Haveri: ಹಾನಗಲ್‌ನಲ್ಲಿ ಒಂಟಿ ಸಲಗ ಪ್ರತ್ಯಕ್ಷ: ಆತಂಕದಲ್ಲಿ ಜನತೆ
* ಹಾವೇರಿ ಜಿಲ್ಲೆಯ ಹಾನಗಲ್ಲ ಪಟ್ಟಣದ ಕಂಬಳಗೇರಿ ಕೆರೆಯಲ್ಲಿ ಒಂಟಿ ಸಲಗ ಪ್ರತ್ಯಕ್ಷ
* 16- 17 ವಯೋಮಾನದ ಆನೆ
* ಜನರಿಗೆ ಹೆದರಿ ತನ್ನ ರಕ್ಷಣೆಗಾಗಿ ನೀರಿನಿಂದ ಹೊರಬಾರದ ಆನೆ
ಹಾನಗಲ್ಲ(ಫೆ.09): ಪಟ್ಟಣದಿಂದ ಕೂಗಳತೆ ದೂರಲ್ಲಿರುವ ಕಂಬಳಗೇರಿ ಕೆರೆಯಲ್ಲಿ ಒಂಟಿ ಸಲಗವೊಂದು(Elephant) ನೆಲೆಯೂರಿದ್ದು ಅರಣ್ಯ ಇಲಾಖೆ(Forest Department) ಸಿಬ್ಬಂದಿಯಿಂದ ಅದನ್ನು ಕಾಡಿಗಟ್ಟುವ ಕಾರ್ಯ ನಡೆಯುತ್ತಿದೆ.
ಮಂಗಳವಾರ ಬೆಳಗ್ಗೆ ಕಂಬಳಗೇರಿ ಕೆರೆಯಲ್ಲಿ 16- 17 ವಯೋಮಾನದ ಆನೆಯೊಂದು ಕಾಣಿಸಿಕೊಂಡ ಸುದ್ದಿ ಸಾರ್ವಜನಿಕರಿಂದ ತಿಳಿದ ಕೂಡಲೇ ಅರಣ್ಯ ಇಲಾಖೆ ಸಿಬ್ಬಂದಿ ಧಾವಿಸಿ ಆನೆ ಊರಿಗೆ ಬರದಂತೆ ತಡೆಯಲು ಮುಂದಾಗಿದ್ದಾರೆ. ಆನೆಯನ್ನು ಬೆದರಿಸಿ ಕೆರೆಯಿಂದ ಹೊರ ತರಲು ಮಾಡುತ್ತಿರುವ ಯತ್ನ ಇನ್ನೂ ಫಲ ನೀಡಿಲ್ಲ. ಆದರೆ, ಜನರಿಗೆ ಹೆದರಿದ ಆನೆ ತನ್ನ ರಕ್ಷಣೆಗಾಗಿ ನೀರಿನಿಂದಲೇ ಹೊರ ಬರುತ್ತಿಲ್ಲ. ಅರಣ್ಯ ಇಲಾಖೆಯ ಸಿಬ್ಬಂದಿಗಳ ಹೇಳಿಕೆ ಪ್ರಕಾರ ಸೂರ್ಯಾಸ್ಥದ ನಂತರ ಕತ್ತಲೆಯಲ್ಲಿ ಅದು ಬಂದ ದಾರಿಯಲ್ಲೇ ಹೋಗಬಹುದು ಎನ್ನುತ್ತಾರೆ.
ಹಾಸನದಲ್ಲಿ ಅರಣ್ಯ ಇಲಾಖೆ ಕಾರ್ಯಾಚರಣೆ : ಒಂಟಿ ಸಲಗ ಸೆರೆ
ಎರಡು ಆನೆಗಳು ಜೊತೆಯಾಗಿ ಬಂದಿರಬಹುದು ಎಂದು ಊಹಿಸಲಾಗಿದೆಯಾದರೂ ಇನ್ನೊಂದು ಆನೆ ಪತ್ತೆಯಾಗಿಲ್ಲ. ಕಳೆದ ಒಂದು ತಿಂಗಳಿನಿಂದ ಹಾನಗಲ್ಲ(Hanagal) ತಾಲೂಕಿನ ವಿವಿಧೆಡೆ ಕಾಡಾನೆ ಹಾವಳಿ ಹೆಚ್ಚುತ್ತಿದ್ದು, ರೈತರ(Farmers) ಬೆಳೆ ಹಾನಿಯೂ(Crop Loss) ಸಂಭವಿಸಿದೆ. ರೈತರಿಗೆ ಪರಿಹಾರ ನೀಡುವಂತೆ ಇಲಾಖೆಗೆ ಮಾಹಿತಿಯನ್ನೂ ನೀಡಲಾಗಿದೆ. ಇತ್ತೀಚಿಗೆ ಮುದ್ದಿನಕೊಪ್ಪ ಗ್ರಾಮದ ಬಳಿ ಆನೆಯೊಂದು ಪುಂಡಾಟ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಪೊಲೀಸ್(Police) ಸಿಬ್ಬಂದಿ ಕೂಡ ಸ್ಥಳದಲ್ಲಿದ್ದು ಜನರನ್ನು ದೂರ ಕಳಿಸುತ್ತಿದ್ದಾರೆ. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ.ಬಿ. ಬಸವರಾಜಪ್ಪ, ವಲಯ ಅರಣ್ಯಾಧಿಕಾರಿ ಶಿವರಾಜ ಮಠದ, ಉಪ ಅರಣ್ಯಾಧಿಕಾರಿ ಎಸ್.ಎಂ. ತಳವಾರ, ಸಿಬ್ಬಂದಿಗಳಾದ ವಿ.ಆರ್. ಪಾಟೀಲ, ರಫೀಕ ಝಂಡೇದ್, ಮಂಜುನಾಥ ಚವ್ಹಾಣ, ಶ್ರೀಶೈಲ ಕಳಸದ, ಸಂತೋಷ ಸವಣೂರ ಆನೆಯನ್ನು ಸುರಕ್ಷಿತವಾಗಿ ಕಾಡಿಗೆ ಕಳಿಸುವ ಯತ್ನದಲ್ಲಿ ತೊಡಗಿದ್ದಾರೆ. ಹಾವೇರಿ ಜಿಲ್ಲಾ ಉಪ ಸಂರಕ್ಷಣಾಧಿಕಾರಿ ಎಸ್.ಎ. ಬಾಲಚಂದ್ರ ಅವರೂ ಕೂಡ ಸ್ಥಳಕ್ಕೆ ಆಗಮಿಸಿದ್ದಾರೆ.
ಗಿರಿಜನ ಪುನರ್ವಸತಿ ಶಾಲೆ ಆವರಣಕ್ಕೆ ನುಗ್ಗಿದ ಆನೆ!
ಹುಣಸೂರು(Hunsur): ಒಂಟಿ ಸಲಗವೊಂದು ತಾಲೂಕಿನ ನಾಗಪುರ ಗಿರಿಜನ ಪುನರ್ವಸತಿ ಕೇಂದ್ರದ ಸರ್ಕಾರಿ ಪ್ರೌಢಶಾಲೆಯ ಆವರಣದೊಳಗೆ ನುಗ್ಗಿ ಗುರುವಾರ ದಾಂಧಲೆ ನಡೆಸಿದ್ದು, ಶಿಕ್ಷಕರ ಮುಂಜಾಗ್ರತೆ ಹಾಗೂ ಮಕ್ಕಳ ಸಮಯಪ್ರಜ್ಞೆಯಿಂದ ಆಗಬಹುದಿದ್ದ ಭಾರೀ ಅನಾಹುತ ತಪ್ಪಿದೆ.
ಶಾಲೆ ಮುಂಭಾಗದ ಮುಖ್ಯರಸ್ತೆಯಲ್ಲಿ ಒಂಟಿ ಸಲಗ ಬರುತ್ತಿರುವುದನ್ನು ಕಂಡ ಹಾಡಿ ಜನರು ಅದರತ್ತ ಕಲ್ಲು ತೂರಿ, ಕೂಗಾಡಿ ಅದನ್ನು ಓಡಿಸಲು ಯತ್ನಿಸಿದ್ದಾರೆ. ಈ ವೇಳೆ ಕಾಡಿನತ್ತ ತೆರಳುತ್ತಿದ್ದ ಆನೆ, ಕೋಪಗೊಂಡ ಆನೆ ಶಾಲಾ ಆವರಣದ ಕಾಂಪೌಂಡ್ ಗೇಟನ್ನು ನೆಲಕ್ಕೆ ಕುಕ್ಕಿ, ಆವರಣ ಪ್ರವೇಶಿಸಿದೆ. ಅಲ್ಲಿದ್ದ ಸೈಕಲ್ ಸ್ಟ್ಯಾಂಡ್ ಹಾಗೂ ಬೈಕ್‌ವೊಂದನ್ನು ಜಖಂಗೊಳಿಸಿದೆ.
ರೈಲಿಗೆ ಸಿಲುಕಿ ಒಂಟಿ ಸಲಗ ಸಾವು : 5 ಕಿ.ಮೀ ಆನೆ ಎಳೆದೊಯ್ದ ಟ್ರೈನ್
ಆನೆ ಶಾಲೆಯತ್ತ(School) ನುಗ್ಗುತ್ತಿರುವುದನ್ನು ಗಮನಿಸಿದ ಶಿಕ್ಷಕರು, ಮಕ್ಕಳು(Children) ಶಾಲಾ ಕೊಠಡಿಗಳ ಒಳಗೆ ಸೇರಿಸಿ, ಬಾಗಿಲುಗಳನ್ನು ಮುಚ್ಚಿ ನಿಶ್ಯಬ್ಧವಾಗಿರುವಂತೆ ಸೂಚಿಸಿದ್ದಾರೆ. ಬಹುತೇಕ ಗಿರಿಜನ ಮಕ್ಕಳೇ ಇದ್ದ ಕಾರಣ, ಸಂದರ್ಭವನ್ನು ಅರಿತ ಚಿಣ್ಣರು ಮೌನವಾಗಿ ಕುಳಿತ್ತಿದ್ದಾರೆ. ಕೊನೆಗೆ ಆವರಣದಲ್ಲಿ ದಾಂಧಲೆ ನಡೆಸಿದ ಆನೆ ಬಳಿಕ ಕಾಡು ಸೇರಿಕೊಂಡಿದೆ.
ಮರ ಹತ್ತುತ್ತಿದ್ದ ರೈತನನ್ನು ಎಳೆದು ಕೊಂದ ಕಾಡಾನೆ
ಹುಣಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನದಂಚಿನ(Nagarhole National Park) ಗ್ರಾಮದಲ್ಲಿ ಒಂಟಿ ಸಲಗದ ದಾಳಿಗೆ ರೈತನೊರ್ವ ಬಲಿಯಾಗಿರುವ ಘಟನೆ ಮೈಸೂರು(Mysuru) ಜಿಲ್ಲೆ ಹುಣಸೂರು ತಾಲೂಕಿನ ಕೊಳುವಿಗೆ ಗ್ರಾಮದಲ್ಲಿ ಬುಧವಾರ ರಾತ್ರಿ ಜರುಗಿದೆ. ಹೋಬಳಿಯ ಕೊಳುವಿಗೆ ನಿವಾಸಿ ರಾಜೇಶ್ (50) ಮೃತಪಟ್ಟವರು(Death).
ರಾಸುಗಳಿಗೆ ಮೇವು ಹಾಕಲು ಹುಲ್ಲಿನ ಮೆದೆ ಬಳಿ ತೆರಳಿದ್ದಾರೆ. ಆಗ ಕತ್ತಲಲ್ಲೆ ರಾಗಿ ಮೆದೆ ಬಳಿ ಹುಲ್ಲು ಮೇಯುತ್ತಿದ್ದ ಸಲಗ ಘೀಳಿಟ್ಟಿದೆ. ತಕ್ಷಣ ರಾಜೇಶ್ ಓಡಿ ಹೋಗಿ ಮರ ಹತ್ತುವ ವೇಳೆ ಆತನನ್ನು ಸೊಂಡಿನಲಿನಿಂದ ಎಳೆದು ಬಿಸಾಡಿದೆ.
ಇನ್ನೊಂದೆಡೆ ಹುಣಸೂರು-ನಾಗರಹೊಳೆ ರಸ್ತೆಯ ಗಿರಿಜನ ನಾಗಾಪುರ ಪುನರ್ವಸತಿ ಕೇಂದ್ರದದ 1ನೇ ಬ್ಲಾಕ್‌ನಲ್ಲಿ ಗುರುವಾರ ಮುಂಜಾನೆ ಮೂರು ಆನೆಗಳು ಕಾಡಾನೆಗಳು ಕಾಣಿಸಿಕೊಂಡಿವೆ. ಒಂದು ಸಲಗವು ಮನೆಯೊಂದಕ್ಕೆ ಹಾನಿ ಮಾಡಿದೆ.