ಚುನಾವಣೆ ವೇಳೆ ಕಾಂಗ್ರೆಸ್‌ ಘೋಷಿಸಿದ್ದ ಬಿಟ್ಟಿಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ವಿದ್ಯುತ್‌ ದರ ಏರಿಕೆ, ಜನರಿಗೆ ಕರೆಂಟ್‌ ಶಾಕ್‌ ಹೊಡೆಸಿದೆ ಎಂದು ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಎಂ.ಬಿ. ಬಸವರಾಜ ಆರೋಪಿಸಿದ್ದಾರೆ.

\ಹೂವಿನಹಡಗಲಿ (ಜೂ.16) ಚುನಾವಣೆ ವೇಳೆ ಕಾಂಗ್ರೆಸ್‌ ಘೋಷಿಸಿದ್ದ ಬಿಟ್ಟಿಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ವಿದ್ಯುತ್‌ ದರ ಏರಿಕೆ, ಜನರಿಗೆ ಕರೆಂಟ್‌ ಶಾಕ್‌ ಹೊಡೆಸಿದೆ ಎಂದು ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಎಂ.ಬಿ. ಬಸವರಾಜ ಆರೋಪಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಾಂಗ್ರೆಸ್‌ ಸರ್ಕಾರ ಅ​ಧಿಕಾರಕ್ಕೆ ಬಂದ ಕೂಡಲೇ ಮಿತಿ ಮೀರಿದ ವಿದ್ಯುತ್‌ ದರ ಏರಿಸಿ ತನ್ನ ಗೋಸುಂಬೆತನ ಪ್ರದರ್ಶನ ಮಾಡುತ್ತಿದೆ. ವಿದ್ಯುತ್‌ ದರ ಏರಿಕೆಯಿಂದ ಸಾಮಾನ್ಯ ಜನಜೀವನದ ಮೇಲೆ ಸಾಕಷ್ಟುಪರಿಣಾಮ ಬೀರಿದೆ. ಬಡವರು ವಿದ್ಯುತ್‌ ಬಳಕೆಯನ್ನೇ ಮಾಡಲಾರದ ಸ್ಥಿತಿಗೆ ತಂದಿದೆ. ಬಿಟ್ಟಿಯೋಜನೆಯ ನಷ್ಟದ ಹಣವನ್ನು ವಿದ್ಯುತ್‌ ದರ ಏರಿಕೆಯಲ್ಲಿ ತುಂಬಿಕೊಳ್ಳಲು ಹೊರಟಿದೆ ಎಂದು ದೂರಿದ್ದಾರೆ.

ವಿದ್ಯುತ್‌ ದರವನ್ನು ಇಳಿಸಲಿ: ಕಾಂಗ್ರೆಸ್‌ ಸರ್ಕಾರಕ್ಕೆ ಕೋಟ ಸವಾಲು

ಒಂದು ಕಡೆ ಬಿಟ್ಟಿಯೋಜನೆಗಳನ್ನು ಘೋಷಿಸಿ ಇನ್ನೊಂದು ಕಡೆ ದೈನಂದಿನ ಅಗತ್ಯ ವಸ್ತುಗಳ ದರವನ್ನು ಗಗನಕ್ಕೇರಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮನ್ನು ವ್ಯರ್ಥವಾಗಿ ಸಮರ್ಥಿಸಿಕೊಳ್ಳಲು ವಿದ್ಯುತ್‌ ಏರಿಕೆಯನ್ನು ಬಿಜೆಪಿ ಮೇಲೆ ಹೊರಿಸಲು ಹೊರಟಿದ್ದಾರೆ. ಒಂದು ವೇಳೆ ಬಿಜೆಪಿ ಆಡಳಿತಾವಧಿಯಲ್ಲೇ ವಿದ್ಯುತ್‌ ದರ ಏರಿಸಿದ್ದರೆ, ಸಿದ್ದರಾಮಯ್ಯ ಪಠ್ಯಪುಸ್ತಕ ಪರಿಷ್ಕರಣೆ, ಗೋಹತ್ಯೆ ನಿಷೇಧ ಕಾಯಿದೆ ರದ್ದುಪಡಿಸುತ್ತೇವೆಂದು ಹೇಳಿಕೆ ನೀಡಿರುವ ಹಾಗೆ, ವಿದ್ಯುತ್‌, ಸಿಲಿಂಡರ್‌, ಪೆಟ್ರೋಲ್‌, ಡೀಸೆಲ್‌ ದರವನ್ನೂ ಪರಿಷ್ಕರಿಸಿ ಇಳಿಕೆ ಮಾಡಿ, ತಮ್ಮ ಜನಪರ ಕಾಳಜಿಯನ್ನು ಮೆರೆಯಲಿ ಎಂದು ಸವಾಲು ಹಾಕಿದ್ದಾರೆ.

ವಿದ್ಯುತ್‌ ದರ ಹೆಚ್ಚಳ ಖಂಡಿಸಿ ನಿವಾಸಿಗಳ ಪ್ರತಿಭಟನೆ

ಗಂಗಾವತಿ: ವಿದ್ಯುತ್‌ ಯುನಿಟ್‌ ದರ ಹೆಚ್ಚಳ ಖಂಡಿಸಿ ವಿವಿಧ ವಾರ್ಡ್‌ ನಿವಾಸಿಗಳು ನಗರದ ಜೆಸ್ಕಾಂ ವಿಭಾಗೀಯ ಕಚೇರಿ ಮುಂದೆ ಗುರುವಾರ ಪ್ರತಿಭಟನೆ ನಡೆಸಿದರು. ನಗರದ 3 ಮತ್ತು 4ನೇ ವಾರ್ಡ್‌ ನಿವಾಸಿಗಳು ಕಚೇರಿ ಮುಂದೆ ಪ್ರತಿಭಟಿಸಿ ಮನವಿಯನ್ನು ರಿಯಾಜ್‌ ಅಹ್ಮದರಿಗೆ ಸಲ್ಲಿಸಿದರು.

ಮಹಾಲಿಂಗಪ್ಪ ಬನ್ನಿಕೊಪ್ಪ ಮಾತನಾಡಿ,ಉಚಿತ ವಿದ್ಯುತ್‌ ನೀಡುವ ಭರವಸೆ ಮೇಲೆ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ ಸರ್ಕಾರ, ಯೋಜನೆ ಜಾರಿಗೊಳಿಸುವ ಮುನ್ನವೇ ಮೂರು ಪಟ್ಟು ದರ ಹೆಚ್ಚಿಸಿದೆ.ಇದರಿಂದ ಜನಸಾಮಾನ್ಯರಿಗೆ ಹೊರೆಯಾಗಿದ್ದು,ಉಚಿತ ಯೋಜನೆ ನೆಪದಲ್ಲಿ ಗ್ರಾಹಕರಿಗೆ ಅನ್ಯಾಯ ಮಾಡಿದೆ.ಈ ಹಿಂದೆ ಇದ್ದ ಬಿಲ್‌ ವ್ಯವಸ್ಥೆ ಜಾರಿಗೊಳಿಸಬೇಕಿದ್ದು,ಪರಿಹಾರಕ್ಕೆ 7ದಿನದ ಗಡವು ನೀಡಲಾಗುವುದು.ನಿರ್ಲಕ್ಷಿಸಿದರೆ ವಿದ್ಯುತ್‌ ಬಿಲ್‌ ನಿರಾಕರಣೆ ಪ್ರತಿಭಟನೆ ಶುರು ಮಾಡಲಾಗುವುದು ಎಂದರು.

ಫ್ರೀ ವಿದ್ಯುತ್‌ ತಲೆ​ಬಿಸಿ ಮಧ್ಯೆ ದರ ಏರಿಸಿ ಮೆಸ್ಕಾಂ ಶಾಕ್‌!

ನಿವಾಸಿಗಳಾದ ಟಿ.ಆಂಜನೇಯ,ಅಮರೇಗೌಡ, ಮೇಗೂರು ರಾಘವೇಂದ್ರ, ಶ್ರವಣಕುಮಾರ ರಾಯ್ಕರ,ಸೂರ್ಯ ಪ್ರತಾಪ ಶಾಸ್ತ್ರಿ, ಸಿ.ವಿ.ಬಡಿಗೇರ, ಜವಳಿ ಮಹೇಶ, ಜಂಬಣ್ಣ ಐಲಿ, ಶ್ರೀಶೈಲ ಪಟ್ಟಣಶೆಟ್ಚಿ, ವಿದ್ಯಾಧರ,ಬಿ.ಮನೋಹರ ಇತರರಿದ್ದರು.