ್ಯವಸ್ಥೆ

ಈ ಬಾರಿಯ ದಸರೆಗೆ ಗೋಪಾಲಸ್ವಾಮಿ ಆನೆಯನ್ನು ಆಯ್ಕೆ ಮಾಡಲು ಅರಣ್ಯ ಇಲಾಖೆಯ ಅಧಿಕಾರಿಗಳು ಆಸಕ್ತಿ ವಹಿಸಿದ್ದರು. ಆದರೆ, ದಸರಾ ಗಜಪಡೆ ಪಟ್ಟಿ ತಯಾರಿಸುವಾಗ ವೇಳೆಗೆ ಗೋಪಾಲಸ್ವಾಮಿ ಆನೆಗೆ ಮದ ಬಂದಿದ್ದರಿಂದ ಕೈ ಬಿಡಲಾಗಿತ್ತು. ಈಗ ಮದ ಹೋಗಿ ಮಾಮೂಲಿಯಂತೆ ಇರುವ ಗೋಪಾಲಸ್ವಾಮಿ ಆನೆಯನ್ನು ಕರೆ ತರಲಾಗುತ್ತಿದೆ.

ಗೋಪಾಲಸ್ವಾಮಿ ಆನೆಯು ಶರೀರದ ಎತ್ತರ- 2.62 ಮೀಟರ್‌, ಶರೀರದ ಉದ್ದ- 3.42 ಮೀಟರ್‌, ಅಂದಾಜು ತೂಕ- 3242 ಕೆ.ಜಿ. ಹೊಂದಿದ್ದು, ಮತ್ತಿಗೋಡು ಆನೆ ಶಿಬಿರದಿಂದ ಬರುತ್ತಿದೆ. ಈ ಆನೆಯನ್ನು 2009ರಲ್ಲಿ ಹಾಸನ ಜಿಲ್ಲೆಯ ಸಕಲೇಶಪುರದ ಎತ್ತೂರಿನಲ್ಲಿ ಸೆರೆ ಹಿಡಿಯಲಾಯಿತು. ಇದು ಶಾಂತ ಸ್ವಭಾವದಿಂದ ಕೂಡಿದ್ದರೂ ಬಲಶಾಲಿಯಾದ ಆನೆಯಾಗಿದೆ. 7ನೇ ಬಾರಿಗೆ ದಸರೆಯಲ್ಲಿ ಭಾಗವಹಿಸುತ್ತಿದೆ.

ನಾಡಿಗೆ ಹೊಂದಿಕೊಳ್ಳುತ್ತಿರುವ ಈಶ್ವರ ಆನೆ ಸೇಫ್‌?


ಇದೇ ಮೊದಲ ಬಾರಿಗೆ ದಸರಾ ಮಹೋತ್ಸವದಲ್ಲಿ ಭಾಗವಹಿಸಲು ಕಾಡಿನಿಂದ ನಾಡಿಗೆ ಆಗಮಿಸಿರುವ 49 ವರ್ಷದ ಈಶ್ವರ ಆನೆಯು ಸದ್ಯ ನಾಡಿನ ವಾತಾವರಣಕ್ಕೆ ಹೊಂದಿಕೊಳ್ಳುತ್ತಿದೆ.

ಸ್ಟೀಲ್ ಬಾಟಲ್, ಬಟ್ಟೆ ಚೀಲವನ್ನೇ ಬಳಸಿ: ಪ್ರವಾಸಿಗರಿಗೆ 'ಕ್ಲೀನ್ ಮೈಸೂರು' ಮನವಿ

ಪ್ರತಿ ದಿನ ಬೆಳಗ್ಗೆ-ಸಂಜೆ ನಡಿಗೆ ತಾಲೀಮು ವೇಳೆ ಈಶ್ವರ ಆನೆಯು ಗಾಬರಿಗೊಂಡಿದ್ದು, ಮಾವುತರು ಮತ್ತು ಕಾವಾಡಿಗಳು ನಿಯಂತ್ರಿಸಿದ್ದರು. ಇದನ್ನು ಗಮನಿಸಿದ ಸಾರ್ವಜನಿಕರು ದೂರಿದ್ದರಿಂದ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಅವರು ಆತಂಕ ವ್ಯಕ್ತಪಡಿಸಿ ವಾಪಸ್‌ ಕಾಡಿಗೆ ಕಳುಹಿಸಲು ತಿಳಿಸಿದ್ದರು. ಅದರಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ಸಹ ವಾಪಸ್‌ ಕಳುಹಿಸುವುದಾಗಿ ಹೇಳಿದ್ದರು.

ಬಾಲ್ಯದ ಮೈಸೂರು ದಸರಾ ಮೆಲುಕು: ಸಚಿವ ಸೋಮಣ್ಣ ಮಾತು ಹೀಗಿತ್ತು

ಆದರೆ, ಪ್ರತಿ ದಿನ ತಾಲೀಮಿನಲ್ಲಿ ಈಶ್ವರ ಆನೆಯು ಭಾಗವಹಿಸುತ್ತಿದ್ದು, ಮೊದಲಿಗಿಂತ ಈಗ ಧೈರ್ಯವಾಗಿ ನಡಿಗೆ ತಾಲೀಮಿನಲ್ಲಿ ಭಾಗವಹಿಸುತ್ತಿದೆ. ಕುಶಾಲು ತೋಪು ಸಿಡಿಸುವ ತಾಲೀಮಿನಲ್ಲಿ ಜಗ್ಗದ ನಿಲ್ಲುವ ಮೂಲಕ ಭರವಸೆ ಮೂಡಿಸಿರುವ ಈಶ್ವರ ಆನೆಗೆ ಮೇಲೆ ಒಂದು ದಿನ ಮರಳು ಮೂಟೆ ಹೊರಸಿ ತಾಲೀಮು ಸಹ ನಡೆಸಲಾಗಿದೆ. ಈಶ್ವರ ಆನೆಯ ವರ್ತನೆ ಬದಲಾಗಿರುವ ಹಿನ್ನೆಲೆಯಲ್ಲಿ ಕಾಡಿಗೆ ಕಳುಹಿಸುವ ನಿರ್ಧಾರವನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಮುಂದೂಡಿದ್ದಾರೆ.