Bengaluru: ಎಲೆಕ್ಟ್ರಾನಿಕ್‌ ಸಿಟಿ ಫ್ಲೈಓವರ್‌ ಜಾಮ್‌; ಆಫೀಸ್‌ ಕ್ಯಾಬ್‌ ರೋಡಲ್ಲೇ ಬಿಟ್ಟು ಟೆಕ್ಕಿಗಳ ನಟರಾಜ ಸರ್ವೀಸ್‌!

ಬೆಂಗಳೂರಿನಲ್ಲಿ ಬುಧವಾರ ರಾತ್ರಿ ಭಾರೀ ಮಳೆಯಿಂದಾಗಿ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಭಾರೀ ಟ್ರಾಫಿಕ್ ಜಾಮ್ ಉಂಟಾಯಿತು. ಫ್ಲೈಓವರ್ ಮುಚ್ಚಿದ್ದರಿಂದ ಟೆಕ್ಕಿಗಳು ಸೇರಿದಂತೆ ಸಾವಿರಾರು ಜನರು ಗಂಟೆಗಟ್ಟಲೆ ಸಿಲುಕಿಕೊಂಡರು, ಕೆಲವರು ಕ್ಯಾಬ್‌ಗಳಿಂದ ಇಳಿದು ಮನೆಗೆ ನಡೆದುಕೊಂಡು ಹೋದರು.

Electronic City flyover traffic Jam for 2 hours Bengaluru techies walk back home san

ಬೆಂಗಳೂರು (ಅ.24): ಹೇಳೋಕೆ ಮಾತ್ರ ಐಟಿಸಿಟಿ, ನೆಟ್ಟಗೆ ಮೂಲಭೂತ ಸೌಕರ್ಯ ಕಲ್ಪಿಸದ ರಾಜ್ಯದ ವಿವಿಧ ಸರ್ಕಾರಗಳಿಂದ ಬೆಂಗಳೂರು ಇಂದು ವಿಶ್ವಮಟ್ಟದಲ್ಲಿ ತಲೆತಗ್ಗಿಸುವಂತಾಗಿದೆ. ಬೆಂಗಳೂರು ಟ್ರಾಫಿಕ್‌ ಅಂದರೆ ಹೆದರುವ ಸಮಯದಲ್ಲಿ, ಬುಧವಾರ ರಾತ್ರಿ ಮಳೆಯ ನಡುವೆ ಬೆಂಗಳೂರಿನ ಟ್ರಾಫಿಕ್‌ನ ನರಕ ವ್ಯವಸ್ಥೆಯ ದರ್ಶವಾಗಿದೆ. ಬೆಂಗಳೂರಿನ ಆಗ್ನೇಯ ಭಾಗದಲ್ಲಿ ಎಷ್ಟು ಅವ್ಯವಸ್ಥೆ ಕಂಡು ಬಂದಿತ್ತು ಎಂದರೆ,  ಎಲೆಕ್ಟ್ರಾನಿಕ್ ಸಿಟಿಯಲ್ಲಿ ಬುಧವಾರ ದೊಡ್ಡ ಮಟ್ಟದ ವಾಹನ ದಟ್ಟಣೆ ಉಂಟಾಗಿತ್ತು. ಸಾವಿರಾರು ನಿವಾಸಿಗಳು ಸಾಲುಗಟ್ಟಿ ನಿಂತರ ವಾಹನಗಳ ನಡುವೆ ಸಿಲುಕಿಕೊಂಡಿದ್ದರು. ಬುಧವಾರ ಸಂಜೆ ಬೆಂಗಳೂರಿನಲ್ಲಿ ಮತ್ತೊಂದು ಸುತ್ತಿನ ಭಾರೀ ಮಳೆ ಸುರಿದಿದ್ದು, ಹಲವು ಪ್ರದೇಶಗಳಲ್ಲಿ ಜಲಾವೃತವಾಗಿದ್ದರು. ಜಲಾವೃತಗೊಂಡಿದ್ದರಿಂದ ಬೆಂಗಳೂರು ಸಂಚಾರ ಪೊಲೀಸರು ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಅನ್ನು ಮುಚ್ಚಿದ್ದಾರೆ. ಪ್ರಕಟಣೆಯಲ್ಲಿ ಪೊಲೀಸರು, “ರೂಪೇನ ಅಗ್ರಹಾರದಲ್ಲಿ ಜಲಾವೃತವಾಗಿರುವ ಕಾರಣ ಎಲೆಕ್ಟ್ರಾನಿಕ್ ಸಿಟಿ ಮೇಲ್ಸೇತುವೆಯಲ್ಲಿ ನಗರಕ್ಕೆ ಒಳಬರುವ ಮಾರ್ಗವನ್ನು ಮುಚ್ಚಲಾಗಿದೆ. ಹೊರಹೋಗುವ ಮಾರ್ಗ ಎಂದಿನಂತೆಯೇ ಇದೆ' ಎಂದು ತಿಳಿಸಿತ್ತು.

ಇದರಿಂದಾಗಿ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದ್ದು, ಪ್ರಯಾಣಿಕರು 2 ಗಂಟೆಗೂ ಹೆಚ್ಚು ಕಾಲ ರಸ್ತೆಯಲ್ಲಿಯೇ ಕಾಯಬೇಕಾಯಿತು. ಟ್ರಾಫಿಕ್‌ ಯಾವುದೇ ರೀತಿಯಲ್ಲಿ ಮೂವ್‌ ಆಗುವ ಲಕ್ಷಣ ಕಾಣದೇ ಇದ್ದಾಗ, ಟೆಕ್ಕಿಗಳು ಕಂಪನಿಗಳು ಒದಗಿಸಿದ ಕ್ಯಾಬ್‌ಗಳಿಂದ ಹೊರಬಂದು ಮನೆಗೆ ನಡೆದುಕೊಂಡೇ ಹೋಗಲು ನಿರ್ಧರಿಸಿದ್ದರು.

ಟೆಕ್ಕಿಗಳ ಆಕ್ರೋಶ: ಎಕ್ಸ್‌ನಲ್ಲಿ ಈ ಬಗ್ಗೆ ಬರೆದುಕೊಂಡಿರುವ ಟೆಕ್ಕಿಯೊಬ್ಬರು, 'ಎಲೆಕ್ಟ್ರಾನಿಕ್‌ ಸಿಟಿ ಫ್ಲೈಓವರ್‌ ಕಳೆದ ಒಂದೂವರೆ ಗಂಟೆಯಿಂದ ಫುಲ್‌ ಜಾಮ್‌ ಆಗಿದೆ. 30 ಕಿಲೋಮೀಟರ್‌ ದೂರದಲ್ಲಿರುವ ನನ್ನ ಮನೆಗೆ ನಾನು ರೀಚ್‌ ಆಗಲೇಬೇಕಿದೆ. ಸಂಜೆ 5.20ಕ್ಕೆ ನಾನು ಕಂಪನಿಯಿಂದ ಲಾಗ್‌ಔಟ್‌ ಮಾಡಿದ್ದೆ. ಈಗಲೂ ಕೂಡ ರಸ್ತೆಯಲ್ಲಿ ಸಿಕ್ಕಿಹಾಕಿಕೊಂಡಿದ್ದೇನೆ. ಅಕ್ಕಪಕ್ಕದ ಹೆಚ್ಚಿನ ಕಂಪನಿಯ ಉದ್ಯೋಗಿಗಳು ಕೂಡ ಇಲ್ಲಿಯೇ ಸಿಕ್ಕಿಹಾಕಿಕೊಂಡಿದ್ದಾರೆ. ಆಕ್ರೋಶಗೊಂಡಿರುವ ಟೆಕ್ಕಿಗಳು ಕ್ಯಾಬ್‌ನಿಂದ ಹೊರಬಂದು ನಡೆದುಕೊಂಡೇ ಮನೆಗೆ ಹೋಗಲು ತೀರ್ಮಾನ ಮಾಡಿದ್ದಾರೆ' ಎಂದು ಬರೆದುಕೊಂಡಿದ್ದರು.

Viral Video: ದಲಿತ ನಾಯಕ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಇದೆಂಥಾ ಅವಮಾನ!

'ಇದೊಂದು ಸಂಪೂರ್ಣ ಅವ್ಯವಸ್ಥೆ. ಈ ಪರಿಸ್ಥಿತಿಯಲ್ಲಿ ಏನಾದರೂ ಮೆಡಿಕಲ್‌ ಎಮರ್ಜೆನ್ಸಿ ಇದ್ದರೆ ಬದುಕುವ ಯಾವ ಸಾಧ್ಯತೆ ಕೂಡ ಇಲ್ಲ.ಮಡಿವಾಳ ಕಡೆಗೆ ಎಲೆಕ್ಟ್ರಾನಿಕ್ ಸಿಟಿ ಮೇಲ್ಸೇತುವೆ ಬಹುತೇಕ ಜಾಮ್ ಆಗಿದೆ. ಯಾವ ವಾಹನಗಳು ಕೂಡ ಚಲಿಸುತ್ತಿಲ್ಲ. ಕೇವಲ 2 ಕಿಲೋಮೀಟರ್‌ ದೂರಕ್ಕಾಗಿ 2.30 ಗಂಟೆಗಳ ಕಾಲ ನಿಂತಿದ್ದೇವೆ' ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ.

ರಾಜಣ್ಣ ಅವರೇ, ಕೃಷ್ಣ ಶೂದ್ರನೋ, ಬ್ರಾಹ್ಮಣನೋ ಅನ್ನೋ ವಿಚಾರ ಬಿಡಿ; ಈ ಬಡಜನರಿಗೆ ಕುಡಿಯಲು ಶುದ್ದ ನೀರು ಕೊಡಿ!

"ನಿನ್ನೆ ಅದು ಯಲಹಂಕ, ಹೆಣ್ಣೂರು ನಂತರ ಹೊರಮಾವು, ಆಗರ ಮತ್ತು ಇಂದು ಅದು ಸಿಲ್ಕ್ಬೋರ್ಡ್, ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್" ಮತ್ತೊಬ್ಬರು ಬರೆದುಕೊಂಡಿದ್ದಾರೆ. ಈ ನಡುವೆ ಅಕ್ಟೋಬರ್ 23 ರಂದು ಸಂಚಾರ ದಟ್ಟಣೆ ಉಂಟಾಗಬಹುದು ಎಂದು ಕರ್ನಾಟಕ ಸರ್ಕಾರ ಈಗಾಗಲೇ ಖಾಸಗಿ ಕಂಪನಿಗಳಿಗೆ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡಲು ಸಲಹೆ ನೀಡಿತ್ತು.
 

Latest Videos
Follow Us:
Download App:
  • android
  • ios