ಮೈಸೂರು [ಆ.18]: ಈ ವರ್ಷದ ದಸರಾ ಗಜಪಡೆಗೆ ಎರಡು ಹೊಸ ಆನೆಗಳು ಸೇರ್ಪಡೆಯಾಗಿವೆ. ಈಶ್ವರ ಮತ್ತು ಜಯಪ್ರಕಾಶ್‌ ಎಂಬ ಹೆಸರಿನ ಹೊಸ ಆನೆಗಳು ಜಂಬೂ ಸವಾರಿಯಲ್ಲಿ ರಾಜ ಗಾಂಭೀರ್ಯದಿಂದ ಹೆಜ್ಜೆ ಹಾಕಲು ಸಜ್ಜಾಗಿವೆ. 

ಈಶ್ವರನಿಗೆ 49 ವರ್ಷವಾಗಿದ್ದು, ದುಬಾರೆ ಆನೆ ಶಿಬಿರದಲ್ಲಿ ಆಶ್ರಯ ಪಡೆದಿದ್ದಾನೆ. 57 ವರ್ಷದ ಜಯಪ್ರಕಾಶ್‌, ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ರಾಂಪುರ ಆನೆ ಶಿಬಿರದಲ್ಲಿ (ಮೇಲುಕಾಮನ ಹಳ್ಳಿ)ದಿಂದ ಆಗಮಿಸಲಿದ್ದಾನೆ.

 ಇನ್ನು 12 ಆನೆಗಳ ಪೈಕಿ ಯಾವುದಕ್ಕಾದರೂ ಸಮಸ್ಯೆ ಉಂಟಾದರೆ ಹೆಚ್ಚುವರಿಯಾಗಿ ಆಯ್ಕೆಯಾಗಿರುವ ಲಕ್ಷ್ಮಿ ಹಾಗೂ ರೋಹಿತ್‌ ದಸರಾ ಗಜಪಡೆ ಸೇರಿಕೊಳ್ಳಲಿದ್ದಾರೆ. ಇನ್ನು ಕಳೆದ ವರ್ಷ ದಸರೆಯಲ್ಲಿ ಪಾಲ್ಗೊಂಡಿದ್ದ ಪ್ರಶಾಂತ, ದ್ರೋಣ ಮತ್ತು ಚೈತ್ರಾ ಆನೆಗಳು ಈ ಬಾರಿ ಗಜಪಡೆಯಲ್ಲಿ ಸ್ಥಾನ ಪಡೆದಿಲ್ಲ.