ಕೋಸಿಗೆ ಸಿಂಪಡಿಸಲು ಡ್ರಂನಲ್ಲಿ ಇಟ್ಟಿದ್ದ ಕೀಟನಾಶಕ ಸೇವಿಸಿ ಆನೆ ವಾಪಸ್ ಹೋಗುತ್ತಿದ್ದಾಗ ಆನೆ ಸೋಲಾರ್ ತಂತಿ ಮೇಲೆ ಕುಸಿದು ಬಿದ್ದು ಸಾವನಪ್ಪಿದ ಘಟನೆ ಚಾಮರಾಜನಗರದಲ್ಲಿ ನಡೆದಿದೆ.
ಚಾಮರಾಜನಗರ(ಜ.11): ಕೋಸಿಗೆ ಸಿಂಪಡಿಸಲು ಡ್ರಂನಲ್ಲಿ ಮಿಶ್ರ ಮಾಡಿಟ್ಟಿದ್ದ ಕೀಟನಾಟಕ ಸೇವನೆ ಮಾಡಿ ಆನೆಯೊಂದು ಮೃತಪಟ್ಟಿರುವ ಘಟನೆ ತಾಲೂಕಿನ ಕುಳ್ಳೂರು (ಬೂದಿಪಡಗ ರಂಗಸಂದ್ರ)ದಲ್ಲಿ ಶುಕ್ರವಾರ ನಡೆದಿದೆ.
ಗ್ರಾಮದ ಶಿವರುದ್ರೇಗೌಡ ಎಂಬವರ ಜಮೀನಿನಲ್ಲಿ ಆನೆ ಮೃತದೇಹ ಪತ್ತೆಯಾಗಿದ್ದು, ಅಂದಾಜು 40-45 ವರ್ಷವಾಗಿದೆ ಎಂದು ಅಂದಾಜಿಸಲಾಗಿದೆ. ಕೋಸಿಗೆ ಸಿಂಪಡಿಸಲು ಡ್ರಂನಲ್ಲಿ ಇಟ್ಟಿದ್ದ ಕೀಟನಾಶಕ ಸೇವಿಸಿ ಆನೆ ವಾಪಸ್ ಹೋಗುತ್ತಿದ್ದಾಗ ಆನೆ ಸೋಲಾರ್ ತಂತಿ ಮೇಲೆ ಕುಸಿದು ಬಿದ್ದು ಸಾವನಪ್ಪಿದೆ ಎಂದು ಪುಣಜನೂರು ಆರ್‌ಎಫ್‌ಓ ಕಾಂತರಾಜು ಅವರು ಸ್ವಷ್ಟಪಡಿಸಿದ್ದಾರೆ.
4 ವರ್ಷದ ನಂತರ ಗಗನಚುಕ್ಕಿ ಜಲಪಾತೋತ್ಸವ..! ಸಂಭ್ರಮಕ್ಕೆ ದಿನಗಣನೆ..!
ಈ ಸಂಬಂಧ ಜಮೀನು ಮಾಲೀಕ ಶಿವರುದ್ರೇಗೌಡ ಅವರನ್ನು ಬಂಧಿಸಲಾಗಿದೆ. ಸ್ಥಳಕ್ಕೆ ಬಿಆರ್‌ಟಿ ಡಿಎಫ್‌ಒ ಮನೋಜ್ ಕುಮಾರ್, ಎಸಿಎಫ್ ರಮೇಶ್, ಪುಣಜನೂರು ಆರ್‌ಎಫ್‌ಒ ಕಾಂತರಾಜು, ಸೆಸ್ಕಾಂ ಪಿಎಸ್‌ಐ ಸುನೀಲ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಡಾ. ಮೂರ್ತಿ ಅವರು ಮರಣೋತ್ತರ ಪರೀಕ್ಷೆ ನಡೆಸಿದರು.
