ಎಲ್ಲೆಂದರಲ್ಲಿ ಕಸ ಹಾಕಿದ್ರೆ ಅಲ್ಲೇ ಎಲೆಕ್ಟ್ರಾನಿಕ್ ದಂಡ ರಸೀದಿ..!
ಎಲ್ಲೆಂದರಲ್ಲಿ ಕಸ ಹಾಕುವವರಿಗೆ ದಂಡ ಹಾಕುವ ಪ್ರಕ್ರಿಯೆ ಸರಳೀಕರಿಸಲು ಕಡ್ಡಾಯವಾಗಿ ಎಲೆಕ್ಟ್ರಾನಿಕ್ ಮುದ್ರಿತ ದಂಡ ರಸೀದಿ ನೀಡಲು ತೀರ್ಮಾನಿಸಲಾಗಿದೆ ಎಂದು ಬಿಬಿಎಂಪಿ ಘನತ್ಯಾಜ್ಯ ವಿಭಾಗದ ವಿಶೇಷ ಆಯುಕ್ತ ಡಿ.ರಂದೀಪ್ ತಿಳಿಸಿದ್ದಾರೆ.
ಬೆಂಗಳೂರು(ಜ.28): ನಗರದಲ್ಲಿ ಎಲ್ಲೆಂದರಲ್ಲಿ ಕಸ ಎಸೆಯುವ, ಸಾರ್ವ ಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜಿಸುವ ಹಾಗೂ ನಿಷೇಧಿತ ಪ್ಲಾಸ್ಟಿಕ್ ಬಳಸುವವರಿಗೆ ದಂಡ ವಿಧಿಸುವ ಪ್ರಕ್ರಿಯೆ ಸರಳೀಕರಣ ಮಾಡಲು ಹಾ ಗೂ ಸೋರಿಕೆ ತಪ್ಪಿಸುವ ಉದ್ದೇಶದಿಂದ ಫೆಬ್ರವರಿಯಿಂದ ಕಡ್ಡಾಯವಾಗಿ ಎಲೆಕ್ಟ್ರಾನಿಕ್ ಮುದ್ರಿತ ದಂಡ ರಸೀದಿ ನೀಡಲು ತೀರ್ಮಾನಿಸಲಾಗಿದೆ ಎಂದು ಬಿಬಿಎಂಪಿ ಘನತ್ಯಾಜ್ಯ ವಿಭಾಗದ ವಿಶೇಷ ಆಯುಕ್ತ ಡಿ.ರಂದೀಪ್ ತಿಳಿಸಿದ್ದಾರೆ.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾ ಡಿದ ಅವರು, ಈವರೆಗೆ ದಂಡಕ್ಕೆ ಒಳಗಾದ ವ್ಯಕ್ತಿ ಅಥವಾ ಸಂಸ್ಥೆಗೆ ಕೈ ಬರಹದಲ್ಲಿ ಪಾಲಿಕೆಯಿಂದ ದಂಡದ ರಸೀದಿ ನೀಡಲಾಗುತ್ತಿತ್ತು. ಫೆಬ್ರವರಿ ಯಿಂದ ಕಡ್ಡಾಯವಾಗಿ ಎಲೆಕ್ಟ್ರಾನಿಕ್ ಮುದ್ರಿತ ರಸೀದಿ ನೀಡುವುದಕ್ಕೆ ಸೂಚನೆ ನೀಡಲಾಗಿದೆ. ಯಾವುದೇ ಕಾರಣಕ್ಕೂ ಕೈ ಬರಹದಲ್ಲಿ ದಂಡ ರಸೀದಿ ನೀಡದಂತೆ ಆರೋಗ್ಯಾಧಿಕಾರಿಗಳಿಗೆ ಹಾಗೂ ಮಾರ್ಷಲ್‌ಗಳಿಗೆ ಸೂಚನೆ ನೀಡಲಾಗಿದೆ .ಎಲೆಕ್ಟ್ರಾನಿಕ್ ಮುದ್ರಿತ ದಂಡ ರಸೀದಿ ನೀಡು ವುದರಿಂದ ದಂಡ ಮಾಹಿತಿ ಸುಲಭವಾಗಿ ಲಭ್ಯ ವಾಗಲಿದೆ. ಸೋರಿಕೆ ತಪ್ಪಿಸುವುದರ ಜತೆಗೆ ನಿಗ ದಿತ ಪ್ರಮಾಣದಲ್ಲಿ ದಂಡ ವಸೂಲಿಗೆ ಸಹಕಾರಿಯಾಗಲಿದೆ.
ಸಾರ್ವಜನಿಕರ ಸೊತ್ತು ರಕ್ಷಣೆ ಆಧುನಿಕ ಲಾಕರ್, ಕದಿಯೋಕೆ ಬಂದ್ರೆ ಮೆಸೇಜ್ ಹೋಗುತ್ತೆ
ಜತೆಗೆ ಆನ್‌ಲೈನ್ ಮೂಲಕ ಸಹ ದಂಡ ಸಂಗ್ರಹಿಸಬಹುದು. ನೇರವಾಗಿ ಬ್ಯಾಂಕ್ ಖಾತೆಗೆ ದಂಡದ ಮೊತ್ತ ಜಮೆಯಾಗಲಿದೆ ಎಂದು ವಿವರಿಸಿದರು. ಎಚ್‌ಡಿಎಫ್‌ಸಿ ಜತೆ ಒಪ್ಪಂದ: ಈಗಾಗಲೇ ಪ್ರತಿ ವಾರ್ಡ್‌ನ ಹಿರಿಯ ಆರೋಗ್ಯಾಧಿಕಾರಿಗಳು ದಂ ಡದ ರಸೀದಿ ನೀಡುವ ಯಂತ್ರವನ್ನು ವಿತರಿಸಲಾಗಿದೆ. ಕಿರಿಯ ಅಧಿಕಾರಿಗಳಿಗೆ ಹಾಗೂ ಮಾರ್ಷಲ್‌ಗಳಿಗೆ ಒಟ್ಟು ೪೦೦ ಯಂತ್ರಗಳ ಅವಶ್ಯ ಕತೆ ಇದೆ. ಈ ಪೈಕಿ ೨೦೦ ಯಂತ್ರಗಳನ್ನು ಎಚ್ ಡಿಎಫ್‌ಸಿ ಬ್ಯಾಂಕ್ ಉಚಿತವಾಗಿ ನೀಡಲಿದೆ.
ಅದಕ್ಕೆ ಪ್ರತಿಯಾಗಿ ಪಾಲಿಕೆ ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ಐದು ಕೋಟಿ ರು. ಠೇವಣಿ ಮಾಡು ವ ಒಪ್ಪಂದ ಮಾಡಿಕೊಂಡಿದೆ ಎಂದು ತಿಳಿಸಿದರು. ಆರೋಗ್ಯಾಧಿಕಾರಿಗಳು ಹಾಗೂ ಮಾರ್ಷಲ್ ಗಳು ಪರಿಣಾಮಕಾರಿಯಾಗಿ ದಂಡ ಹಾಕುವುದಕ್ಕೆ ಸಂಗ್ರಹಿಸುವ ದಂಡದ ಪ್ರಮಾಣದಲ್ಲಿ ಶೇ.೫ರಷ್ಟು ಪ್ರೋತ್ಸಾಹ ಭತ್ಯೆ ನೀಡುವುದಕ್ಕೆ ತೀರ್ಮಾನಿಸಲಾ ಗಿದೆ. ಈಗಾಗಲೇ ಮಾರ್ಷಲ್‌ಗಳಿಗೆ ನೀಡಲಾ ಗುತ್ತಿದ್ದು, ಇನ್ನು ಮುಂದೆ ಆರೋಗ್ಯಾಧಿಕಾರಿಗ ಳಿಗೂ ನೀಡಲಾಗುವುದು ಎಂದು ವಿವರಿಸಿದ್ದಾರೆ.